KARNATAKA NEWS / ONLINE / Malenadu today/ Nov 18, 2023 SHIVAMOGGA NEWS
Shivamogga | Malnenadutoday.com | ರಾಜ್ಯಸರ್ಕಾರ 41 DYSP ಹಾಗೂ 71 PI ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ ಹಿಂದಿನ ವರ್ಗಾವಣೆಯಲ್ಲಿ ಆದ ಬದಲಾವಣೆಯಲ್ಲಿಯು, ಕೆಲವು ಚೆಂಜಸ್ಗಳು ಆಗಿದ್ದು, ಸದ್ಯ ಸರ್ಕಾರದ ಆದೇಶದಲ್ಲಿ ಶಿವಮೊಗ್ಗದ ಮುಖ್ಯವಾಗಿ ನಾಲ್ಕು ಬದಲಾವಣೆಗಳು ಆಗಿವೆ
ನಾಲ್ವರು ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ
ರವಿ ಸಂಗನಗೌಡ ಪಾಟೀಲ್ ರವರನ್ನು ಸಿಐಡಿಯಿಂದ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ (doddapete police station) ಪೊಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ.
ಇನ್ನೂ ಪಿಟಿಎಸ್ ಖಾನಾಪುರ ಕ್ಕೆ ಟ್ರಾನ್ಸಫರ್ ಆದೇಶ ಹೊಂದಿದ್ದ ಸಿದ್ದೇಗೌಡ ಹೆಚ್ಎಂ ರವರನ್ನು ಜಯನಗರ ಪೊಲೀಸ್ ಸ್ಟೇಷನ್ (jayanagara police station shivamogga) ಗೆ ವರ್ಗಾವಣೆ ಮಾಡಲಾಗಿದೆ..
ಉಳಿದಂತೆ ಐಎಸ್ಡಿ ಗೆ ವರ್ಗಾವಣೆಗೊಂಡಿದ್ದ ರೋಹಿತ್ ಸಿಇ ರವರನ್ನು ಶಿವಮೊಗ್ಗ ಕೋಟೆ ಪೊಲೀಸ್ ಸ್ಟೇಷನ್ (Kote police station) ಗೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಲೋಕಾಯುಕ್ತ ಕ್ಕೆ ವರ್ಗಾವಣೆ ಆದೇಶ ಹೊಂದಿದ್ದ ಚಂದ್ರಶೇಖರ್ ಎನ್ ಹರಿಹರ ರವರನ್ನು ಶಿವಮೊಗ್ಗ ಸಾಗರ ಗ್ರಾಮಾಂತರ ವೃತ್ತ ಕ್ಕೆ ವರ್ಗಾವಣೆ ಮಾಡಲಾಗಿದೆ.
ಓರ್ವ ಡಿವೈಎಸ್ಪಿ ಟ್ರಾನ್ಸಫರ್
ಇನ್ನೂ 41 ಡಿವೈಎಸ್ಪಿಗಳ ಪೈಕಿ ಶಿವಮೊಗ್ಗದ ಡಿಸಿಆರ್ಬಿಯಲ್ಲಿದ್ದ ಪ್ರಭುರವರನ್ನು ಸಿಐಡಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ