ಮಲವಗೊಪ್ಪದಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿದ ದುಷ್ಕರ್ಮಿ!
ಶಿವಮೊಗ್ಗದ ಮಲವಗೊಪ್ಪ ಪೆಟ್ರೋಲ್ ಬಂಕ್ ಎದುರು 35 ವರ್ಷದ ವಿನೋದ್ ಎಂಬುವವರ ಮೇಲೆ ವಿಕ್ರಂ ಎಂಬಾತ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ್ದಾನೆ. ಗಂಭೀರ ಗಾಯಗೊಂಡ ವಿನೋದ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.