ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನು ಇಡಬೇಕು ಎಂಬುದು ಇನ್ನೂ ಸಹ ನಿಕ್ಕಿಯಾಗಿಲ್ಲ. ಇದರ ನಡುವೆ ಹಲವಾರು ಹೆಸರುಗಳು ಏರ್ಪೋರ್ಟ್ಗೆ ಇಡಬೇಕು ಎಂಬ ವಿನಂತಿ, ಒತ್ತಾಯ ಮತ್ತು ಆಗ್ರಹಗಳ ರೂಪದಲ್ಲಿ ಕೇಳಿಬಂದಿದೆ. ಇದೀಗ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ರವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್ರವರ ಭಾವಚಿತ್ರ ಇರುವ ಫ್ಲೆಕ್ಸ್ ಧರಿಸಿ ಒತ್ತಾಯಿಸಿದೆ. ಅಲ್ಲದೆ ಸರ್ಕಾರದ ಮುಂದೆ ಕೆಲವೊಂದು ನಿರ್ಧಿಷ್ಟ ಭೇಡಿಕೆಗಳನ್ನು ಇಟ್ಟಿದೆ.
*hosanagara news : ಕೋರ್ಟ್ ವ್ಯಾಜ್ಯದ ನಡುವೆ ಪಂಜುರ್ಲಿ ದೈವಕ್ಕಾಗಿ ನಿರ್ಮಿಸಿದ್ದ ಹೊಸ ದೇಗುಲ ಕಟ್ಟಡ ಧ್ವಂಸ*
ವಿಮಾನ ನಿಲ್ದಾಣದ ಎದುರು ಅಂಬೇಡ್ಕರ್ ಅವರ 105 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಬೇಕು.ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ ಪಾರ್ಕಿಂಗ್ ಮತ್ತು ಸ್ಕೂಟರ್ ಪಾರ್ಕಿಂಗ್‌ನ್ನು ಮತ್ತು ಇತರ ಟೆಂಡರ್‌ಗಳನ್ನು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡದವರಿಗೆ, ಶೇ.50 ರಷ್ಟನ್ನು ನಿರುದ್ಯೋಗಿ ಯುವಕ- ಯುವತಿಯರಿಗೆ ನೀಡಬೇಕು.ಕರ್ನಾಟಕ ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ 10-15 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು
riponpete : ಜುಮ್ಮಾ ಮಸೀದಿ ಎದುರು ಮದ್ಯದಂಗಡಿಗೆ ಅಬಕಾರಿ ಇಲಾಖೆ ಗ್ರೀನ್ ಸಿಗ್ನಲ್! ರಿಪ್ಪನ್ಪೇಟೆಯಲ್ಲಿ ಆಕ್ರೋಶ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com