ಸಾಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಅವಾಂತರ/ ಬೆಳಗ್ಗೆ ಬೆಳಗ್ಗೆ ಹೊಂಡಕ್ಕೆ ಬಿದ್ದ ಕಾರು/ ಬೈಕ್​ಗಳ ನಡುವೆ ಡಿಕ್ಕಿ

ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಆಕ್ಸಿಡೆಂಟ್​ಗಳು ಆಗುತ್ತಿವೆ. ಇದಕ್ಕೆ ಪೂರಕವಾಗಿ ಇವತ್ತು ಎರಡು ಆಕ್ಸಿಡೆಂಟ್ ಗಳಾಗಿದೆ. ಒಂದು ಘಟನೆ ಗಣಪತಿ ಕೆರೆಯ ಬಳಿಯಲ್ಲಿ ಸಂಭವಿಸಿದರೆ, ಇನ್ನೊಂದು ಘಟನೆ ಬಸವನ ಹೊಳೆ ಬಳಿ ಸಂಭವಿಸಿದೆ.

ಸಾಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಅವಾಂತರ/ ಬೆಳಗ್ಗೆ ಬೆಳಗ್ಗೆ ಹೊಂಡಕ್ಕೆ ಬಿದ್ದ ಕಾರು/  ಬೈಕ್​ಗಳ ನಡುವೆ ಡಿಕ್ಕಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸದ್ಯ ರಸ್ತೆ ಅಗಲೀಕರಣ ಕಾಮಗಾರಿ ಜೋರಾಗಿ ನಡೆಯುತ್ತಿದೆ. ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದೆಯಾದರೂ, ಇನ್ನೊಂದೆಡೆ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಆಕ್ಸಿಡೆಂಟ್​ಗಳು ಆಗುತ್ತಿವೆ.  ಇದಕ್ಕೆ ಪೂರಕವಾಗಿ ಇವತ್ತು ಎರಡು ಆಕ್ಸಿಡೆಂಟ್ ಗಳಾಗಿದೆ. ಒಂದು ಘಟನೆ ಗಣಪತಿ ಕೆರೆಯ ಬಳಿಯಲ್ಲಿ ಸಂಭವಿಸಿದರೆ, ಇನ್ನೊಂದು ಘಟನೆ ಬಸವನ ಹೊಳೆ ಬಳಿ ಸಂಭವಿಸಿದೆ. 

ಸಾಗರ ಸುದ್ದಿ : ಮದುವೆಯಾಗಿ ವರುಷ ತುಂಬಲಿಲ್ಲ/ ಏಳೇ ತಿಂಗಳಲ್ಲಿ ಗೃಹಿಣಿ ಸಾವಿಗೆ ಶರಣು/ ಕಾರಣವೇನು?

ಬೈಕ್​ಗಳ ನಡುವೆ ಡಿಕ್ಕಿ

ಇವತ್ತು ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ, ಟಿವಿಎಸ್​ ಎಕ್ಸ್​ಲ್ ಹಾಗೂ ಇನ್ನೊಂದು ಬೈಕ್​ನ ನಡುವೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ಧಾನೆ. ಘಟನೆಯಲ್ಲಿ ಶಿವಮೊಗ್ಗದ ಕಡೆಯಿಂದ ಬರುತ್ತಿದ್ದ ಬೈಕ್​ ಹಾಗೂ ರೋಡ್​ನಲ್ಲಿ ಟರ್ನ್​ ತೆಗೆದುಕೊಳ್ತಿದ್ದ  ಎಕ್ಸ್​ಲ್ ಗಾಡಿಗೆ ಡಿಕ್ಕಿಯಾಗಿದೆ. ಆಕ್ಸಿಡೆಂಟ್ ಆದ ರಭಸಕ್ಕೆ ನಿಯಂತ್ರಣ ತಪ್ಪಿ ಬೈಕ್​, ಅಲ್ಲಿಯೇ ನಡೆಯುತ್ತಿದ್ದ ಅಗಲೀಕರಣ ಕಾಮಗಾರಿಯ ಹೊಂಡಕ್ಕೆ ಬಿದ್ದಿದೆ. ಪರಿಣಾಮ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. 

ಪೋಷಕರು ಓದಲೇ ಬೇಕಾದ ಸುದ್ದಿ : ಬೈಕ್​ ಓಡಿಸುವ ಮಕ್ಕಳ ಪೋಷಕರಿಗೆ ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ

ಹೊಂಡಕ್ಕೆ ಬಿದ್ದ ಕಾರು

ಇನ್ನೊಂದು ಘಟನೆ ಇವತ್ತು ಬೆಳಗ್ಗಿನ ಜಾವ ಸಂಭವಿಸಿದ್ದು, ಘಟನೆಯಲ್ಲಿ ಸ್ಪೀಡ್ ಆಗಿ ಬಂದ ಕಾರೊಂದು, ನೇರವಾಗಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬಿದ್ದಿದೆ. ಕಾಮಗಾರಿಗಾಗಿ ಕಟ್ಟಿದ್ದ  ಕಟ್ಟಿದ್ದ ಕಟ್ಟೆಗಳ ನಡುವೆ ಬಿದ್ದಿರುವ ಕಾರು ಅಲ್ಲಿಯೇ ಸಿಲುಕಿಕೊಂಡಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.

ಶಿವಮೊಗ್ಗ ಬರ್ತಾರೆ ಭಾಗವತ್​: ಇವತ್ತು ಶಿವಮೊಗ್ಗಕ್ಕೆ RSS ನ ಹಿರಿಯ ನಾಯಕ ಮೋಹನ್​ ಭಾಗವತ್​ ಭೇಟಿ/ ಕಾರಣವೇನು ಓದಿ

ಸ್ಥಳೀಯರ ಆರೋಪ

ಇನ್ನೂ ಸ್ಥಳೀಯರು, ಅಗಲೀಕರಣ ಕಾಮಗಾರಿಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿಲ್ಲ, ಹೊಂಡ ತೆಗೆದಿರುವ ಜಾಗಗಳಲ್ಲಿ ವಾಹನ ಸಂಚಾರಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಿಲ್ಲ, ಮುನ್ನೆಚ್ಚರಿಕಾ ಬೋರ್ಡ್​ಗಳನ್ನು ಹಾಕಿಲ್ಲ, ಹೀಗಾಗಿ ಆಕ್ಸಿಡೆಂಟ್​ಗಳು ಸಂಭವಿಸುತ್ತಿವೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಲ್ಲಿ ಮುನ್ನೆಚ್ಚರಿಕೆ ವಹಿಸುವ ಕ್ರಮಗಳನ್ನು ಕೈಗೊಳ್ಳಲಿ ಎನ್ನುತ್ತಿದ್ದಾರೆ. 

ಮೋದಿಯವರ ತಾಯಿ ನಿಧನ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್​ ನಿಧನ

ಗ್ರಾಹಕರಿಗೆ ಹೊರೆ ಇಳಿಸಿದ ಸರ್ಕಾರ/ ಮೆಸ್ಕಾಂ, ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್​ ದರ ಇಳಿಕೆ/ ಎಷ್ಟು ಕಮ್ಮಿಯಾಗಿದೆ? ವಿವರ ಇಲ್ಲಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ