education minister madhu bangarappa 14-06-25 :  ಬೆಂಗಳೂರಿನಲ್ಲಿ ಕ್ಯಾನ್ಸರ್​ ಪೀಡಿತ ವಸತಿ ಶಾಲೆ | ಮಧು ಬಂಗಾರಪ್ಪ ಹೇಳಿದ್ದೇನು 

prathapa thirthahalli
Prathapa thirthahalli - content producer

education minister madhu bangarappa :  ಬೆಂಗಳೂರಿನಲ್ಲಿ ಕ್ಯಾನ್ಸರ್​ ಪೀಡಿತ ವಸತಿ ಶಾಲೆ | ಮಧು ಬಂಗಾರಪ್ಪ ಹೇಳಿದ್ದೇನು 

education minister madhu bangarappa : ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ  ಚಿಕಿತ್ಸೆ ಹಾಗೂ ಉಚಿತ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್​ ಆಸ್ಪತ್ರೆ ಬಳಿ  ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಯೋಜಿಸಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎನ್‌ಜಿಒ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈಗಾಗಲೇ 1.500 ಸಾವಿರ ಮಕ್ಕಳನ್ನು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.   ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಬಳಿ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಖಾಸಗಿ ಜಾಗವನ್ನು ನೋಡಿದ್ದೇವೆ. ಎನ್ಜಿಒ ಸಿಬ್ಬಂದಿಗಳು ಈಗಾಗಲೇ ಈ ಕುರಿತು 4 ತಿಂಗಳು ಅಧ್ಯಯನ ಮಾಡಿ ಮಾಹಿತಿಯನ್ನು ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜುಲೈ ಅಂತ್ಯದ ಒಳಗೆ ಈ ಶಾಲೆಯನ್ನು ಪ್ರಾರಂಭಿಸ ಬೇಕೆಂದುಕೊಂಡಿದ್ದೇವೆ. ಈ ಶಾಲೆಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಬಗ್ಗೆ ಮುಂದೆ ಕ್ರಮ ಕೈ ಗೊಳ್ಳಲಾಗುವುದು ಎಂದರು.

- Advertisement -

education minister madhu bangarappa : ನಾನು ಸಚಿವನಾಗಿ  2 ವರ್ಷ ಪೂರೈಸಿದ ಹಿನ್ನೆಲೆ ಏನಾದರೂ ನೆನಪಿನಲ್ಲಿಡುವ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ. 1 ರಿಂದ  10 ನೇ ತರಗತಿಯ ವಿದ್ಯಾರ್ಥಿ ಗಳಿಗಾಗಿ ಸ್ಥಾಪಿಸುವ ಈ ವಸತಿ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣವನ್ನು ನೀಡಲಾಗುವುದು. ಆಟ ಪಾಠ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗುವುದು.  ಹಾಗೆಯೇ ಕಿದ್ವಾಯಿ ಆಸ್ಪತ್ರೆ ಬಳಿಯೇ ವಸತಿ ಶಾಲೆ ಇರುವುದರಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಓಡಾಡಲು ಕಾರು ಹಾಗು ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

 

Share This Article