ಗೇಟಿಗೆ ಬೀಗ ಹಾಕಿದ ವಿಚಾರವಾಗಿ ಅತ್ತೆ ವಿರುದ್ದ ಪೊಲೀಸ್​ ದೂರು ಕೊಟ್ಟ ಸೊಸೆ?

ಹಂಚಿಕೊಳ್ಳಿ
WhatsApp Facebook X Telegram
Woman Calls 112 After Mother-in-Law Locks Gate
Woman Calls 112 After Mother-in-Law Locks Gate

Woman Calls 112 ಶಿವಮೊಗ್ಗ: ಜಿಲ್ಲೆಯಾದ್ಯಂತ ಸಣ್ಣಪುಟ್ಟ ಕೌಟುಂಬಿಕ ಹಾಗೂ ಕ್ಷುಲ್ಲಕ ವಿಚಾರಗಳಿಗೂ ಸಾರ್ವಜನಿಕರು ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಅತ್ತೆ-ಸೊಸೆಯ ನಡುವಿನ ಗೇಟು ಬೀಗದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗವೊಂದು ನಗರದಲ್ಲಿ ನಡೆದಿದೆ.

ಶಿವಮೊಗ್ಗ : ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ತಪ್ಪಿದ ಅನಾಹುತ

ನಗರದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ತಮ್ಮ ಅತ್ತೆಯು ಮನೆಯ ಗೇಟಿಗೆ ಬೀಗ ಹಾಕಿಕೊಂಡಿದ್ದು, ಇದರಿಂದಾಗಿ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗಿದೆ ಎಂದು ಸೊಸೆ ಪೊಲೀಸರ ಮೊರೆ ಹೋಗಿದ್ದರು.

ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಸ್ಥಳದಲ್ಲಿದ್ದ ದೂರುದಾರರ ಅತ್ತೆಗೆ ಸೂಕ್ತ ತಿಳುವಳಿಕೆ ಹೇಳಿ, ಮುಚ್ಚಿದ್ದ ಗೇಟಿನ ಬೀಗವನ್ನು ತೆಗೆಸಿದ್ದಾರೆ. ನಂತರ ಇಬ್ಬರಿಗೂ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ದೂರನ್ನು ಸ್ಥಳದಲ್ಲೇ ಮುಕ್ತಾಯಗೊಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor