ತೀರ್ಥಹಳ್ಳಿಯಲ್ಲಿ ಯುವಕ ನೀರು ಪಾಲು/ಸಾವು ಅನುಮಾನ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನಾನಿ ಬಳಿಯಲ್ಲಿ ಹರಿಯುವ ತುಂಗಾ ನದಿಯಲ್ಲಿ ತೀರ್ಥಹಳ್ಳಿ ಹೊಸಮನ ತೆಂಗಿನಕೊಪ್ಪದ ಪ್ರಜತ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ನಿನ್ನೆ ಭಾನುವಾರ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೊರಟವನು ತುಂಗಾ ನದಿಯ ಹಳ್ಳ ದಾಟಲು ಹೋಗಿರುವ ಸಾಧ್ಯತೆ ಇದೆ. ಆದರೆ ಎಷ್ಟೊತ್ತಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಬಳಿಕ ಆತನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.ಪ್ರಜತ್ ಸೊಪ್ಪುಗುಡ್ಡೆಯಲ್ಲಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಸದ್ಯ ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಲಯನ್ ಸಫಾರಿಯ ಕಾಂಪೌಂಡ್ನೊಳಗೆ ಮೃತದೇಹ ಪತ್ತೆ
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಮತ್ತು ಸಿಂಹಧಾಮದ ಆವರಣದಲ್ಲಿ ಕೊಳೆತ ಸ್ತಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. ಸುಮಾರು 60 ವರ್ಷದ ವ್ಯಕ್ತಿಯ ಶವ ಇದಾಗಿದ್ದು, ಯಾರೋ ಕೊಲೆ ಮಾಡಿ ಕಾಂಪೌಂಡಿನ ಒಳಗೆ ಎಸೆದಿರುವ ಶಂಕೆಯು ಮೂಡಿದೆ.

ಥಾಯ್ಲಾಂಡ್ನಲ್ಲಿ ತೀರ್ಥಹಳ್ಳಿ ಟೆಕ್ಕಿ ಒತ್ತೆಯಾಳು
ಥಾಲ್ಯಾಂಡ್ನಲ್ಲಿ ಸಾಪ್ಟ್ವೇರ್ ಇಂಜಿನಿಯರಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿ ಕಾಂಬೋಡಿಯಾದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಟೆಕ್ಕಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂಬ ಆರೋಪವೊಂದು ಕೇಳಿಬಂದಿದೆ. ಇಲ್ಲಿನ ಕಿರಣ್ ಶೆಟ್ಟಿ ಎಂಬವರನ್ನು ಕಾಂಬೋಡಿಯಾ ದೇಶದಲ್ಲಿ ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ ಎಂದು ದೂರಲಾಗಿದ್ದು, ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿ ಆತನನ್ನು ಅಲ್ಲಿಂದ ಭಾರತಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆಯಂತೆ.
ಟ್ರೈನ್ಗೆ ಸಿಲುಕಿ ಡಾಕ್ಟರ್ ಸಾವು!
ಈ ಮಧ್ಯೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ರೈಲಿನಲ್ಲಿ, ಬಾಗಿಲು ಬಡಿದು ಕೆಳಕ್ಕೆ ಬಿದ್ದು ವೈದ್ಯರೊಬ್ಬರು ಸಾವನ್ನಪ್ಪಿದ್ಧಾರೆ. ಹೊಸನಗರ, ಗೌತಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಿಪ್ಪನ್ ಪೇಟೆ ಮೂಲದ ಡಾ. ಗುರುರಾಜ್ ಸಾವನ್ನಪ್ಪಿದ್ದವರು.

ಗೋಂಧಿ ಚೆಕ್ ಡ್ಯಾಂನಲ್ಲಿ ಸಿಮ್ಸ್ ವಿದ್ಯಾರ್ಥಿ ನೀರುಪಾಲು
ಭದ್ರಾ ಚೆಕ್ ಡ್ಯಾಂನಲ್ಲಿರುವ ನೀರಿನಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ಮೊನ್ನೆ ಶನಿವಾರ ಸಂಭವಿಸಿದೆ. ಭದ್ರಾ ನದಿಯ ಗೋಂದಿ ಚೆಕ್ ಡ್ಯಾಂಗೆ ಶಿವಮೊಗ್ಗದ ಸಿಮ್ಸ್‌ನ ವಿದ್ಯಾರ್ಥಿ ಜಗತ್ ಮತ್ತು ಇತರೆ ಐವರು ಸ್ನೇಹಿತರು ಈಜಲು ತೆರಳಿದ್ದಾರೆ. ಈ ವೇಳೆ ನೀರುಪಾಲದ ಜಗತ್ ಬಳಿಕ ಚೆಕ್ ಡ್ಯಾಂನ ಗೇಟಿನ ಬಳಿಯಲ್ಲಿ ಲಭ್ಯವಾಗಿದ್ದಾನೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಕೇಸ್ದಾಖಲಿಸಿಕೊಂಡಿದ್ಧಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
