ಹೋಟೆಲ್​ನಲ್ಲಿ ಊಟವಿಲ್ಲ ಎಂದ ಮಾಲೀಕ : ಮಚ್ಚು ಬೀಸಿದ ಗ್ರಾಹಕ : ಏನಿದು ಘಟನೆ 

prathapa thirthahalli
Prathapa thirthahalli - content producer

Bhadravati news : ಭದ್ರಾವತಿಯ ವೀರಶೈವ ಸಭಾ ಭವನದ ಎದುರಿಗಿರುವ ‘ರಾಮಾವರಂ’ ಹೋಟೆಲ್ ಮಾಲೀಕರ ಮೇಲೆ, ಗ್ರಾಹಕನೊಬ್ಬ ಊಟ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಯತ್ನ ನಡೆಸಿರುವ ಘಟನೆ ಅಕ್ಟೋಬರ್ 9 ರ ರಾತ್ರಿ ನಡೆದಿದೆ. ಈ ಸಂಬಂಧ ಹೋಟೆಲ್ ಮಾಲೀಕರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಹೋಟೆಲ್​ ಮಾಲೀಕರು ಪ್ರತಿದಿನದಂತೆ ಅಂದು ರಾತ್ರಿ 10:00 ಗಂಟೆ ಸುಮಾರಿಗೆ ಹೋಟೆಲ್ ಮುಚ್ಚಲು ಸಿದ್ಧತೆ ನಡೆಸುತ್ತಿದ್ದರು. ಇದೇ ಸಮಯದಲ್ಲಿ, ವ್ಯಕ್ತಿಯೊಬ್ಬ ಕಬ್ಬಿಣದ ಮಚ್ಚು ಹಿಡಿದು ಹೋಟೆಲ್‌ಗೆ ಬಂದಿದ್ದಾನೆ. ನಂತರ ಮಾಲೀಕರ ಬಳಿ  ಊಟ ಇದೆಯಾ ಎಂದು ಕೇಳಿದ್ದಾನೆ. ಹೋಟೆಲ್ ಕ್ಲೋಸ್ ಮಾಡಿರುವುದರಿಂದ ಊಟ ಇಲ್ಲ ಎಂದು ಮಾಲೀಕರು ತಿಳಿಸಿದಾಗ. ನನಗೆ ಈಗಲೇ ಊಟ ಬೇಕು, ಇಲ್ಲದಿದ್ದರೆ ಇದೇ ಮಚ್ಚಿನಿಂದ ಹೊಡೆದು ಕೊಲೆ ಮಾಡುತ್ತೇನೆ” ಎಂದು ಬೆದರಿಸಿ ಹರಿತವಾದ ಮಚ್ಚನ್ನು ಬಿಲ್ಲಿಂಗ್ ಕೌಂಟರ್ ಮೇಲೆ ಇಟ್ಟಿದ್ದಾನೆ. ನಂತರ ಮಲೀಕನ ಮೇಳೆ ಮಚ್ಚು ಬೀಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ  ಭಯಗೊಂಡ  ಮಾಲೀಕ ಹೊರಗೆ ಹೋಗಲು ಹೋಟೆಲ್ ಮೆಟ್ಟಿಲು ಇಳಿಯುತ್ತಿದ್ದಾಗ, ಕೆಳಗೆ ಬಿದ್ದಿದ್ದಾರೆ.  ಈ ವೇಳೇ ಹೋಟೆಲ್​ ಸಿಬ್ಬಂದಿಳು ಸ್ಥಳಕ್ಕೆ ಬಂದು ಮಾಲೀಕರನ್ನು ರಕ್ಷಿಸಿದ್ದಾರೆ.

Bhadravati news

Share This Article