ಶಿವಮೊಗ್ಗ : ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ದತೆ ನಡೆಯುತ್ತಿರುವ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ ಹೊಸವರ್ಷದ ಸುಸ್ವಾಗತದ ವೇಳೆ ಪಾಲಿಸಬೇಕಾಗಿರುವ ಕಾನೂನಿನ ಪಾಠದ ಬಗ್ಗೆ ಮನವರಿಕೆ ಮಾಡುತ್ತಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಶೇಷ ಮಾರ್ಗಸೂಚಿಗಳನ್ನು (New Year Celebration Guidelines) ಬಿಡುಗಡೆ ಮಾಡಿದೆ.
New Year Celebration Guidelines 2025
ರೈಲು ಪ್ರಯಾಣಿಕರ ಗಮನಕ್ಕೆ! ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ಅವರ ನೇತೃತ್ವದಲ್ಲಿ ಜಿಲ್ಲೆಯ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜಕರ ಸಭೆ ನಡೆಸಿ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಈ ಪೈಕಿ ಸಂಭ್ರಮಾಚರಣೆಗೆ ಬರುವ ಅತಿಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಮತ್ತು ಕುಟುಂಬಸ್ಥರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಅಹಿತಕರ ಅನುಭವವಾಗದಂತೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಆಯೋಜಕರ ಜವಾಬ್ದಾರಿಯಾಗಿದೆ ಎಂದು ಎಸ್ಪಿ ಸೂಚಿಸಿದ್ದಾರೆ. ನ್ಯೂ ಇಯರ್ ಕಾರ್ಯಕ್ರಮಕ್ಕೆ ಹಾಜರಾಗುವ ಪ್ರತಿಯೊಬ್ಬ ಅತಿಥಿಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಮತ್ತು ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ.

ಶಿವಮೊಗ್ಗ, ಭೀಕರ ಅಪಘಾತ, ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು
ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದ ಬಗ್ಗೆ ಪೊಲೀಸ್ ಇಲಾಖೆಯು ತೀವ್ರ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಡ್ರಗ್ಸ್ ಪತ್ತೆಯಾದಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಎಂಟು ಪ್ರಮುಖ ಸೂಚನೆ /Shivamogga New Year Celebration Guidelines 2025
- 1) ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ Do’s ಮತ್ತು Don’t ಗಳನ್ನು ನಮ್ಮ ಪೊಲೀಸ್ ಠಾಣೆಗಳಿಂದ ಈಗಾಗಲೇ ಹೇಳಲಾಗಿರುತ್ತದೆ. ಸಂಭ್ರಮಾಚರಣೆಗೆ ಬರುವ ಅತಿಥಿಗಳ ಸುರಕ್ಷತೆ ಹಾಗೂ ಅವರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದೇ ಉದ್ದೇಶವಾಗಿರುತ್ತದೆ. ಹಾಗೆಯೇ ಸಮಾರಂಭಗಳಿಗೆ / ಕಾರ್ಯಕ್ರಮಗಳಿಗೆ ಕುಟುಂಬದವರು ಮತ್ತು ಮಕ್ಕಳು ವಯಸ್ಸಾದವರು ಎಲ್ಲಾ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಕಿರಿಕಿರಿ ಹಾಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಭ್ದಾರಿ ಇರುತ್ತದೆ.
- 2) ಕಾರ್ಯಕ್ರಮಗಳಿಗೆ ಬರುವವರು ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುವ ಸಾದ್ಯತೆ ಹೆಚ್ಚಿರುತ್ತದೆ, ಆದ್ದರಿಂದ ಯಾರೂ ಕುಡಿದು ವಾಹನ ಚಾಲನೆ ಮಾಡದಂತೆ ನೋಡಿಕೊಳ್ಳಿ, ಮತ್ತು ಅಗತ್ಯ ಸಂದರ್ಭಗಳಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿರಿ.
- 3) ಸಮಾರಂಭಕ್ಕೆ ಹಾಜರಾಗುವ ಅಥಿತಿಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿಯನ್ನು ಕಲೆ ಹಾಕಿ ಹಾಗೆಯೇ, ಹಾಜರಾಗುವ ಸಂಖ್ಯೆಗೆ ಅನುಗುಣವಾಗಿ ಎಲ್ಲಾ ರೀತಿಯ ಅಗತ್ಯ ತಯಾರಿಯನ್ನು ಮಾಡಿಕೊಳ್ಳಿ. ನೀವು ತೆಗೆದುಕೊಂಡ ಎಲ್ಲಾ ಮುಂಜಾಗೃತ ಕ್ರಮಗಳ ಮಾಹಿತಿಯನ್ನು ನಿಮ್ಮ ವ್ಯಾಪ್ತಿಯ ಠಾಣೆಗೆ ನೀಡಿರಿ. ಸುರಕ್ಷಿತವೆನಿಸುವ ಸಂಖ್ಯೆಯ ಸಾರ್ವಜನಿಕರಿಗೆ ಮಾತ್ರ ಅನುಮತಿಸಿರಿ.
- 4) ಕಾರ್ಯಕ್ರಮಗಳಿಗೆ ಹಾಜರಾಗುವ ಮಹಿಳೆಯರು ಹಾಗೂ ಮಕ್ಕಳ ಸುರಕ್ಷೆತೆಗೆ ಮೊದಲ ಆದ್ಯತೆ ನೀಡಿರಿ ಮತ್ತು ಅಗತ್ಯ ಸಂದರ್ಭಗಳಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿರಿ. ಹಾಗೆಯೇ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅಥಿತಿಗಳ ಐಡಿ ಪ್ರೂಫ್ ಗಳನ್ನು ಪಡೆದುಕೊಳ್ಳುರಿ. ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸಿಸಿ ಕ್ಯಾಮೆರಗಳನ್ನು ಅಳವಡಿಸಿಕೊಳ್ಳಿ.
- 5) ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಉಪಯೋಗ ಯಾವುದೇ ಕಾರಣಕ್ಕೂ ಮಾಡತಕ್ಕದ್ದಲ್ಲ. ಹಾಗೂ ಒಂದು ವೇಳೆ ಮಾದಕ ವಸ್ತುಗಳ ಬಳಕೆ ಕಂಡು ಬಂದಲ್ಲಿ ಅಂತಹವರ ವಿರುದ್ಧ NDPS ಕಾಯ್ದೆ ರೀತ್ಯಾ ಕ್ರಮ ಜರುಗಿಸಲಾಗುವುದು. ಹಾಗೂ ಮದ್ಯಪಾನ ಮಾಡಿರುವವರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡದೆ ತಮ್ಮಿಂದಲೇ ವಾಹನ ವ್ಯವಸ್ಥೆ ಮಾಡುವುದು ಸೂಕ್ತ.
- 6) ಪಟಾಕಿಗಳನ್ನು ಬಳಕೆ ಮಾಡುವಾಗ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಅನುಸರಿಸಿರಿ. ಮತ್ತು ಸೂಕ್ತ ರೀತಿಯ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತವಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಬೆಳಕಿನ ವ್ಯವಸ್ಥೆ ಇರುವುದು ಮುಖ್ಯ.
- 7) ಸಂಚಾರ ವ್ಯವಸ್ಥೆಗೆ ಯಾವುದೇ ದಕ್ಕೆಯಾಗದ ರೀತಿ ಪಾರ್ಕಿಂಗ್ ವ್ಯವಸ್ಥೆ ಮಾಡಿರಿ. ನೀವು ಪೊಲೀಸ್ ಇಲಾಖೆ ಜೊತೆಗೆ ಕೈ ಜೋಡಿಸಿ ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಿರಿ. 31ನೇ ತಾರೀಕು 12:00 ಗಂಟೆಗೆ ಶುರು ಮಾಡುವ ಸಂಭ್ರಮಾಚರಣೆಯನ್ನು 01:00 ಗಂಟೆಯ ವೇಳೆಗೆ ಮುಗಿಸಿರಿ.
- 8) ಸ್ವಿಮ್ಮೀಂಗ್ ಪೂಲ್ ಗಳು ಇದ್ದಲ್ಲಿ ಹೆಚ್ಚಿನ ಸುರಕ್ಷತೆ ಮುಖ್ಯ ಹಾಗೆಯೇ ದ್ವನಿ ವರ್ದಕ ಬಳಕೆಗೆ ಸಂಬಂಧಿಸಿದಂತೆ ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನದಂತೆ ಬಳಕೆ ಮಾಡಿರಿ. ಫೈರ್ ಕ್ಯಾಂಪ್ ನಡೆಯುವಾಗ ಯಾವುದೇ ಅಗ್ನಿ ಅವಗಡ ಆಗದ ರೀತಿ ಕ್ರಮ ಕೈಗೊಳ್ಳಿ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಶಿವಮೊಗ್ಗ ಹೊಸ ವರ್ಷಾಚರಣೆ ಮಾರ್ಗಸೂಚಿ 2025: ಎಸ್ಪಿ ಮಿಥುನ್ ಕುಮಾರ್ ಸೂಚನೆಗಳು Shivamogga New Year Celebration Guidelines 2025: Instructions by SP Mithun Kumar