ಕರಿಮರ ಆಯ್ತು! ಈಗ ಯಾದಗಿರಿ, ರಾಯಚೂರು ಶ್ರೀಗಂಧ ಕಳ್ಳತನ ಕೇಸ್​ಗಾಗಿ ಶಿವಮೊಗ್ಗದಲ್ಲಿ ಹುಡುಕಾಟ! ಏನಿದು?

Malenadu Today

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shivamogga | Malnenadutoday.com | ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದ ಕರಿಮರ ಅಕ್ರಮ ಸಾಗಾಟ ಪ್ರಕರಣ ಬಗ್ಗೆ ಮಲೆನಾಡು ಟುಡೆಯಲ್ಲಿ ವಿಶೇಷವಾಗಿ ವರದಿ ಮಾಡಲಾಗಿತ್ತು. ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡ ಕರಿಮರದ ವಿಶೇಷತೆ ಏನು ಗೊತ್ತಾ? ಎಂಬ ಶಿರ್ಷಿಕೆಯ ಅಡಿಯಲ್ಲಿ ಟುಡೆ ವರದಿ ಮಾಡಿತ್ತು. 

ಇಷ್ಟೆ ಅಲ್ಲದೆ, ಈ ಪ್ರಕರಣದ ಪ್ರಮುಖ ಆರೋಪಿಗೂ ಹಿಂದೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದಿದ್ದ ಶ್ರೀಗಂದ ಕಳ್ಳತನ ಪ್ರಕರಣದ ನಡುವೆ ಲಿಂಕ್​ವೊಂದರ ಬಗ್ಗೆ ವಿಸ್ತೃತ ವರದಿಯನ್ನು ಓದುಗರಿಗೆ ತಲುಪಿಸಿತ್ತು. ಅದರ ವಿವರ ಇಲ್ಲಿದೆ ನಿಮಗೆ ಗೊತ್ತಾ | ಕರಿಮರದ ಬೇಟೆ ಮತ್ತು ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ & 100 KG ಶ್ರೀಗಂಧ ದರೋಡೆ ಕೇಸ್​ಗೆ ಏನಿದು ಲಿಂಕ್! JP FLASHBACK

ಇದರ ಮುಂದುವರೆದ ಭಾಗ ಎಂಬಂತೆ ಹೊಸದೊಂದು ಸುದ್ದಿ ಹೊರಬಿದ್ದಿದೆ. ರಾಜ್ಯದ ಇತರೇ ಜಿಲ್ಲೆಗಳಲ್ಲಿ ನಡೆಯುತ್ತಿರುವ ಶ್ರೀಗಂಧ ಕಳ್ಳತನ ಪ್ರಕರಣಕ್ಕೂ ಶಿವಮೊಗ್ಗಕ್ಕೂ ಲಿಂಕ್ ಇರುವ ಸಾಧ್ಯತೆ ಬಗ್ಗೆ ರಾಜ್ಯಮಟ್ಟದ ಮಾಧ್ಯಮವೊಂದು ವರದಿ ಮಾಡಿದೆ.. 

READ : ಕೋಟೆ, ದೊಡ್ಡಪೇಟೆ, ಜಯನಗರ , ಸಾಗರ ಗ್ರಾಮಾಂತರಕ್ಕೆ ಹೊಸ ಇನ್​ಸ್ಪೆಕ್ಟರ್​! ಡಿವೈಎಸ್​ಪಿ ವರ್ಗಾವಣೆ!

ಏನಿದು ವರದಿ?

ಯಾದಗಿರಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸೀಜ್​ ಮಾಡಿದ್ದ 150 ಕೆಜಿ ಶ್ರೀಗಂಧ ಕಚೇರಿಯಿಂದಲೇ ಮಾಯವಾಗಿತ್ತು. ಆ ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗದ ಲಿಂಕ್​ನ್ನ ಅಲ್ಲಿನ ಪೊಲೀಸರು ಹೊರತೆಗೆದಿದ್ದಾರೆ ಎಂಬ ಮಾಹಿತಿಯಿದೆ. ಅಲ್ಲದೆ ಶಿವಮೊಗ್ಗ ಶಿರಾಳಕೊಪ್ಪ ಸೇರಿದಂತೆ ಕೆಲವೆಡೆ ಈ ಸಂಬಂಧ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ ಎಂಬುದು ಯಾದಗಿರಿ ಮೂಲಗಳ ಸುದ್ದಿ. 

ರಾಯಚೂರು ಪ್ರಕರಣಕ್ಕೂ ಲಿಂಕ್

ಕೇವಲ ಯಾದಗಿರಿಯಷ್ಟೆ ಅಲ್ಲದೆ ರಾಯಚೂರು ಜಿಲ್ಲೆಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ 600 ಕೆಜಿ ಗಂದ ಛೂಮಂತ್ರದಲ್ಲಿ ಮಾಯವಾಗಿತ್ತು. ಆ ಕೇಸ್​ನಲ್ಲಿಯು ಶಿವಮೊಗ್ಗದ ಕೆಲವರ ಕೈವಾಡ ಇದ್ದಿರಬಹುದು ಎಂಬ ಶಂಕೆ ಉತ್ತರ ಕರ್ನಾಟಕದ ಪೊಲೀಸರಿಗಿದೆ. ಪೂರಕವಾಗಿ ಈ ನಿಟ್ಟಿನಲ್ಲಿ ತನಿಖೆಯನ್ನ ನಡೆಸ್ತಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶಿವಮೊಗ್ಗಕ್ಕೆ ಬಂದು ಹೋಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ 


Share This Article