Shivamogga crime news ಶಿವಮೊಗ್ಗ: ನಗರದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಸಾಮಾನುಗಳನ್ನು ನಾಶಪಡಿಸಿ, ವಾಮಾಚಾರದಂತಹ ಕೃತ್ಯ ನಡೆಸಿದಲ್ಲದೆ, ಇದನ್ನು ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 31, 2025 ರಂದು ಮಧ್ಯಾಹ್ನ 1 ರಿಂದ 2 ಗಂಟೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ದೂರುದಾರ ಮಹಿಳೆಯು ಮನೆಯಲ್ಲಿ ಇಲ್ಲದ ಸಮಯದಲ್ಲಿ, ಕೆಲ ವ್ಯಕ್ತಿಗಳು ಏಕಾಏಕಿ ಮನೆಗೆ ನುಗ್ಗಿ, ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ, ಅಷ್ಟೇ ಅಲ್ಲದೆ ಆರೋಪಿಗಳು ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲಾ ಛಿದ್ರ ಛಿದ್ರ ಮಾಡಿ, ಕಬ್ಬಿಣದ ರಾಡ್‌ನಿಂದ ಮನೆಯ ಬೀರು ಮುರಿದಿದ್ದಾರೆ. ಅಲ್ಲದೆ, ಮನೆಯ ಸಿಮೆಂಟ್ ಶೀಟ್ ಅನ್ನು ಸಹ ಪುಡಿ ಮಾಡಿ ನಾಶ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ನಿಂಬೆ ಹಣ್ಣು, ಕುಂಕುಮ ಅಡಿಕೆ ಎಲೆಯಲ್ಲಿ 11 ರೂಪಾಯಿ ಇಟ್ಟು ಹೋಗಿದ್ದು, ಇದು ವಾಮಾಚಾರದ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ,
ಈ ಹಿನ್ನೆಲೆ ಪಕ್ಕದಮನೆಯವರು ದುರುದಾರರಿಗೆ ಫೋನ್ ಮಾಡಿ ನಂತರ ಗಾಬರಿಯಿಂದ ಮನೆಗೆ ಮರಳಿದ ದೂರುದಾರರು, ಕೃತ್ಯ ನಡೆಸಿದ ವ್ಯಕ್ತಿ ಮತ್ತು ಆತನ ಕುಟುಂಬದವರನ್ನು ಪ್ರಶ್ನಿಸಿದ್ದಾರೆ. ಆಗ ಆರೋಪಿ ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

