ಪೇಟೆಯಲ್ಲಿ ಒಂದ್ಕೊಂದು ಹೊಡ್ಕೊಂಡ ಶಿರಸಿ ಹಾಗೂ ಹಿಂಡ್ಲೆಮನೆ ಕಾರು , ನಾಲ್ಕು ಜನಕ್ಕೆ ಗಾಯ

ಹಂಚಿಕೊಳ್ಳಿ
WhatsApp Facebook X Telegram
Head-on Collision Between Two Cars in Ripponpete ಪೇಟೆಯಲ್ಲಿ ಒಂದ್ಕೊಂದು ಹೊಡ್ಕೊಂಡ ಶಿರಸಿ ಹಾಗೂ ಹಿಂಡ್ಲೆಮನೆ ಕಾರು , ನಾಲ್ಕು ಜನಕ್ಕೆ ಗಾಯ

ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ರಿಪ್ಪನ್‌ಪೇಟೆ ಯಲ್ಲಿ ಒಂದು ಆಕ್ಸಿಡೆಂಟ್ ಆಗಿದೆ. ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡ್ಕಂಡಿವೆ. ಪೇಟೆಯ ವಿನಾಯಕ ಸರ್ಕಲ್​ನಲ್ಲಿ ಹೀಗಾಗಿತ್ತು. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 4 ಮಂದಿ ಗಾಯಗೊಂಡಿದ್ದರು. ಅವರನ್ನ ಸ್ಥಳೀಯರು ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಎರಡು ಕಾಡು ಡಿಕ್ಕಿಯಾಗುವುದರಲ್ಲಿ, ಇನ್ನೊಂದು ಬೈಕ್​ ಕೂಡ ಜಖಂ ಆಗಿದೆ.

ಒಂದ್ಕೊಂದು ಹೊಡ್ಕೊಂಡ ಶಿರಸಿ ಹಾಗೂ ಹಿಂಡ್ಲೆಮನೆ ಕಾರು

ಕೊಪ್ಪದ ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಕಾರು ಹಾಗೂ ಶಿರಸಿ ಮಾರ್ಗವಾಗಿ ಸಾಗುತ್ತಿದ್ದ ಮಾರುತಿ ಅಲ್ಟೊ ಕಾರಿನ ಮಧ್ಯೆ ಈ ಅಪಘಾತ ಸಂಭವಿಸಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಘಟನೆಗೆ ಪ್ರಮುಖ ಕಾರಣ ಎಂಬುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಗೊತ್ತಾಗ್ತಿದೆ.

ಇನ್ನೂ ಅಪಘಾತ ಸಂಭವಿಸಿದ ತಕ್ಷಣವೇ ವಾಹನಗಳಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರುತಿ ಅಲ್ಟೊ ಕಾರು ಹೊಸನಗರ ತಾಲ್ಲೂಕಿನ ಹಿಂಡ್ಲೆಮನೆ ಗ್ರಾಮದ ನಿವಾಸಿಗೆ ಸೇರಿದ್ದಾಗಿದ್ದು, ಐ20 ಕಾರು ಶಿರಸಿ ಮೂಲದವರದ್ದು ಅಂಥಾ ಗೊತ್ತಾಗಿದೆ.

ಅಪಘಾತದ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Head-on Collision Between Two Cars in Ripponpete ಪೇಟೆಯಲ್ಲಿ ಒಂದ್ಕೊಂದು ಹೊಡ್ಕೊಂಡ ಶಿರಸಿ ಹಾಗೂ ಹಿಂಡ್ಲೆಮನೆ ಕಾರು , ನಾಲ್ಕು ಜನಕ್ಕೆ ಗಾಯ
Head-on Collision Between Two Cars in Ripponpete ಪೇಟೆಯಲ್ಲಿ ಒಂದ್ಕೊಂದು ಹೊಡ್ಕೊಂಡ ಕಾರು , ನಾಲ್ಕು ಜನಕ್ಕೆ ಗಾಯ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor