special action force shivamogga / ಶಿವಮೊಗ್ಗಕ್ಕೂ ವಿಶೇಷ ಕಾರ್ಯಪಡೆ ! 80 ಸಿಬ್ಬಂದಿಯ ಕಂಪನಿ ಎಲ್ಲಿ ಉಳಿಯಲಿದೆ ಗೊತ್ತಾ

Malenadu Today

special action force shivamogga ಕೋಮು ಹಿಂಸಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ವಿಶೇಷ ಕಾರ್ಯಪಡೆ (SAF) ಅಸ್ತಿತ್ವಕ್ಕೆ ಬಂದಿದೆ. ಇದರ ಕೇಂದ್ರ ಕಚೇರಿಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಶುಕ್ರವಾರ ಮಂಗಳೂರಿನಲ್ಲಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೊಲೆಗಳು ಸೇರಿದಂತೆ ಪದೇ ಪದೇ ಸಂಭವಿಸುತ್ತಿರುವ ಹಿಂಸಾಚಾರದ ಘಟನೆಗಳು, ಈ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಲು ಪ್ರಮುಖ ಕಾರಣವೆಂದು ವಿವರಿಸಿದರು. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ SAF ಅನ್ನು ರಚನೆ ಮಾಡಿದೆ. ಇದು ಕೋಮು ಭಾಷಣ, ಕೋಮು ಸಂಘರ್ಷ ಸೃಷ್ಟಿಸುವವರನ್ನು ಹತ್ತಿಕ್ಕುವ ದಿಸೆಯಲ್ಲಿ ಕೆಲಸ ಮಾಡಲಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಮಾಜಿ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಸಲಹೆಗಳನ್ನು ಅನುಸರಿಸಿ, ಪ್ರಸ್ತಾವನೆಯ ಒಂದು ವಾರದೊಳಗೆ ಈ ಪಡೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

special action force shivamogga
special action force shivamogga

ಶಿವಮೊಗ್ಗದಲ್ಲಿ ಎಲ್ಲಿ ಕಚೇರಿ? ಹೇಗೆ ಕಾರ್ಯಾಚರಣೆ /special action force shivamogga

ಇನ್ನೂ  ಕೋಮು ಗಲಭೆಗಳನ್ನು ನಿಯಂತ್ರಿಸುವ ಸ್ಪೆಷಲ್ ಆಕ್ಷನ್​ ಫೋರ್ಸ್​ (SAF) ಶಿವಮೊಗ್ಗದಲ್ಲಿಯು ಬೀಡುಬಿಡಲಿದೆ. ಈ ಪಡೆಯ 80 ಮಂದಿಯ ಒಂದು ಕಂಪನಿಯು ಶಿವಮೊಗ್ಗಕ್ಕೆ ಬರಲಿದ್ದು, ಫ್ರೀಡಂ ಪಾರ್ಕ್‌ನಲ್ಲಿರುವ ಹಳೆಯ ಜೈಲು ಕಟ್ಟಡದಲ್ಲಿ ಉಳಿದುಕೊಳ್ಳಲಿದೆ. ಅಲ್ಲಿಯೇ ಕಚೇರಿ ಕೂಡ ಆರಂಭವಾಗಲಿದೆ.  

special action force shivamogga
special action force shivamogga

ಎಸ್.ಎ.ಎಫ್ ನ ಕಾರ್ಯಗಳು:

ಈ ವಿಶೇಷ ಕಾರ್ಯಪಡೆಯು ಗುಪ್ತಚರ ಮಾಹಿತಿ ಸಂಗ್ರಹಿಸುತ್ತದೆ (ಇಂಟಲಿಜೆನ್ಸ್ ಗ್ಯಾದರಿಂಗ್).

ಕೋಮು ಗಲಭೆಗಳನ್ನು ಪ್ರಚೋದಿಸುವ ಶಕ್ತಿಗಳ ಮೇಲೆ ನಿರಂತರವಾಗಿ ಗಮನ ಹರಿಸುತ್ತದೆ (ಕಮ್ಯುನಲ್ ಎಲಿಮೆಂಟ್ಸ್ ಮಾನಿಟರ್).

ಸ್ಥಳೀಯ ಪೊಲೀಸ್ ಪಡೆಗೆ ಅಗತ್ಯ ನೆರವು ನೀಡಲಿದೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ.

Share This Article