ಜುಲೈ 18ರಂದು ಜಿಲ್ಲೆಯಲ್ಲಿಯೇ ಸಿಗಲಿದೆ ಶ್ರೀಸೋಮನಾಥ ಜ್ಯೋತಿರ್ಲಿಂಗದ ದರ್ಶನ! ವಿವರ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
sagara news malenadutoday image
sagara news malenadutoday image

Somnath Jyotirlinga Darshan / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಾಗರ / ಆರ್ಟ್ ಆಫ್ ಲಿವಿಂಗ್ ವತಿಯಿಂದ ಇದೇ ಜುಲೈ 18ರಂದು ಸಂಜೆ 4ರಿಂದ ರಾತ್ರಿ 7.30ರವರೆಗೆ ನಗರದ ಬ್ರಾಹ್ಮಣ ಸಭಾಭವನದಲ್ಲಿ ಶ್ರೀಸೋಮನಾಥ ಜ್ಯೋತಿರ್ಲಿಂಗದ ದರ್ಶನ ಹಾಗೂ ರುದ್ರಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ

ಈ ಬಗ್ಗೆ ಸಂಸ್ಥೆ ಪ್ರಮುಖರಾದ ಬಿ.ವಿ. ರವೀಂದ್ರನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇಶದಾದ್ಯಂತ ಸಂಚರಿಸುತ್ತಿರುವ ಸೋಮನಾಥ ಜ್ಯೋತಿರ್ಲಿಂಗ ಸಾಗರಕ್ಕೂ ಆಗಮಿಸುತ್ತಿದೆ.

ಈ ಹಿನ್ನೆಲೆಯಲ್ಲು, ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು . ಸಂಜೆ 4ರಿಂದ 6ರವರೆಗೆ ರುದ್ರಪೂಜೆ ಹಾಗೂ ನಂತರ ಸಾರ್ವಜನಿಕ ದರ್ಶನ ನಡೆಯಲಿದೆ. ಮಾಹಿತಿಗೆ ಮೊ.9902336446, 7353765598 ಸಂಪರ್ಕಿಸಬಹುದು ಎಂದು ತಿಳಿಸಿದರು.

ಶಿಕ್ಷಕಿ ಜಯಮಾಲಾ ಮೋಹನ್, ಎಂ.ಎಸ್.ರಮೇಶ್, ಸವಿತಾ ಭದ್ರೇಶ್, ಶಿವಪ್ರಕಾಶ್ ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor