ಚಳಿಗಾಲದಲ್ಲಿ ಜೈಲಿನಲ್ಲಿ ವಯೋವೃದ್ಧ ಸಜಾಬಂಧಿಗಳು ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸ..ಹೇಗಂತಿರಾ? ಜೆಪಿ ಬರೆಯುತ್ತಾರೆ.

ಹಂಚಿಕೊಳ್ಳಿ
WhatsApp Facebook X Telegram

ಚಳಿಗಾಲದಲ್ಲಿ ಜೈಲಿನಲ್ಲಿ ವಯೋವೃದ್ಧ ಸಜಾಬಂಧಿಗಳು ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ..ಹೇಗಂತಿರಾ? ಜೆಪಿ ಬರೆಯುತ್ತಾರೆ.

 ರಾಜ್ಯದ ಕಾರಾಗೃಹಗಳಲ್ಲಿರುವ ವಯೋವೃದ್ಧ ಸಜಾಬಂಧಿಗಳಿಗೆ ಚಳಿಗಾಲ ಶಾಪವಾಗಿ ಪರಿಣಮಿಸಿದೆ. ಚಳಿಗಾಲ ಕಾಲಿಡುತ್ತಿದ್ದಂತೆ 60 ವರ್ಷದ ಮೇಲ್ಪಟ್ಟ ಸಜಾಬಂಧಿಗೆ ಒಂದಿಲ್ಲೊಂದು ಕಾಯಿಲೆಗಳು ಸುತ್ತಿಕೊಳ್ಳುತ್ತವೆ. ಇನ್ನು 70 ರಿಂದ 80 ವರ್ಷ ಮೇಲ್ಪಟ್ಟ ಸಜಾಬಂಧಿಗಳ ಪಾಡು ಹೇಳತೀರದು., ಕೊರೆವ ಚಳಿಗೆ ದೇಹ ಒಗ್ಗಿಗೊಳ್ಳುವುದಿಲ್ಲ. ತಮ್ಮಗಳ ಕೆಲಸವನ್ನು ತಾವೇ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೃದಯಾಘಾತದಂತ ಪ್ರಕರಣಗಳಿಂದ ಹಿಡಿದು ವಾಂತಿ ಬೇದಿಯಂತ ಕಾಯಿಲೆಗೂ ತುತ್ತಾಗುತ್ತಾರೆ. 

 

Malenadu Today Shivamogga

ಬಿಸಿ ನೀರು ಕೊಡುವುದನ್ನು ಹೊರತು ಪಡಿಸಿದರೆ ಜೈಲಿನಲ್ಲಿ ವಯೋವೃದ್ಧರನ್ನು ವಿಶೇಷವಾಗಿ ನೋಡಿಕೊಳ್ಳುವ ಅವಕಾಶವನ್ನು ಪ್ರತ್ಯೇಕವಾಗಿ ಕಲ್ಪಿಸಿಲ್ಲ. ಎಲ್ಲಾ ಸಜಾಬಂಧಿಗಳಂತೆ ಇವರು ಕೂಡ ಸೆರೆವಾಸ ಅನುಭವಿಸಬೇಕು. ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ 60 ವರ್ಷ ಮೇಲ್ಪಟ್ಟ 25 ಕ್ಕೂ ಹೆಚ್ಚು ಮಂದಿ ಇದ್ದಾರೆ. ಅದೇ ರೀತಿ ರಾಜ್ಯದ ವಿವಿದೆಡೆ ಇರುವ ಜೈಲುಗಳಲ್ಲಿ ವಯಸ್ಸಾದ ಸಜಾಬಂಧಿಗಳ ಸಂಖ್ಯೆ ಎರಡಂಕಿಯನ್ನು ಅನಾಯಸವಾಗಿ ದಾಟುತ್ತದೆ.

 

ಚಳಿಗಾಲದ ಕೊರೆವ ಚಳಿಯಲ್ಲಿ ಸೆಲ್ ಒಳಗೆ ಸೂಸುವ ಚಳಿ ತುಟಿ ಹಾಗು ಮೈಕೈ ಚರ್ಮವನ್ನು ಸೀಳುವಂತೆ ಮಾಡುತ್ತೆ. ಹೊರಗಡೆ ಚಳಿಗಾಲದಲ್ಲಿ ರಸ್ತೆ ಬದಿಯಾದ್ರೂ ಬೆಂಕಿ ಹಾಕಿಕೊಂಡು ಬೆಳಗಿನ ಜಾವ ಚಳಿ ಕಾಯಿಸಿಕೊಳ್ಳಬಹುದು. ಆದರೆ ಜೈಲುಗಳಲ್ಲಿ ಮುಂಜಾನೆಯ ಹೊತ್ತಿಗೆ ಜೈಲು ಸರಳುಗಳೇ ಮಂಜಿನ ಗೆಡ್ಡೆಯಂತ ಅನುಭವ ನೀಡುತ್ತದೆ.

 

ಹೀಗಾಗಿಯೇ ಜೈಲುಗಳಲ್ಲಿ ಇಳಿಸಂಜೆಯ ಸಜಾಬಂಧಿಗಳು ಒಂದಿಲ್ಲೊಂದು ಕಾಯಿಲೆಯಿಂದ ಬಳಲುತ್ತಾರೆ. ಜೈಲಿನಲ್ಲಿ ಅವರಿಗೆ ವೈದ್ಯರ ಚಿಕಿತ್ಸೆ ನೀಡುತ್ತಾರೆ. ಖಾಯಿಲೆ ಹೆಚ್ಚಾದ್ರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತೆ. ತಮ್ಮ ಸ್ವಂತ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾರದಂತ ದುಸ್ಥಿತಿಯಲ್ಲಿರುವ ಸಜಾಬಂಧಿಗಳ ಪಾಡು ಹೇಳತೀರದು. ಇಂತವರನ್ನು ಕಾಯಬೇಕಾದ ಹೊಣೆಗಾರಿಕೆ ಜೈಲು ಸಿಬ್ಬಂದಿಗಳದ್ದಾಗಿದೆ.

 

75 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಸರ್ಕಾರ ಬೇರೆಯದ್ದೇ ಮಾರ್ಗಸೂಚಿಗಳನ್ನು ಮಾಡಿ, ಅವರ ಆರೋಗ್ಯದ ಹಿತ ಕಾಯಬೇಕಿದೆ. ಜೀವನದ ಬಹುಪಾಲು ಸಮಯವನ್ನು ಜೈಲಿನಲ್ಲಿಯೇ ಕಳೆಯುವ ಸಜಾಬಂಧಿಗೆ, ಸಂಬಂಧಿಕರು ವಾರಸುದಾರರು ಯಾರು ಕೂಡ ಹತ್ತಿರ ಸುಳಿವುದಿಲ್ಲ. ಇಂತಹ ಕೈದಿಗಳ ಹೊಣೆ ಜೈಲು ಅಧಿಕಾರಿ ಸಿಬ್ಬಂದಿಗಳ ಮೇಲಿರುತ್ತೆ.

 

 

 

 

 

 

 

 

 

 

 

 

 

 

 

 

 

 

 

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor