ಕೆಎಸ್​ಆರ್​ಟಿಸಿ ಬಸ್​ ಸ್ಟ್ಯಾಂಡ್​ನಲ್ಲಿ ಅಪರಿಚಿತ ಮಹಿಳೆಯ ಶವಪತ್ತೆ! ಕೈ ಮೇಲಿತ್ತು 2 ಹೆಸರುಗಳ ಹಚ್ಚೆ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:   ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಅನಾಮಧೇಯ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಆದರೆ ಮಹಿಳೆಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ, ಮೃತರ ಗುರುತು ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​  ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 

ಮಲಗಿದ್ದ ಸ್ಥಿತಿಯಲ್ಲಿ ಇಲ್ಲಿ ಪತ್ತೆಯಾಗಿದ್ದ  ಮಹಿಳೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸರು ಖಾಸಗಿ ಆಂಬುಲೆನ್ಸ್ ಮೂಲಕ ತಕ್ಷಣವೇ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಮಹಿಳೆ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಈ ವಿಚಾರವಾಗಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು ಮಹಿಳೆಯ ಗುರುತು ಪತ್ತೆಯಾದಲ್ಲಿ ಸುಳಿವು ನೀಡುವಂತೆ ಕೋರಿದೆ. 

ಮೃತ ಮಹಿಳೆಯ ವಿವರ

ಮೃತರ ವಯಸ್ಸು ಸುಮಾರು 35 ರಿಂದ 42 ವರ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಸರಿಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ ಮತ್ತು ದೃಢವಾದ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ ಸುಮಾರು 8 ಇಂಚು ಉದ್ದದ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಇದೆ. ಪ್ರಮುಖ ಗುರುತಾಗಿ, ಅವರ ಬಲಗೈನ ಒಳಭಾಗದಲ್ಲಿ ‘ಏ ರುದ್ರಮ್ಮ’ ಮತ್ತು ‘ತಿಮ್ಳೇಶ್’ ಎಂಬ ಹೆಸರಿನ ಹಚ್ಚೆ (Tattoo) ಗುರುತುಗಳಿವೆ.  

Unidentified Woman Found Dead at Shimoga KSRTC Bus Stand
Unidentified Woman Found Dead at Shimoga KSRTC Bus Stand

Unidentified Woman Found Dead at Shimoga KSRTC Bus Stand

ಅನಾಮಧೇಯ ಶವ, ಶಿವಮೊಗ್ಗ ಬಸ್ ನಿಲ್ದಾಣ, ವಾರಸುದಾರರ ಪತ್ತೆ, ದೊಡ್ಡಪೇಟೆ ಪೊಲೀಸ್, ಮೆಗ್ಗಾನ್ ಆಸ್ಪತ್ರೆ, ಹಚ್ಚೆ ಗುರುತು, ಮೃತದೇಹ ಮಾಹಿತಿ, KSRTC Bus Stand Shimoga, Unidentified Woman Body, Doddapete Police, Find Relatives, Tattoo Mark, Missing Person Information, Shimoga KSRTC Bus Stand

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Central Jail KSRTC Bus Stand Street Dog Attack Job Scam Areca Nut TheftPocket Picking Incident shivamogga cyber crime Man Killed by Own Buffaloshivamogga
today post Unidentified Woman Found Dead at Shimoga KSRTC Bus Stand
Share This Article