ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಶಿವಮೊಗ್ಗದಲ್ಲಿ ಸಂಚಾರ ಪೊಲೀಸ್ ಠಾಣೆ ಇದೆ, ಇತ್ತೀಚೆಗೆ ಭದ್ರಾವತಿಯಲ್ಲಿ ಸಂಚಾರ ಪೊಲೀಸ್ ಠಾಣೆ ಆಗಿದೆ. ಆದರೆ ಸಾಗರ ಉಪವಿಭಾಗದಲ್ಲಿ ಸಾಗರ ಪೇಟೆಗೆ ಇದುವರೆಗೂ ಸಂಚಾರ ಪೊಲೀಸ್ ಠಾಣೆ ಇಲ್ಲ. ಹೀಗಾಗಿ ಸಾಗರ ನಗರಕ್ಕೆ ಹೊಸ ಸಂಚಾರ ಪೊಲೀಸ್ ಠಾಣೆ (Traffic Police Station) ಯನ್ನು ಮಂಜೂರು ಮಾಡಿಕೊಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಕೊಟ್ಟಿದ್ದಾರೆ.
ಸಾಗರದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಅಣುಕು ಶವಯಾತ್ರೆ : ಕಾರಣವೇನು
ಸಾಗರದಲ್ಲಿ ಟ್ರಾಫಿಕ್ ಹೆಚ್ಚಿದೆ, ಸುತ್ತಮುತ್ತ ಪ್ರವಾಸಿ ತಾಣಗಳಿರುವುದರಿಂದ ನಿತ್ಯ ನೂರಾರು ಟೂರಿಸ್ಟ್ ವೆಹಿಕಲ್ಗಳು ಓಡಾಡುತ್ತಿರುತ್ತವೆ. ಹಾಗಾಗಿ ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್ ಸ್ಟೇಷನ್ ಒಂದರ ಅಗತ್ಯವಿದೆ ಎಂದು ಗೃಹಚಿವರಿಗೆ ಶಾಸಕರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೊರನಕೊಪ್ಪ ಬಳಿ ಟಿಟಿ ಪಲ್ಟಿ: ಸಿಗಂದೂರು ಚೌಡೇಶ್ವರಿ ದರ್ಶಕ್ಕೆ ತೆರಳುತ್ತಿದ್ದ 12 ಮಹಿಳೆಯರಿಗೆ ಗಾಯ!

ಸಿಗಂದೂರು ಪೊಲೀಸ್ ಠಾಣೆಗೆ ಒತ್ತಾಯ
ಸಂಚಾರ ಪೊಲೀಸ್ ಠಾಣೆಯಷ್ಟೆ ಅಲ್ಲದೆ, ಸಿಗಂದೂರು ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಿರುವುದರಿಂದ, ಕ್ಷೇತ್ರಕ್ಕೆ ಹೊಂದಿಕೊಂಡಂತೆ, ಈ ಭಾಗದಲ್ಲಿ ಒಂದು ಹೊಸ ಪೊಲೀಸ್ ಠಾಣೆಯನ್ನು ಮಂಜೂರು ಮಾಡುವಂತೆ ಸಹ ಶಾಸಕರು ಕೋರಿದ್ದಾರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!