ಜಾಗೃತಿ ಅಭಿಯಾನದ ನಡುವೆ ಶಿವಮೊಗ್ಗ ಪೊಲೀಸರಿಂದ ರೂಟ್​ ಮಾರ್ಚ್​! ಕಾರಣ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
police root march at ripponpete shivamogga

ripponpete shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಿಪ್ಪನ್‌ಪೇಟೆ: ಹಬ್ಬಗಳಿಗೆ ಇನ್ನೂ ಎರಡು ತಿಂಗಳುಗಳಿರುವಾಗಲೇ ರಿಪ್ಪನ್‌ ಪೇಟೆಯಲ್ಲಿ ಪೊಲೀಸ್ ಪಥಸಂಚಲನ ನಡೆಸಿರುವುದು ಕುತೂಹಲ ಮೂಡಿಸಿದೆ. ನಿನ್ನೆ ದಿನ ರಿಪ್ಪನ್​ಪೇಟೆಯಲ್ಲಿ ಪೊಲೀಸ್ ಇಲಾಖೆ ರೂಟ್​ ಮಾರ್ಚ್​ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿತು.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ತಮ್ಮ ಅಧಿಕೃತ ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ ನೀಡಿದ್ದು, ಜಾಗೃತಿ ಮೂಡಿಸುವ ಸಲುವಾಗಿ ರೂಟ್​ ಮಾರ್ಚ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ರಿಪ್ಪನ್‌ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ನೇತೃತ್ವದಲ್ಲಿ ತಮ್ಮ ಪೊಲೀಸ್ ಸಿಬ್ಬಂದಿ, ಎಸ್.ಎ.ಎಫ್ ವಿಶೇಷ ಪೊಲೀಸ್ ಪಡೆಯ ಪೊಲೀಸರು ಠಾಣೆಯಿಂದ ಹೊರಟು ವಿನಾಯಕ ವೃತ್ತದ. ಮೂಲಕ ಹೊಸನಗರ-ಸಾಗರ- ತೀರ್ಥಹಳ್ಳಿ, ಶಿವಮೊಗ್ಗ ನಾಲ್ಕು ರಸ್ತೆಯಲ್ಲಿ ಜಾಥಾ ನಡೆಸಿ ಜನರಲ್ಲಿ ಶಾಂತಿ ಸುವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸಿದರು. ರಿಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ, ಎಸ್ ಎಎಫ್ ವಿಶೇಷ ಪೊಲೀಸ್ ಪಡೆಯ ಇನ್‌ಸ್ಪೆಕ್ಟರ್‌ಕಿರಣ್. ಎಎಸ್‌ಐಗಳಾದ ಹಾಲಪ್ಪ, ವಿನೋದ್ ಹಾಜರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor