ರಿಪ್ಪನ್‌ಪೇಟೆ ಕಾರು ಮತ್ತು ಬೈಕ್ ಡಿಕ್ಕಿ, ಸವಾರನಿಗೆ ಗಾಯ

ಹಂಚಿಕೊಳ್ಳಿ
WhatsApp Facebook X Telegram
ರಿಪ್ಪನ್‌ಪೇಟೆ ಕಾರು ಮತ್ತು ಬೈಕ್ ಡಿಕ್ಕಿ, ಸವಾರನಿಗೆ ಗಾಯ Ripponpet Car and Bike Collision, Rider Severely Injured
ರಿಪ್ಪನ್‌ಪೇಟೆ ಕಾರು ಮತ್ತು ಬೈಕ್ ಡಿಕ್ಕಿ, ಸವಾರನಿಗೆ ಗಾಯ Ripponpet Car and Bike Collision, Rider Severely Injured

ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / ಪಟ್ಟಣದ ಸಮೀಪದ ಶಿವಮೊಗ್ಗ ರಸ್ತೆಯಲ್ಲಿರುವ ಸಿದ್ದಪ್ಪನಗುಡಿ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಪ್ರದೀಪ್ ಗಾಯಗೊಂಡ ಯುವಕ.

ಕಾರ್ಯಕ್ರಮವೊಂದಕ್ಕೆ ಹೊರಟಿದ್ದ ಪ್ರದೀಪ್​ ಬಾಳೂರು ಸಮೀಪದ ಕಾಳೇಶ್ವರ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಶಿವಮೊಗ್ಗ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಕಾರು ಚಾಲಕ ಪ್ರಯತ್ನಿಸಿದ್ದಾನೆ. ಅದೆ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಪ್ರದೀಪ್ ಬೈಕ್‌ಗೆ ಕಾರು ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶಿವಮೊಗ್ಗ ಮೂಲದವರಿಗೆ ಸೇರಿದ ಟಾಟಾ ಕರ್ವ್ ಕಾರು ರಿಪ್ಪನ್‌ಪೇಟೆ ಮಾರ್ಗವಾಗಿ ಚಲಿಸುತ್ತಿತ್ತು. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಘಟನೆಯಲ್ಲಿ ಪ್ರದೀಪ್ ಅವರ ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ರಿಪ್ಪನ್‌ಪೇಟೆ ಕಾರು ಮತ್ತು ಬೈಕ್ ಡಿಕ್ಕಿ, ಸವಾರನಿಗೆ ಗಾಯ Ripponpet Car and Bike Collision, Rider Severely Injured
ರಿಪ್ಪನ್‌ಪೇಟೆ ಕಾರು ಮತ್ತು ಬೈಕ್ ಡಿಕ್ಕಿ, ಸವಾರನಿಗೆ ಗಾಯ Ripponpet: Car and Bike Collision, Rider Severely Injured

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor