ಮತ್ತೆ ಶಿವಮೊಗ್ಗ ಸೋಗಾನೆ ವಿಮಾನ ನಿಲ್ದಾಣದ ಹೆಸರಿನ ಚರ್ಚೆ/ ಏರ್​​ಪೋರ್ಟ್​ಗೆ ಇವರ ಹೆಸರನ್ನೇ ಇಡಬೇಕು

Malenadu Today

ಶಿವಮೊಗ್ಗದ ಸೋಗಾನೆಯಲ್ಲಿ (shivamogga airport news) ನಿರ್ಮಾಣವಾಗುತ್ತಿರುವ ಏರ್​ಪೋರ್ಟ್​ ಗೆ ಹೆಸರಿಡುವ ಚರ್ಚೆ ಮತ್ತೆ ಮುಂದುವರಿದಿದೆ. ಇತ್ತೀಚೆಗೆ ವಿಶ್ವಮಾನವ ಕುವೆಂಪುರವರ ಹುಟ್ಟುಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಅವರ ಹೆಸರನ್ನ ವಿಮಾನ ನಿಲ್ದಾಣಕ್ಕೆ (shimoga airport construction) ಇಡಬೇಕು ಎಂಬ ಚರ್ಚೆಗಳು ಜೋರಾಗಿ ಕೇಳಿಬಂದಿದ್ದವು. ಅಲ್ಲದೆ ಈ ಸಂಬಂಧ ಹಲವು ಮನವಿಗಳು ಸಲ್ಲಿಕೆಯಾಗಿದ್ದವು. 

BREAKING NEWS/ ಮತ್ತೊಂದು ಜಲ ದುರಂತ/ ಅಬ್ಬೆ ಪಾಲ್ಸ್​ನಲ್ಲಿ ಈಜಲು ಹೋಗಿ ತೀರ್ಥಹಳ್ಳಿ ಯುವಕ ಸಾವು

ಇದರ ನಡುವೆ ಇದೀಗ ಶಿವಮೊಗ್ಗವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿಡುವಂತೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಆಗ್ರಹಿಸಿದ್ದಾರೆ.

SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ 

ಈ ಸಂಬಂಧ ಮಾತನಾಡಿರುವ ಅವರು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಯುವಲ್ಲಿ ಎಸ್. ಬಂಗಾರಪ್ಪ ಅವರ ಪಾತ್ರ ಮಹತ್ವದ್ದು. ಅವರು ಕೇವಲ ವ್ಯಕ್ತಿಯಾಗಿರದೆ ನೊಂದವರ ಕಣ್ಣೀರು ಒರೆಸುವ ಶಕ್ತಿಯಾಗಿದ್ದರು. ಅವರಿಗೆ ಸೂಕ್ತ ಗೌರವ ನೀಡಲು ವಿಮಾನ ನಿಲ್ದಾಣಕ್ಕೆ ಸರ್ಕಾರ ಅವರ ಹೆಸರು ಇಡಲಿ  ಎಂದು ಒತ್ತಾಯಿಸಿದ್ದಾರೆ. 

BREKING NEWS/ ಇವತ್ತು ದಾವಣೆಗೆರೆ/7 ನೇ ತಾರೀಖು ಶಿವಮೊಗ್ಗ ಮತ್ತು ಭದ್ರಾವತಿಗೆ ಬರ್ತಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ/ ಕಾರಣವೇನು ಗೊತ್ತಾ? ಇಲ್ಲಿದೆ ವಿವರ

ವಿಮಾನ ನಿಲ್ದಾಣಕ್ಕೆ ಬಿಎಸ್​ವೈ ಹೆಸರಿಡಬೇಕು ಎಂಬ ಚರ್ಚೆ ಬಿಜೆಪಿಯಲ್ಲಿದೆ. ಆದರೆ ಅದನ್ನು ಬಿಎಸ್​ ಯಡಿಯೂರಪ್ಪನವರು ತಮಗಿಂತ ಹಿರಿಯರಿದ್ದಾರೆ ಎಂದು ನಿರಾಕರಿಸಿದ್ದರು. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಈ ಸಂಬಂಧ ಚರ್ಚಿಸಿ ತೀರ್ಮಾನಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದರ ನಡುವೆ ಆಗಾಗ ಏರ್​​ಪೋರ್ಟ್​ಗೆ ಯಾರ ಹೆಸರು ಇಡಬೇಕು ಎಂಬ ಚರ್ಚೆಗಳು ನಡೆಯುತ್ತಿದೆ. 

ಇದನ್ನು ಸಹ ಓದಿ : ಆಪ್ತ ಪ್ರಸನ್ನ ಭಟ್​ರ ಮನೆಗೆ ಸಂಸದ ರಾಘವೇಂದ್ರರ ಭೇಟಿ/ ಕುಟುಂಬಕ್ಕೆ ಸಾಂತ್ವನ

Share This Article