ಶಿವಮೊಗ್ಗ: ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಬೊಲೆರೋ ಪಿಕಪ್ ವಾಹನವೊಂದು ಹಿಂಭಾಗದಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ವಾಹನದಲ್ಲಿದ್ದ ಹತ್ತು ಪ್ರಯಾಣಿಕರು ಗಾಯಗೊಂಡಿರುವ ಘಟನೆ ರಿಪ್ಪನಪೇಟೆ-ಆನಂದಪುರ ರಸ್ತೆಯ ಬಾಳೂರು ಬಳಿ ನಡೆದಿದೆ.
ಬೊಲೆರೋ ಪಿಕಪ್ ವಾಹನದಲ್ಲಿ ಶಿಕಾರಿಪುರ ತಾಲೂಕಿನ ಓತಿನಕಟ್ಟೆ ಗ್ರಾಮದ ನಿವಾಸಿಗಳು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ-ಆನಂದಪುರ ಹೆದ್ದಾರಿಯ ಬಾಳೂರು ಸಾಗುತ್ತಿದ್ದಾಗ, ಕ್ಯಾಂಟರ್ ಲಾರಿಗೆ ಪಿಕಪ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಬೊಲೆರೋ ವಾಹನದ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ.
ಅಪಘಾತದ ಸದ್ದು ಕೇಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಹಾದಿಹೋಕರು ತಕ್ಷಣವೇ ಗಾಯಾಳುಗಳ ನೆರವಿಗೆ ಧಾವಿಸಿದರು. ಗಾಯಗೊಂಡಿದ್ದ ಹತ್ತು ಜನರನ್ನು ತಕ್ಷಣವೇ ಚಿಕಿತ್ಸೆಗಾಗಿ ರಿಪ್ಪನಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಿಪ್ಪನಪೇಟೆ ಠಾಣೆಯ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
