Shivamogga dasara : ಶಿವಮೊಗ್ಗ ದಸರಾಕ್ಕೆ ಸಿದ್ಧತೆ ಆರಂಭವಾಗಿದ್ದ ಈ ಸಲ ವಿಶೇಷ ಎಂಬಂತೆ ದಸರಾ ಉದ್ಘಾಟನೆಯನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜುರವರು ಕೈಗೊಳ್ಳಲಿದ್ದಾರೆ. ಈ ಬಗ್ಗೆ ಶಾಸಕ ಎಸ್ಎನ್ ಚನ್ನಬಸಪ್ಪರವರು ಸ್ಪಷ್ಟಪಡಿಸಿದ್ದಾರೆ. ಇಷ್ಟಕ್ಕೂ ಯಾರು ಈ ಬಿಎಸ್ ರಾಜು ಎಂಬುದನ್ನು ಗಮನಿಸುವುದಾದರೆ. ಬಿಎಸ್ ರಾಜು ಅಥವಾ ಬಗ್ಗವಳ್ಳಿ ಸೋಮಶೇಖರ್ ರಾಜು
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನವರು. ಬಗ್ಗವಳ್ಳಿ ಗ್ರಾಮದವರು. ತಂದೆ ಸೋಮಶೇಖರಪ್ಪ ಅವರು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಇವರು 1963 ಅಕ್ಟೋಬರ್ 19 ರಂದು ಜನಿಸಿದ ಇವರು ಭಾರತೀಯ ಸೇನೆಯ General Officer Commanding-in-Chief South Western Command ಆಗಿ ನಿವೃತ್ತರಾದರು. ಇದಕ್ಕೂ ಮೊದಲು Vice Chief of the Army Staff , the Director General Military Operations (DGMO) ಆಗಿ ಕೆಲಸ ಮಾಡಿದ್ದರು.
1973ರಿಂದ 1979ರವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಎನ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೇನೇ ಸೇರಿದ್ದ ಇವರು ಸೇನೆಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿಯು ಸೇರಿದಂತೆ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಗಳ ಭಾಗವಾಗಿದ್ದರು.ಸದ್ಯ ರಾಜು ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರ ಮಗ ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ.ಮೇಲಾಗಿ ಇವರು ತರಭೇತಿ ಹೊಂದಿದ್ದ ಹೆಲಿಕಾಪ್ಟರ್ ಪೈಲಟ್ ಸಹ ಆಗಿದ್ದಾರೆ.
Shivamogga dasara
ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜುರವರು