ಇನ್ನೋವಾ ಸೇರಿದಂತೆ ಓಲ್ಡ್​ ಮಂಡ್ಲಿಯ ಇಬ್ಬರು ರಿಪ್ಪನ್​ಪೇಟೆಯಲ್ಲಿ ಅರೆಸ್ಟ್!

ಹಂಚಿಕೊಳ್ಳಿ
WhatsApp Facebook X Telegram
Ripponpet Cattle Theft Case
Ripponpet Cattle Theft Case

Ripponpet Cattle Theft Case / ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / ಹೈಟೆಕ್​ ಕಾರುಗಳಲ್ಲಿ ಜಾನುವಾರು ಕಳವು ಮಾಡುತ್ತಿದ್ದ ಜಾಲವನ್ನು ರಿಪ್ಪನ್‌ಪೇಟೆ ಪಿಎಸ್‌ಐ ರಾಜುರೆಡ್ಡಿ ನೇತೃತ್ವದ ತಂಡ ಅರೆಸ್ಟ್​ ಮಾಡಿದೆ.

15 ದಿನಗಳ ಹಿಂದೆ ನಡೆದಿದ್ದ ದನ ಕಳ್ಳತನ ಪ್ರಕರಣದ ಸಂಬಂಧ ಇಲ್ಲಿನ ಪೊಲೀಸರು ಶಿವಮೊಗ್ಗ ಹಳೆಮಂಡ್ಡಿ ನಿವಾಸಿ ಅಮೀರ್​ ಸುಹೇಲ್ (26), ಮಹಮ್ಮದ್ ಇಸ್ರಾರ್ ಉಲ್ಲಾ ಖಾನ್ (20) ಎಂಬವರನ್ನು ಬಂಧಿಸಿದ್ದಾರೆ.

ಜುಲೈ 3 ರಂದು ರಾತ್ರಿ ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಗಿರಿಗೌಡ ಎಂಬುವರ ಮನೆಯ ಸಮೀಪ ದನಗಳ್ಳತನವಾಗಿತ್ತು.ಈ ಸಂಬಂಧ ಪ್ರತಿಭಟನೆ ವ್ಯಕ್ತಪಡಿಸಿ ದೂರು ಸಹ ನೀಡಲಾಗಿತ್ತು

ಹಿಂದೂ ಜಾಗರಣ ವೇದಿಕೆಯ ದೇವರಾಜ್ ಕೆರೆಹಳ್ಳಿ ನೀಡಿದ ದೂರಿನನ್ವಯ ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದ ತಂಡ, ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನೋವಾ ಕಾರನ್ನು ವಶಕ್ಕೆ ಪಡೆದಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor