ರಿಪ್ಪನ್‌ಪೇಟೆ:  ನಿಯಂತ್ರಣ ತಪ್ಪಿ ಮೊಟ್ಟೆ ಸಾಗಾಣಿಕೆ ವಾಹನ ಪಲ್ಟಿ: ರಸ್ತೆ ಪಾಲಾದ ಸಾವಿರಾರು ಮೊಟ್ಟೆಗಳು,

ಹಂಚಿಕೊಳ್ಳಿ
WhatsApp Facebook X Telegram
Egg Transport Vehicle Overturns in Ripponpet
Egg Transport Vehicle Overturns in Ripponpet

Egg Transport Vehicle ಹೊಸನಗರ:  ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದದಲ್ಲಿ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೋಳಿ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ತಲೆಕೆಳಗಾಗಿ ಬಿದ್ದ ಪರಿಣಾಮ, ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಮೊಟ್ಟೆಗಳು ರಸ್ತೆಯುದ್ದಕ್ಕೂ ಒಡೆದು ಹರಡಿವೆ.

ಅಡ್ಡಮತದಾನ! ಶಿವಮೊಗ್ಗದ ಇಬ್ಬರು ಶಾಸಕರಿಂದಲೇ ಕಾಂಗ್ರೆಸ್​ಗೆ ವೋಟ್ : ಆರ್​ಎಂ ಮಂಜುನಾಥ ಗೌಡ

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಈ ಅವಘಡ ನಡೆದಿದೆ. ಮಧ್ಯರಾತ್ರಿಯ ವೇಳೆಗೆ ವೇಗವಾಗಿ ಬಂದ ಸರಕು ವಾಹನವು ಚಾಲಕನ ಸ್ಟೀರಿಂಗ್ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಇದರ ತೀವ್ರತೆಗೆ ವಾಹನದಲ್ಲಿದ್ದ ಅರ್ಧಕ್ಕಿಂತಲೂ ಹೆಚ್ಚಿನ ಮೊಟ್ಟೆಗಳ ಕ್ರೇಟ್‌ಗಳು ರಸ್ತೆಗೆ ಬಿದ್ದು ಜಜ್ಜುಗುಜ್ಜಾಗಿದ್ದು, ಇಡೀ ರಸ್ತೆಯ ತುಂಬೆಲ್ಲಾ ಮೊಟ್ಟೆಯ ದ್ರವ ಹರಿದು ಹಳದಿಮಯವಾಗಿದೆ. 

ರಾತ್ರಿಯ ದಟ್ಟ ಕತ್ತಲೆಯಲ್ಲಿ ಅಪಘಾತ ಸಂಭವಿಸಿದರೂ ಸಹ, ಆ ಸಮಯದಲ್ಲಿ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರ ತೀರಾ ವಿರಳವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಲ್ಟಿಯಾದ ಈವಾಹನವು ಕುಂದಾಪುರ ಮೂಲದ ರಹಮತ್ತುಲ್ಲಾ ಎಂಬುವವರಿಗೆ ಸೇರಿದ್ದಾಗಿದೆ ಎಂದು ಗುರುತಿಸಲಾಗಿದೆ. 

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಹಾಗೂ ವಾಹನದ ಮಾಲೀಕರು ಸ್ಥಳಕ್ಕೆ ಧಾವಿಸಿ, ಕ್ರೇನ್‌ಗಳ ಸಹಾಯದಿಂದ ಪಲ್ಟಿಯಾಗಿದ್ದ ವಾಹನವನ್ನು ಮೇಲಕ್ಕೆತ್ತಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. 

Egg Transport Vehicle Overturns in Ripponpet 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor