ಮಗ ಮನೆ ಬಿಟ್ಟೋಗ್ತಿದ್ಧಾನೆಂದು ದೂರು ಕೊಟ್ಟ ತಂದೆ/ ಬೀಗರ ಊಟಕ್ಕೆ ಯುವಕರ ಕಿರಿಕ್​/ ಹೆಂಡತಿ ಸಂಬಂಧಿಕರ ಜಗಳಕ್ಕೆ ರೊಚ್ಚಿಗೆದ್ದ ಪತಿ

Short news of various facts in Shivamogga district ಶಿವಮೊಗ್ಗ ಜಿಲ್ಲೆ ವಿವಿಧ ಸಂಗತಿಗಳ ಶಾರ್ಟ್​ ನ್ಯೂಸ್

ಮಗ ಮನೆ ಬಿಟ್ಟೋಗ್ತಿದ್ಧಾನೆಂದು  ದೂರು ಕೊಟ್ಟ  ತಂದೆ/  ಬೀಗರ ಊಟಕ್ಕೆ ಯುವಕರ ಕಿರಿಕ್​/ ಹೆಂಡತಿ ಸಂಬಂಧಿಕರ ಜಗಳಕ್ಕೆ ರೊಚ್ಚಿಗೆದ್ದ ಪತಿ

KARNATAKA NEWS/ ONLINE / Malenadu today/ Sep 2, 2023 SHIVAMOGGA NEWS 

ಮಗ ಮನೆ ಬಿಟ್ಟು ಹೋಗ್ತಾನೆ ಎಂದು ದೂರು ಕೊಟ್ಟ ತಂದೆ

ಶಿವಮೊಗ್ಗ ಪೊಲೀಸ್ ಇಲಾಖೆಯ ಸಿಬ್ಬಂದಿ ಪ್ರತಿನಿತ್ಯ ನಾನಾ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಸಮಯ ಕೊಡಬೇಕಾಗುತ್ತದೆ. ಇದಕ್ಕೆ ಪೂರಕವೆಂಬಂತೆ ತುಂಗಾನಗರ ಪೊಲೀಸರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ತಮ್ಮ ಮಗನೊಂದಿಗೆ ಗಲಾಟೆಯಾಗಿದೆ. ಆತ ಜಗಳ ಮಾಡಿಕೊಂಡು ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಾನೆ ಎಂದು ದೂರಿದ್ದಾರೆ. ಅಲ್ಲದೆ ಸ್ಥಳಕ್ಕೆ ಬಂದು ಆತನಿಗೆ ಬುದ್ದಿವಾದ ಹೇಳುವಂತೆ ಕೋರಿದ್ಧಾರೆ. ದೂರು ಆಲಿಸಿ ಸ್ಥಳಕ್ಕೆ ಬಂದ ಪೊಲೀಸರು , ತಂದೆಯೊಂದಿಗೆ ಜಗಳವಾಡ್ತಿದ್ದ ಬಾಲಕನಿಗೆ ಬುದ್ದಿ ಹೇಳಿ ಸಮಸ್ಯೆ ಬಗೆಹರಿಸಿದ್ದಾರೆ.  

ಬೀಗರ ಊಟದ ಸಂಬಂಧ ಗಲಾಟೆ 

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಗ್ರಾಮವೊಂದರಲ್ಲಿ ಬೀಗರ ಊಟದ ವಿಚಾರಕ್ಕೆ ನಾಲ್ವರು ಯುವಕರು ಮನೆ ಹತ್ತಿರ ಬಂದು ಗಲಾಟೆ ಮಾಡಿದ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿದೆ. ವಿಷಯ ತಿಳಿದು ಕರೆಮಾಡಿದವರ ಮನೆಗೆ ತೆರಳಿದ ಪೊಲೀಸರು, ನಾಲ್ವರು ಯುವರಿಕೆ ವಾರ್ನಿಂಗ್ ಕೊಟ್ಟು, ಅಲ್ಲಿಂದ ವಾಪಸ್ ಕಳಹಿಸಿದ್ದಾರೆ. 

ಮನೆ ಬೀಗ ಒಡೆದು ಕಳ್ಳತನಕ್ಕೆ ಯತ್ನ

ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಿವಾಸಿಯೊಬ್ಬರ ಮನೆಯ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸದ ಘಟನೆ ಬಗ್ಗೆ ವರದಿಯಾಗಿದೆ.  ಮನೆಯಲ್ಲಿನ ಬೀರುವನ್ನು ಓಪನ್ ಮಾಡಿದ್ದ ಕಳ್ಳತರು, ಅದರಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಡಿದ್ದಾರೆ. ಆದರೆ ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ಧಾರೆ. 



ಪತ್ನಿ ಸಂಬಂಧಿಕರ ಕಾಟ 

ಸೊರಬ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರಲ್ಲಿ ಪತ್ನಿಯ ಸಂಬಂಧಿಕರು ಮನೆಗೆ ನುಗ್ಗಿ ಜಗಳವಾಡುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಪೊಲೀಸರ ರಕ್ಷಣೆ ಕೋರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ  ಸೂಚಿಸಿದ್ದಾರೆ. ಅಲ್ಲದೆ ಮತ್ತೆ ಗಲಾಟೆ ಮಾಡಿದ್ರೆ ಕೇಸ್ ದಾಖಲಿಸುವಂತೆ ತಿಳಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು