ರಿಪ್ಪನ್‌ಪೇಟೆ: ಬಾಕಿ ಹಣ ಕೇಳಿದ್ದಕ್ಕೆ ಫ್ಯಾನ್ಸಿ ಸ್ಟೋರ್ ನೌಕರನ ಮೇಲೆ ಹಲ್ಲೆ,  ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಕೊನೆಯ ನವೀಕರಣ: 29 ಏಪ್ರಿಲ್ 2026, 1:57 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Ripponpete Fancy Store Employee Attacked
Ripponpete Fancy Store Employee Attacked

ರಿಪ್ಪನ್‌ಪೇಟೆ | ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಬಾಕಿ ಹಣದ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಫ್ಯಾನ್ಸಿ ಸ್ಟೋರ್ ನೌಕರನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಪಟ್ಟಣದ ವಿನಾಯಕ ವೃತ್ತದಲ್ಲಿರುವ ಮಾಜೀಷಾ ಫ್ಯಾನ್ಸಿ ಸ್ಟೋರ್ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಬಲು ಜೋರಾಗಿದೆ ಶಿವಮೊಗ್ಗದಲ್ಲಿ ರೌಡಿಗಳ ಫೀಲ್ಡಿಂಗ್​?  

ಕಳೆದ ಐದು ವರ್ಷಗಳಿಂದ ಮಾಜೀಷಾ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿರುವ ವಿನಯ್ ಪುರಿ (24) ಹಲ್ಲೆಗೊಳಗಾದ ನೌಕರ. ಇವರ ಮೇಲೆ ಅದೇ ಊರಿನ ಫ್ಯಾನ್ಸಿ ಸ್ಟೋರ್ ಒಂದರ ಮಾಲೀಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.  ಆರೋಪಿ ಆಗಾಗ್ಗೆ ಮಾಜೀಷಾ ಸ್ಟೋರ್‌ನಿಂದ ವಸ್ತುಗಳನ್ನು ಖರೀದಿಸುತ್ತಿದ್ದು, ದೀರ್ಘಕಾಲದಿಂದ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ.

ಈ ಹಿನ್ನೆಲೆ ಏಪ್ರಿಲ್​ 27ರಂದು ಆರೋಪಿ ಬಳಿ ವಿನಯ್​ ಬಾಕಿ ಹಣವನ್ನು ನೀಡುವಂತೆ ಕೇಳಿದ್ದಾನೆ, ಇದರಿಂದ ಕೋಪಗೊಂಡ ಆರೋಪಿ ನೌಕರ ವಿನಯ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ ವಿನಯ್ ಕಪಾಳಕ್ಕೆ ಹೊಡೆದು ಅಂಗಡಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾನೆ. ಹೊರಗಡೆ ಬಾ, ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಹಲ್ಲೆಯಿಂದಾಗಿ ಕಿವಿಯ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಗಾಯಾಳು ನೌಕರ ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

Ripponpete Fancy Store Employee Attacked

Ripponpete Fancy Store Employee Attacked
Ripponpete Fancy Store Employee Attacked
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor