havamana varadi in kannada today, ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಜೋರು ಮಳೆ! ಇವತ್ತು ಇದೆ ಭಾರೀ ಮಳೆ ,ಬಿರುಗಾಳಿ!

KARNATAKA NEWS/ ONLINE / Malenadu today/ Jun 1, 2023 SHIVAMOGGA NEWS

ಶಿವಮೊಗ್ಗ/ ಜಿಲ್ಲೆಯಲ್ಲಿ ಇವತ್ತು ಕೂಡ ಮಳೆ ಮುಂದುವರಿಯಲಿದ್ದು ಸಿಡಿಲು ಗುಡುಗುಗಳ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಐಎಂಡಿ ಬೆಂಗಳೂರು (IMD Bengaluru) ವೆಬ್​ಸೈಟ್​ನಲ್ಲಿ ಇವತ್ತಿನ ಮುನ್ಸೂಚನೆಯನ್ನ ನೀಡಲಾಗಿದೆ. 

ಇಂಗ್ಲೆಂಡ್​ನಿಂದ ಮಹಿಳೆಗೆ ಬಂತು ಮೆಸೇಜ್​! ಚಾಟ್​ ನ ಗಿಫ್ಟ್​ ನಂಬಿದ್ದಕ್ಕೆ ಹೋಯ್ತು ಆರು ಲಕ್ಷ!

ಅದರ ಪ್ರಕಾರ ಶಿವಮೊಗ್ಗದಲ್ಲಿ ಕೇಸರಿ ಅಲರ್ಟ್​ ಸೂಚಿಸಲಾಗಿದೆ. ಹಸಿರು ಅಲರ್ಟ್ ಅಂದರೆ, ಯಾವುದೇ ಎಚ್ಚರಿಕೆಗಳಿಲ್ಲ, ಯಲ್ಲೋ ಅಲರ್ಟ್ ಎಂದರೆ ಪರಿಶೀಲನೆಯಲ್ಲಿ ಇರಿ ಎಂದರ್ಥ, ಕೇಸರಿ ಅಲರ್ಟ್​ ಎಂದರೆ ಜಾಗ್ರತೆ ವಹಿಸಿ ಎಂದರ್ಥ ಮತ್ತು ರೆಡ್ ಅಲರ್ಟ್ ಘೋಷಣೆಯಾದರೆ ಎಚ್ಚರಿಕೆ ಎಂದು ಅರ್ಥ ಬರುತ್ತದೆ. 

ಇನ್ಸ್ಟಾಗ್ರ್ಯಾಮ್​ ಓಪನ್ ಮಾಡುತ್ತಲೇ ಯುವಕನಿಗೆ ಕಾದಿತ್ತು! ಆತನದ್ದೇ ಫೋಟೋ ಜೊತೆ ಬಂದಿತ್ತು ಆ ವಿಡಿಯೋ!

ಇವತ್ತಿನ ಜಿಲ್ಲಾವಾರು ಪೂರ್ವ ಮಾಹಿತಿಯಲ್ಲಿ ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು ಹಾಸನ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದ್ದು ಯಲ್ಲೋ ಅಲರ್ಟ್​ ತೋರಿಸಲಾಗಿದೆ. ಭಾರೀ ಮಳೆಯೊಂದಿಗೆ ಗುಡುಗು, ಸಿಡಿಲು ಮತ್ತು ಬಿರುಗಾಳಿಯು ಬೀಸುವ ಸಾಧ್ಯತೆ ಇದೆ ಹೇಳಲಾಗಿದೆ. 

ಹುಲ್ಲು ಕಟ್ಟುವ ಮಷಿನ್​ಗೆ ಸಿಲುಕಿ ಕಾರ್ಮಿಕ ಸಾವು! ಹೇಗಾಯ್ತು ಘಟನೆ

ಇನ್ನೂ ಇದೇ ವೆಬ್​ಸೈಟ್​ನಲ್ಲಿ ನಿನ್ನೆ ರಾತ್ರಿ ಬಿಡುಗಡೆಗೊಂಡಿರುವ ಮಾಹಿತಿಯಲ್ಲಿ ಗಂಟೆಗೆ 5-16 ಮೀಲಿಮೀಟರ್​ನಷ್ಟು ಮಳೆಯಾಗಲಿದ್ದು, ಗಂಟೆಗೆ 40 ಕಿಲೋಮೀಟರ್ ಸ್ಪೀಡ್​ನಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಸಂಬಂಧ ಟ್ವಿಟ್ಟರ್​ನಲ್ಲಿಯು ವಾರ್ನಿಂಗ್ ನೀಡಲಾಗಿದೆ.

ಮದುವೆಯಾದ ಮೇಲೆಯು ಗೆಳತನ ಬಿಡದ ಸ್ನೇಹಿತೆಯರು! ಗೆಳತಿಯ ಸಂಸಾರ ಸರಿಪಡಿಸಲು ಹೋಗಿ ಚಾಕುವಿನಿಂದ ಇರಿತಕ್ಕೊಳಗಾದರು!

 

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ವಿಶೇಷವಾಗಿ ಮಳೆಯಾಗಿದ್ದು ಮಿಂಚು, ಸಿಡಿಲಿನ ಅಬ್ಬರಗಳು ಜನರಲ್ಲಿ ಆತಂಕವನ್ನು ಹುಟ್ಟಿಸಿದ್ದವು. ದೋ ಎಂದು ಸುರಿಯುತ್ತಿದ್ದ ಮಳೆಯೊಂದು ಕಡೆಯಾದರೆ, ಆಕಾಶದ ತುಂಬೆಲ್ಲಾ ಹಾಲು ಬೆಳಕು ತುಂಬುತ್ತಾ, ಚಟೀಲ್​ ಎಂದು ನೆಲಕ್ಕೆ ಬೀಳುತ್ತಿದ್ದ ಸಿಡಿಲುಗಳು ಇನ್ಯಾರ ಪ್ರಾಣಕ್ಕೆ ಕುತ್ತು ತರುವುದು ಎಂಬ ಆತಂಕ ಜನರನ್ನ ಕಾಡಿತ್ತು. 

 

Leave a Comment