ಸಂಚಾರ ಸಾಥಿ : ಮೊಬೈಲ್‌ನಲ್ಲಿ ಈ ಆ್ಯಪ್ ಇನ್ಮುಂದೆ ಕಡ್ಡಾಯ! ಏಕೆ ಗೊತ್ತಾ!? ಇಲ್ಲಿದೆ ಸಂಪೂರ್ಣ ಮಾಹಿತಿ

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಜನರ ಮೊಬೈಲ್ ಹಾಗೂ ಅವರ ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮವೊಂದನ್ನ ಕೈಗೊಂಡಿದೆ. ಇನ್ಮುಂದೆ ಮೊಬೈಲ್​ಗಳಲ್ಲಿ ಕೇಂದ್ರ ಸರ್ಕಾರದ ಆಪ್​ ಒಂದನ್ನ Sanchar Saathi app ಡಿಫಾಲ್ಟ್ ಆಗಿಸಿರುವ ಕೇಂದ್ರ ಸರ್ಕಾರ ಈ ಆಪ್​ ಅನ್ನು ಕಡ್ಡಾಯಗೊಳಿಸಿದೆ.  

Sanchar Saathi app is mandatory fo all phones
Sanchar Saathi app is mandatory fo all phones

VISL ಭವಿಷ್ಯ? ನ. 29-30 ರಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭೇಟಿ! ಕೇಂದ್ರ ಸಚಿವರ ಶಿವಮೊಗ್ಗ ಭದ್ರಾವತಿ ಪ್ರವಾಸದ ವೇಳಾಪಟ್ಟಿ

ಮೊಬೈಲ್‌ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ದೇಶದ ಎಲ್ಲಾ ಮೊಬೈಲ್‌ ಫೋನ್‌ಗಳಲ್ಲಿ ಇನ್ನು ಮುಂದೆ ಸಂಚಾರ ಸಾಥಿ (Sanchar Saathi) ಅಪ್ಲಿಕೇಶನ್‌ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಲು ಆದೇಶಿಸಿದೆ.

ಕುಂಸಿ ವೃದ್ದೆಯ ಕೊಲೆ ಪ್ರಕರಣ! ಕೊಂದಿದ್ದು ಮಗ ಅಲ್ಲ! ಮತ್ಯಾರು ?

ಅಕ್ರಮವಾಗಿ ಆಧಾರ್‌ ಕಾರ್ಡ್‌ ಬಳಸಿ ಸಿಮ್‌ ಕಾರ್ಡ್‌ಗಳನ್ನು ಪಡೆಯುವುದು, ಮೊಬೈಲ್‌ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಪ್ರತಿ ಮೊಬೈಲ್‌ಗೆ ನೀಡಲಾದ ಐಎಂಇಐ (IMEI – International Mobile Equipment Identity) ಸಂಖ್ಯೆಗಳನ್ನು ನಕಲು ಮಾಡುವಂತಹ ಹಲವು ರೀತಿಯ ವಂಚನೆಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಶಿಕಾರಿಪುರ : ಶಾಲೆ ಆವರಣದಲ್ಲಿದ್ದ ಮಕ್ಕಳ ಮೇಲೆ ಜೇನು ದಾಳಿ!

ಈ ಸಂಬಂಧ ದೂರಸಂಪರ್ಕ ಸಚಿವಾಲಯ ನವೆಂಬರ್‌ 28 ರಂದು ಮೊಬೈಲ್‌ಗಳನ್ನು ತಯಾರಿಸುವ ಕಂಪನಿಗಳು ಮತ್ತು ಅವುಗಳನ್ನು ಆಮದು ಮಾಡಿಕೊಳ್ಳುವ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿ ಆದೇಶ ಹೊರಡಿಸಿದೆ. ದೇಶದಲ್ಲಿ ಉತ್ಪಾದನೆಗೊಳ್ಳುವ ಅಥವಾ ಆಮದು ಮಾಡಿಕೊಳ್ಳುವ ಪ್ರತಿಯೊಂದು ಮೊಬೈಲ್‌ ಫೋನ್‌ನಲ್ಲಿಯೂ ‘ಸಂಚಾರ ಸಾಥಿ’ ಅಪ್ಲಿಕೇಶನ್‌ ಅನ್ನು ಮೊದಲೇ ಸ್ಥಾಪಿಸಬೇಕು ಎಂದು ಸಚಿವಾಲಯವು ಖಚಿತಪಡಿಸಿದೆ. ಇನ್ನೂ ಮಾರಾಟವಾಗದಿರುವ ಮೊಬೈಲ್‌ಗಳ ವಿಚಾರದಲ್ಲಿ, ಮೊದಲ ಸಾಫ್ಟ್‌ವೇರ್‌ ಅಪ್‌ಡೇಟ್‌ನೊಂದಿಗೆ ಈ ಆ್ಯಪ್‌ ಅನ್ನು ಬಳಕೆದಾರರಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ.

Sanchar Saathi app is mandatory fo all phones
Sanchar Saathi app is mandatory fo all phones

ವಿದೇಶದಲ್ಲಿ ಉದ್ಯೋಗದ ಆಮಿಷ : ಸೊರಬಾ ವ್ಯಕ್ತಿಗೆ ಲಕ್ಷಾಂತರ ರೂಪಾಯಿ  ವಂಚನೆ

ಹೊಸ ಮೊಬೈಲ್‌ಗಳನ್ನು ಆರಂಭಿಕವಾಗಿ ಸೆಟ್‌ಅಪ್‌ ಮಾಡುವ ಸಂದರ್ಭದಲ್ಲಿಯೇ ಬಳಕೆದಾರರಿಗೆ ಈ ಆ್ಯಪ್‌ನ ಉಪಸ್ಥಿತಿ ಸುಲಭವಾಗಿ ಗೋಚರಿಸುವಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲದೆ, ಈ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು (ಡಿಸೇಬಲ್‌ ಮಾಡುವುದು) ಅಥವಾ ತಡೆಗಟ್ಟುವುದು ಸಂಪೂರ್ಣವಾಗಿ ನಿಷಿದ್ಧ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 

ಇವತ್ತಿನದ ದಿನ ವಿಶೇಷದಲ್ಲಿ ಹಲವು ವಿಚಾರಗಳು! ದಿನಭವಿಷ್ಯ ಓದಿ

ಈ ನಿಯಮ ಪಾಲನೆ ಕುರಿತು, ಆದೇಶ ಹೊರಡಿಸಿದ 120 ದಿನಗಳ ಒಳಗೆ, ಉತ್ಪಾದಕ ಮತ್ತು ಆಮದು ಕಂಪನಿಗಳು ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಅಲ್ಲದೆ ಆದೇಶವನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ದೂರಸಂಪರ್ಕ ಕಾಯ್ದೆ – 2023 ಮತ್ತು ದೂರಸಂಪರ್ಕ ಸೈಬರ್‌ ಭದ್ರತಾ ನಿಯಮಗಳು – 2024 ಹಾಗೂ ಇತರೆ ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ಎಚ್ಚರಿಕೆ ನೀಡಿದೆ.

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಏನಿದು ಸಂಚಾರ ಸಾಥಿ ಅಪ್ಲಿಕೇಶನ್?

2023 ರಲ್ಲಿ ಕೇಂದ್ರ ಸರ್ಕಾರವು ಸಂಚಾರ ಸಾಥಿ ಆ್ಯಪ್‌ ಮತ್ತು ವೆಬ್‌ಸೈಟ್‌ ಅನ್ನು ಬಿಡುಗಡೆ ಮಾಡಿದೆ. ಕಳ್ಳತನವಾದ ಮೊಬೈಲ್‌ಗಳ ಪತ್ತೆ, ನಕಲಿ ಸಿಮ್‌ಗಳ ಬಳಕೆ ಮತ್ತು ಐಎಂಇಐ ಸಂಖ್ಯೆ ನಕಲು ಮಾಡುವ ಮೂಲಕ ನಡೆಯುವ ವಂಚನೆಗಳನ್ನು ಪತ್ತೆ ಹಚ್ಚಲು ಈ ಅಪ್ಲಿಕೇಶನ್ ಮಹತ್ತರ ಪಾತ್ರ ವಹಿಸುತ್ತದೆ.

ಈ ಆ್ಯಪ್‌ನ ಮೂಲಕ, ಕಳ್ಳತನವಾದ ಮೊಬೈಲ್‌ನ ಐಎಂಇಐ ಸಂಖ್ಯೆಯನ್ನು ದಾಖಲಿಸಿ, ಆ ಫೋನನ್ನು ನಿಷ್ಕ್ರಿಯಗೊಳಿಸುವ ಸೌಲಭ್ಯವಿದೆ. ಇದರಿಂದ ಆ ಫೋನನ್ನು ಯಾರೂ ಬಳಸಲು ಸಾಧ್ಯವಾಗುವುದಿಲ್ಲ. ವಿದೇಶದಲ್ಲಿ ಕುಳಿತು ಐಎಂಇಐ ಸಂಖ್ಯೆ ನಕಲು ಮಾಡಿಕೊಂಡು ಸೈಬರ್‌ ಅಪರಾಧಗಳು ಮತ್ತು ಬ್ಯಾಂಕ್‌ ಖಾತೆ ದುರುಪಯೋಗದಂತಹ ಹಲವು ಅಕ್ರಮಗಳನ್ನು ನಡೆಸಲಾಗುತ್ತದೆ. 

Sanchar Saathi app is mandatory fo all phones
Sanchar Saathi app is mandatory fo all phones

ಇಂತಹ ವಂಚನೆಗಳನ್ನು ತಡೆಗಟ್ಟಲು, ಗ್ರಾಹಕರು ಮೊಬೈಲ್‌ ಖರೀದಿಸುವ ಮೊದಲು ಈ ಆ್ಯಪ್‌ ಬಳಸಿಕೊಂಡು ತಾವು ಖರೀದಿಸಲಿರುವ ಫೋನ್‌ನ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಲು ಅವಕಾಶವಿದೆ. ಅಷ್ಟೇ ಅಲ್ಲದೆ, ತಮ್ಮ ಆಧಾರ್‌ ಕಾರ್ಡ್‌ ಅಥವಾ ಪಾಸ್‌ಪೋರ್ಟ್‌ ದಾಖಲೆಗಳನ್ನು ಬಳಸಿ ತಮ್ಮ ಅರಿವಿಲ್ಲದೆ ಅಕ್ರಮವಾಗಿ ಸಿಮ್‌ ಕಾರ್ಡ್‌ಗಳನ್ನು ಪಡೆದಿದ್ದರೆ, ಈ ಆ್ಯಪ್‌ ಮೂಲಕ ಅಂತಹ ಅನಧಿಕೃತ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸುವ ಸೌಲಭ್ಯವೂ ಇದೆ.

ಕನ್ನಡದಲ್ಲಿ ಸಿನಿಮಾವಾಯ್ತು ಈ ರೀಲ್ಸ್​ ಜೋಡಿಯ ರಿಯಲ್​ ಲೈಫ್​ ಸ್ಟೋರಿ: ಚಿತ್ರ ಯಾವುದು ಗೊತ್ತಾ..?

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

Sanchar Saathi app is mandatory fo all phones ಅಕ್ರಮ ಸಿಮ್, ಮೊಬೈಲ್ ಕಳ್ಳತನ ಮತ್ತು ಐಎಂಇಐ ನಕಲು ವಂಚನೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ. ಎಲ್ಲಾ ಫೋನ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಕಡ್ಡಾಯ ಇನ್‌ಸ್ಟಾಲೇಷನ್‌ಗೆ ಆದೇಶ. Central Governments crucial decision to prevent illegal SIMs, mobile theft, and IMEI cloning fraud. Sanchar Saathi app is now mandatory for pre-installation on all phones.