Shikaripura Mega Job Fair : ಶಿಕಾರಿಪುರ: ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದರೆ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಹುಟ್ಟುಹಬ್ಬದ ಅಂಗವಾಗಿ ಫೆ.20 ಹಾಗೂ 21ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಅಡಿಕೆ ಬೆಳೆಗಾರರ ಗಮನಕ್ಕೆ ! ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಓದಿ
ಕುಮದ್ವತಿ ವಸತಿ ಶಾಲೆಯಲ್ಲಿ ಮಾತನಾಡಿದ ಅವರು, ಈ ದಿಸೆಯಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಪೂರ್ವಭಾವಿ ಮಾಹಿತಿ ಕಾರ್ಯಾಗಾರಗಳು ನಡೆಯಲಿವೆ ಎಂದು ತಿಳಿಸಿದರು. ಜನವರಿ 17 ಹಾಗೂ ಫೆಬ್ರವರಿ 2ರಂದು ಶಿಕಾರಿಪುರ ಪಟ್ಟಣ ಹಾಗೂ ಅಂಜನಾಪುರ ಹೋಬಳಿ, ಜನವರಿ 24 ಹಾಗೂ ಫೆಬ್ರವರಿ 16ಕ್ಕೆ ಹೊಸೂರು ಹೋಬಳಿ, ಜನವರಿ 31 ಹಾಗೂ ಫೆಬ್ರವರಿ 14ಕ್ಕೆ ಉಡುಗಣಿ ಹೋಬಳಿ, ತಾಳಗುಂದ ಹೋಬಳಿ ಹಾಗೂ ಶಿರಾಳಕೊಪ್ಪ ಪಟ್ಟಣದಲ್ಲಿ ಮಾಹಿತಿ ಶಿಬಿರ ಗಳು ನಡೆಯಲಿವೆ ಎಂದರು.

ಆಳ್ವಾಸ್ ವಿದ್ಯಾಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಂಸದ ಬಿವೈ ರಾಘವೇಂದ್ರ ಹಾಗೂ ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರರವರ ಅಪೇಕ್ಷೆಯ ಮೇರೆಗೆ ತಾಲೂಕಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸ ಲಾಗಿದ್ದು ಕಳೆದ 17 ವರ್ಷಗಳಿಂದ ಹಲವಾರು ಉದ್ಯೋಗ ಮೇಳಗಳನ್ನು ಆಯೋಜಿ ಸಿದ್ದ ಅಪಾರ ಅನುಭವ ಹೊಂದಿದ್ದೇವೆ. ಇದುವರೆಗೂ ಅಂದಾಜು 36 ಸಾವಿರ ಜನರಿಗೆ ಉದ್ಯೋಗ ಲಭಿಸಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಯುವಕರಿಗೆ ಕಾಳಜಿ ವಹಿಸಿ ಉದ್ಯೋಗಗಳು ದೊರಕಿಸುವ ಉದ್ದೇಶ ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಇಂದಿನ ದಿನಭವಿಷ್ಯ! ಹೊಸ ಹರುಷ ದಿನ? ಯಾವೆಲ್ಲಾ ರಾಶಿಗಳಿಗೆ ಏನಿದೆ ಫಲ ಓದಿ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಶಿಕಾರಿಪುರದಲ್ಲಿ ಬೃಹತ್ ಉದ್ಯೋಗ ಮೇಳ: ಫೆಬ್ರವರಿ 20 ಮತ್ತು 21ರಂದು ಆಯೋಜನೆ, Shikaripura Mega Job Fair on Feb 20 and 21 Organized by BY Vijayendra

Direct Interview for Health Jobs in Shivamogga