ಹೊಸನಗರ ಕೇಸ್​, ಉಡುಪಿ, ಮಂಗಳೂರು ಜಿಲ್ಲೆಯ ಇಬ್ಬರು ಅರೆಸ್ಟ್! 6 ಗಂಟೆಯಲ್ಲಿ ಇಷ್ಟೆಲ್ಲಾ ನಡೀತು

ಹಂಚಿಕೊಳ್ಳಿ
WhatsApp Facebook X Telegram
Hosanagara police

Hosanagara police / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಟೀ ಕುಡಿಯಲು ಹೋಟೆಲ್​ಗೆ ಬಂದು ಅಲ್ಲಿನ ಓನರ್​ ಕತ್ತಿನಲ್ಲಿದ್ದ ತಾಳಿ ಸರ ಕದ್ದೊಯ್ದ ಘಟನೆ ಹೊಸನಗರದ ಸೊನಲೆಯಲ್ಲಿ ರಿಪೋರ್ಟ್ ಆಗಿದೆ. ಈ ಕೇಸ್​ ನಲ್ಲಿ ಪೊಲೀಸರು ಆರೋಪಿಗಳನ್ನ 6 ಗಂಟೆಯೊಳಗೆ ಆರೆಸ್ಟ್ ಮಾಡಿದ್ದಾರೆ.

ಮಂಗಳವಾರ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ನಡೆದ ಘಟನೆ ಇದು. ಪೊಲೀಸರ ಮಾಹಿತಿ ಪ್ರಕಾರ ಬೆಳೆಗ್ಗೆ 6.30 ಸಮಯಕ್ಕೆ ಹೋಟೆಲ್​ನ ಹತ್ತಿರ ಸುಜುಕಿ ಬೈಕ್​ನಲ್ಲಿ ಇಬ್ಬರು ಬಂದಿದ್ದಾರೆ.ಟೀ ಕುಡಿಯಲು ಬಂದಿರ ಬೇಕು ಎಂದು ಹೋಟೆಲ್​ನ ಓನರ್​, ತಮ್ಮ ಪಾಡಿಗೆ ಹೋಟೆಲ್​ ಮುಂದಿನ ಅಂಗಳ ಗುಡಿಸಲು ಶುರುಮಾಡಿದ್ದಾರೆ.

ಈ ವೇಳೆ ಆಕೆಯ ಕತ್ತಿನಲ್ಲಿದ್ದ ತಾಳಿಸರವನ್ನು ಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿ ಟೆಕ್ನಿಕಲ್​ ಎವಿಡೆನ್ಸ್​ ಕಲೆಹಾಕಿದ್ದಾರೆ.

ಅಲ್ಲದೆ ಕೆಲವೇ ಹೊತ್ತಿನೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ತೌಸೀಫ್ (33) ಹಾಗೂ ಮಂಗಳೂರಿನ ರೋಶನ್ (40) ಆರೋಪಿಗಳು.

ಪೋಲೀಸರು ಮನೆಯೊಂದರ ಸಂಧಿಯಲ್ಲಿ ಅಡಗಿದ್ದ ಆರೋಪಿಗಳನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದು, ಅವರ ಕೆಲಸ ಶ್ಲಾಘನೆಗೆ ಪೂರಕವಾಗಿದೆ. ಇನ್ನೂ ಆರೋಪಿಗಳು ಎಳೆದ ರಭಸಕ್ಕೆ 22 ಗ್ರಾಂ ಮಾಂಗಲ್ಯ ಸರ ತುಂಡಾಗಿದ್ದು 12 ಗ್ರಾಂ ಆರೋಪಿಗಳ ಕೈ ಸೇರಿದ್ದು 10 ಗ್ರಾಂ ಗಾಯತ್ರಿಯವರ ಬಳಿ ಉಳಿದಿತ್ತು ಎನ್ನಲಾಗಿದೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor