ಒಂದೇ ಮನೆ ಇಬ್ಬರಿಗೆ ಬಾಡಿಗೆ: ಮಾಲೀಕ ಹಾಗೂ ಬಾಡಿಗೆದಾರರ ನಡುವೆ ಬೀದಿ ಜಗಳ!

ಹಂಚಿಕೊಳ್ಳಿ
WhatsApp Facebook X Telegram
Double Rental Fraud in Bhadravathi

ಭದ್ರಾವತಿ : ಒಂದೇ ಕಟ್ಟಡವನ್ನು ಇಬ್ಬರು ವ್ಯಕ್ತಿಗಳಿಗೆ ಬಾಡಿಗೆ ನೀಡಿರುವ ವಿಚಾರವಾಗಿ ಮಾಲೀಕ ಹಾಗೂ ಬಾಡಿಗೆದಾರರ ನಡುವೆ ಗಲಾಟೆ ನಡೆದಿರುವ ಘಟನೆ ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಶಿವಮೊಗ್ಗ : ಬಟ್ಟೆ ವ್ಯಾಪಾರಿಗೆ ಲಾಂಗ್ ತೋರಿಸಿ ಹಣ ಸುಲಿಗೆ, ಪ್ರಕರಣ ದಾಖಲು

ಘಟನೆಯ ವಿವರ

ಭದ್ರಾವತಿ ಹಳೇನಗರ ವ್ಯಾಪ್ತಿಯ ಸಾರ್ವಜನಿಕರೊಬ್ಬರು 112 ಗೆ ಕರೆ ಮಾಡಿ ಗಲಾಟೆಯ ಕುರಿತು ಮಾಹಿತಿ ನೀಡಿದ್ದರು. ಮಾಲೀಕರು ಒಂದೇ ಕಟ್ಟಡವನ್ನು ಇಬ್ಬರಿಗೆ ಬಾಡಿಗೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ ಎಂಬ ಕಾರಣಕ್ಕೆ ಸ್ಥಳದಲ್ಲಿ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. 

ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಇಆರ್‌ವಿ (ERV) ಸಿಬ್ಬಂದಿಗಳು, ಗಲಾಟೆ ಮಾಡುತ್ತಿದ್ದ ಗುಂಪನ್ನು ಚದುರಿಸಿ ಶಾಂತಿ ಕಾಪಾಡುವಂತೆ ಸೂಚನೆ ನೀಡಿದರು. ಸ್ಥಳದಲ್ಲೇ ಎರಡೂ ಕಡೆಯವರ ವಾದವನ್ನು ಆಲಿಸಿದ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಕಟ್ಟಡದ ಬಾಡಿಗೆ ವಿಚಾರವಾಗಿ ಉಂಟಾಗಿರುವ ಗೊಂದಲವನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಲು ಸೂಚಿಸಿದ ಪೊಲೀಸರು, ಎರಡೂ ಕಡೆಯವರು ಹಳೇನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳುವಳಿಕೆ ನೀಡಿದ್ದಾರೆ.

Double Rental Fraud in Bhadravathi

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor