ಎಪಿಎಂಸಿ ಕ್ಯಾಂಟೀನ್‌ನಲ್ಲಿ ಅಗ್ನಿ ಅವಘಡ; 80 ಚೀಲ ಅಕ್ಕಿ ಭಸ್ಮ, ₹6 ಲಕ್ಷಕ್ಕೂ ಅಧಿಕ ನಷ್ಟ

ಹಂಚಿಕೊಳ್ಳಿ
WhatsApp Facebook X Telegram
Bhadravathi APMC Canteen Fire 80 Rice Bags Destroyed, Over Rs 6 Lakh Loss
Bhadravathi APMC Canteen Fire 80 Rice Bags Destroyed, Over Rs 6 Lakh Loss

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ಎಪಿಎಂಸಿ ಪ್ರಾಂಗಣದಲ್ಲಿರುವ ಅನ್ನಪೂರ್ಣ ಕ್ಯಾಂಟೀನ್‌ ನಲ್ಲಿ ಕಳೆದ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ ನಷ್ಟವಾಗಿದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಅನ್ನಪೂರ್ಣ ಕ್ಯಾಂಟೀನ್‌ ನಲ್ಲಿ ಮಂಗಳವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದ್ದು, 6 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿತು.

ಎಪಿಎಂಸಿ ಕ್ಯಾಂಟೀನ್ ನಲ್ಲಿ ಅವಘಡ

ನಿತ್ಯದಂತೆ ಮಾಲೀಕ ಲೋಕೇಶ್ ಅವರು ಸಂಜೆ 7 ಗಂಟೆಗೆ ಕ್ಯಾಂಟೀನ್‌ಗೆ ಬೀಗ ಹಾಕಿಕೊಂಡು ತೆರಳಿದ್ದರು. ತಡರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, ಸುದ್ದಿತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ನಂದಿಸಿದರು. ಕ್ಯಾಂಟೀನ್‌ನಲ್ಲಿದ್ದ 25 ಕೆಜಿಯ 80 ಚೀಲ ಅಕ್ಕಿ ಬೆಂಕಿಗೆ ಆಹುತಿಯಾಗಿದೆ. ಫ್ರಿಜ್ ಸಂಪೂರ್ಣ ಹಾನಿಗೊಂಡಿದ್ದು, ಹಲವು ವಸ್ತುಗಳು ಹಾಗೂ ಪರಿಕರಗಳು ಸುಟ್ಟು ಕರಕಲಾಗಿವೆ.

ಮಾಲೀಕರ ಸಂಬಂಧಿಯೊಬ್ಬರು ನಿತ್ಯ ಕ್ಯಾಂಟೀನ್‌ನಲ್ಲೇ ಮಲಗುತ್ತಿದ್ದರು. ಘಟನೆ ನಡೆದ ರಾತ್ರಿ ಅವರು ಊರಿಗೆ ತೆರಳಿದ್ದರಿಂದ ಅಪಾಯ ತಪ್ಪಿದೆ. ಬೆಂಕಿಗಾಹುತಿಯಾದ ಕ್ಯಾಂಟೀನ್ ಪರಿಶೀಲಿಸಿದ ಎಪಿಎಂಸಿ ಕಾರ್ಯದರ್ಶಿ ಮಹೇಶ್ ಮಾತನಾಡಿ, ಮಾಲೀಕರ ದೂರು, ಇಲಾಖೆಯ ಎಂಜಿನಿಯರ್ ಹಾಗೂ ಅಗ್ನಿಶಾಮಕ ದಳದ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor