SHIVAMOGGA NEWS TODAY

ಬಲು ಜೋರಾಗಿದೆ ಶಿವಮೊಗ್ಗದಲ್ಲಿ ರೌಡಿಗಳ ಫೀಲ್ಡಿಂಗ್​? 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಶಿವಮೊಗ್ಗದ ಪಾತಕ ಲೋಕ ಮತ್ತೆ ಗರಿಗೆದರ ತೊಡಗಿದೆ. ದ್ವೇಷ ಪ್ರತಿಕಾರಕ್ಕಾಗಿ ಮಚ್ಚು ಬೀಸಲು ಫೀಲ್ಡ್ ಗಿಳಿದಿವೆ ತಂಡಗಳು. ಶಿವಮೊಗ್ಗ ಹೊರ ವಲಯದ ಏರಿಯಾಗಳೇ ರೌಡಿಗಳ ಟಾರ್ಗೇಟ್ ಪ್ಲೇಸ್ ಗಳಾಗಿವೆ. ಶಿವಮೊಗ್ಗದ ನೆಲ ತೊರೆದು ಹೊರಗಿನಿಂದಲೇ ಶಿವಮೊಗ್ಗದ ಮೇಲೆ ಕಣ್ಣು ನೆಟ್ಟಿರುವ ರೌಡಿಗಳು ತಮ್ಮ ಎದುರಾಳಿಗಳ ವೇರ್ ಎಬೌಟ್ಸ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಶಿವಮೊಗ್ಗ : ಮಿಳಘಟ್ಟದಲ್ಲಿ 26 ವರ್ಷದ ಮಹಿಳೆ ಹಾಗೂ 3 ವರ್ಷದ ಮಗು ನಾಪತ್ತೆ : ಮಾಹಿತಿಗಾಗಿ ಪೊಲೀಸ್ ಪ್ರಕಟಣೆ ಗಮನಿಸಿ

Shimoga Rowdy Sheeters ಯಾಸಿನ್ ಖುರೇಷಿ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ನೇರವಾಗಿ ಫೀಲ್ಡ್ ಗಳಿದಿದೆ ಅಭಿಮಾನಿ ಬಳಗ ಎಂಬುದು ಮಲೆನಾಡು ಟುಡೆಗೆ ಲಭ್ಯವಾಗಿರುವ ಮಾಹಿತಿಯಾಗಿದೆ. ರೌಡಿ ಆದೀಲ್ ವಿರುದ್ಧ ಸೇಡು ತೀರಿಸಿಕೊಳ್ಳಲು, ಆತನ ಚಲನ ವಲಯದ ಮೇಲೆ ಹದ್ದಿನ ಕಣ್ಣಿಡಲು ದೊಡ್ಡ ತಂಡ ಸಿದ್ದವಾಗಿದೆ ಎನ್ನಲಾಗಿದೆ. ಶಿವಮೊಗ್ಗದ ವಿದ್ಯಾನಗರದ ಮತ್ತೂರು ರಸ್ತೆ, ಕಂಟ್ರಿಕ್ಲಬ್ ಏರಿಯಾ ಮತ್ತು ರಾಜೀವ್ ಗಾಂಧಿ ಬಡಾವಣೆಯ ರಸ್ತೆಗಳಲ್ಲಿ ಫೀಲ್ಡಿಂಗ್ ಬಲು ಜೋರಾಗಿದೆ.

ಮೊದಲೆಲ್ಲಾ ಕೋರ್ಟ್ ಡೇಟ್ ಗಳ ಮೇಲೆ ಕಣ್ಣಿಡುತ್ತಿದ್ದ ಎದುರಾಳಿ ರೌಡಿಗಳು ಈಗ ಅದನ್ನೇ ಡ್ರಾಪ್ ಮಾಡಿದ್ದಾರೆ. ಯಾಕೆಂದರೆ ಕೋರ್ಟ್ ಗೆ ಬರುವ ರೌಡಿಗಳು ಈಗ ಅಬ್ ಸ್ಕ್ಯಾಂಡ್ ಆಗಿದ್ದಾರೆ. ಕೋರ್ಟ್ ಗೆ ಹಾಜರಾಗದಿದ್ದರೇನಂತೆ ಜೀವ ಉಳಿಯಬೇಕು ಎಂದು ಕೋರ್ಟ್ ನಿಂದಲೇ ದೂರ ಉಳಿದಿದ್ದಾರೆ. ಯಾವಾಗ ಹಂದಿ ಅಣ್ಣಿ ಕೋರ್ಟ್ ಗೆ ಹಾಜರಾಗುವಾಗ ಕಾಡಾ ಕಾರ್ತಿ ಅಂಡ್ ಟೀಂ ನಿಂದ ಕೊಲೆ ಮಾಡಿತ್ತು. 

ಇದಾದ ಬಳಿಕ ಹಂದಿ ಅಣ್ಣಿಯನ್ನ ಕೊಂದಿದ್ದ ಆರೋಪಿಗಳ ಗ್ಯಾಂಗ್‌ನ ಇಬ್ಬರ ಮೇಲೆ ಚಿಕ್ಕಲ್ ರಮೇಶನ ತಂಡ ದಾಳಿ ಮಾಡಿತ್ತು.ದಾವಣಗೆರೆ ಹೊನ್ನಾಳಿ ತಾಲ್ಲೂಕಿನ ಚೀಲೂರು ಸಮೀಪ  ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯ ಮೇಲೆ ರಮೇಶ್‌ ಆಂಡ್‌ ಗ್ಯಾಂಗ್‌ ಅಟ್ಯಾಕ್‌ ನಡೆಸಿತ್ತು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದ, ಇನ್ನೊಬ್ಬ ಗಂಭೀರನಾಗಿದ್ದ. ಅಣ್ಣಿ ಮರ್ಡರ್‌ ಕೇಸ್‌ನಲ್ಲಿ ಬೇಲ್‌ ಮೇಲೆ ಬಿಡುಗಡೆಯಾಗಿದ್ದ ಇಬ್ಬರು, ಶಿವಮೊಗ್ಗ ಕೋರ್ಟ್‌ನಲ್ಲಿ ಕೇಸ್‌ಗೆ ಅಟೆಂಡ್‌ ಆಗಿ ವಾಪಸ್‌ ಹೋಗುವ ಸಂದರ್ಭದಲ್ಲಿಯೇ ಈ ದಾಳಿ ನಡೆದಿತ್ತು. ಈ ಕಾರಣಗಳಿಂದಾಗಿ ರೌಡಿಗಳು ಕೋರ್ಟ್ ಗೆ ಹಾಜರಾಗುವುದನ್ನೇ ಕೈ ಬಿಟ್ಟಿದ್ದಾರೆ.

ಕಾಡಾ ಕಾರ್ತಿ ಬಿಡುಗಡೆಯಾದರೂ ಕೋರ್ಟ್ ಗೆ ಹಾಜರಾಗುತ್ತಿಲ್ಲ. ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಸದ್ಯಕ್ಕೆ ಅಬ್ ಸ್ಕ್ಯಾಂಡ್ ಆಗಿದ್ದಾನೆ. ಅಂಬು ಅಂಡ್ ಟೀಂ ಹೊರಗಿನಿಂದಲೇ ಸ್ಕೆಚ್ ರೂಪಿಸುತ್ತಿದ್ದರೆ, ರಮೇಶ್ ಬೆಂಗಳೂರು ಜೈಲಿನಿಂದಲೇ ಕಾಡಾ ವಿರುದ್ದ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾನೆ. ಇದರ ನಡುವೆ ವೈಟ್ ಕಾಲರ್ ರೌಡಿಗಳು ಕೂಡ ಊರು ತೊರೆದು ಶಿವಮೊಗ್ಗದ ಮೇಲೆ ಕಣ್ಣು ನೆಟ್ಟಿವೆ. 

ಎಸ್ಪಿ ಮಿಥುನ್ ಕುಮಾರ್ ಇದ್ದಾಗ 25 ಕ್ಕೂ ಹೆಚ್ಚು ರೌಡಿಗಳ  ಕಾಲಿಗೆ ಗುಂಡು ಹಾರಿಸಿದ್ದರು. ಆದರೆ ರೌಡಿಗಳಿಗೆ ಪೊಲೀಸರ ಭಯ ಇಲ್ಲವೆಂಬಂತಾಗಿದೆ. ರೌಡಿ ಮಾರ್ಕೇಟ್ ಲೋಕಿ ಅಣ್ಣನ ಕೊಲೆಗೆ ಪ್ರತಿಕಾರಕ್ಕಾಗಿ ಹೊಂಚು ಹಾಕಿರುವುದು ಗುಟ್ಟಾಗಿ ಉಳಿದಿಲ್ಲ. ನಟೋರಿಯಸ್ ರೌಡಿಗಳೆಲ್ಲಾ ಊರು ತೊರೆದಿದ್ದಾರೆ. ಶಿವಮೊಗ್ಗ ನಗರದಲ್ಲಿ ರೌಡಿಗಳ ಫೀಲ್ಡಿಂಗ್ ಬಲು ಜೋರಾಗಿದೆ. ಪೊಲೀಸರಿಗೆ ಕೊಂಚ ಸುಳಿವು ಕೊಡದೆ, ಸ್ಕೆಚ್ ರೂಪಿಸುತ್ತಿರುವುದು ನಿಜಕ್ಕೂ ಆಚ್ಚರಿ ಮೂಡಿಸಿದೆ. ಎರುರಾಳಿಗಳ ಚಲನ ವಲನ ಮಾಹಿತಿ ಕಲೆ ಹಾಕುವುದರಲ್ಲಿ ಮುಂದಾಗಿರುವ ರೌಡಿ ಪಡೆಗಳು ಗುಪ್ತಚರ ಇಲಾಖೆಯನ್ನು ಮೀರಿಸುವಂತೆ ಎದುರಾಳಿಗಳಿಗೆ ಶ್ಯಾಡೋ ಪೊಲೀಸಿಂಗ್ ಮಾಡುತ್ತಿದ್ದಾರೆ. ಸಧ್ಯದಲ್ಲೇ ಶಿವಮೊಗ್ಗದಲ್ಲಿ ಯಾರು ಮಚ್ಚಿನೇಟಿಗೆ ಬಲಿಯಾಗುತ್ತಾರೋ ಎಂಬ ಆತಂಕದಲ್ಲಿ ರೌಡಿಗಳಿದ್ದಾರೆ. ಹಳೆ ಶಿವಮೊಗ್ಗ ಭಾಗ ಮತ್ತು ಬೈಪಾಸ್ ರಸ್ತೆ ಮತ್ತೂರು ರಸ್ತೆಗಳಲ್ಲಿ ಈ ಬಗ್ಗೆ ಚರ್ಚೆಗಳು ಬಲು ಜೋರಾಗಿ ನಡೆಯುತ್ತಿದೆ.

Shimoga Rowdy Sheeters Fielding for Revenge

Shimoga Rowdy Sheeters Fielding for Revenge
Shimoga Rowdy Sheeters Fielding for Revenge

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.