ಒಂದಾದ ಶಿಕಾರಿಪುರ ಕಾಂಗ್ರೆಸ್​! ಬಿಎಸ್​ವೈ ಕುಟುಂಬದ ವಿರುದ್ಧದ ಅಖಾಡಕ್ಕೆ ಹೊಸ ಟೀಂ ರೆಡಿ! ಭಾವುಕರಾಗಿದ್ದೇಕೆ ಮಧು ಬಂಗಾರಪ್ಪ ?

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಶಿಕಾರಿಪುರದಲ್ಲಿ ಕಾಂಗ್ರೆಸ್ ಕಛೇರಿ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಾರದಿರುವುದಕ್ಕೆ ಬೇರೆಯದೇ ರೀತಿ ಅರ್ಧ ಕಲ್ಪಿಸಲಾಗಿತ್ತು. ನೆನ್ನೆ ಶಿಕಾರಿಪುರದ ಬಯಲು ರಂಗಮಂದಿರದಲ್ಲಿ ನಡೆದ ಸಮಾರಂಭ ಇಂತಹ ಊಹಾಪೋಹಗಳಿಗೆಲ್ಲಾ ತೆರೆ ಎಳೆಯಿತು. 

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಗೋಣಿ  ಮಾಲ್ತೇಶ್​  ಹಾಗು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಳಿದಿದ್ದ ನಾಗರಾಜಗೌಡರ ಬಣಗಳನ್ನು ಒಗ್ಗೂಡಿಸುವಲ್ಲಿ ಮಧು ಬಂಗಾರಪ್ಪ . ಆರ್ ಪ್ರಸನ್ನ ಕುಮಾರ್ ಆರ್ ಎಂ ಮಂಜುನಾಥ್ ಗೌಡ  ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಹಾಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಪ್ರಮುಖ ಪಾತ್ರ ವಹಿಸಿದ್ದರು. ಇದರ ಮಂದುವರೆದ ಭಾಗವಾಗಿ ಶಿಕಾರಿಪುರದಲ್ಲಿ ಮಧು ಬಂಗಾರಪ್ಪರಿಗೆ ಅಭಿನಂದನಾ ಸಮಾರಂಭ ಹಾಗು ಕಾರ್ಯಕರ್ತರ ಸಮಾವೇಶವನ್ನು ಶಿಕಾರಿಪುರದ ಬಯಲು ರಂಗಮಂದಿರಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಸಮಾರಂಭದಲ್ಲಿ ಮಾತನಾಡಿದ ನಾಗರಾಜಗೌಡ, ಮಧು ಬಂಗಾರಪ್ಪರಿಗೆ ತಿಳಿಸದೆ ಶಿಕಾರಿಪುರದಲ್ಲಿ ಕಾರ್ಯಕ್ರಮವನ್ನು ಈ ಹಿಂದೆ ಹಮ್ಮಿಕೊಂಡಿದ್ದೆವು. ಆದರೆ ಅವರು ಬ್ಯುಸಿ ಇದ್ದ ಕಾರಣ ಬರಲಾಗಲಿಲ್ಲ. ನಾವು ಅವರಿಗೆ ಕೇಳದೆ ದಿನಾಂಕ ನಿಗದಿ ಮಾಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ನಮ್ಮ ಹೋರಾಟ ಏನಿದ್ದರೂ ಸ್ವಾಭಿಮಾನಿ ಹೋರಾಟ.

ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಮಕ್ಕಳ ರಾಜಕೀಯವನ್ನು ಅಂತ್ಯಗೊಳಿಸುವುದೇ ಆಗಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಬಡವರಿಗೆ ನ್ಯಾಯ ಸಿಗದಂತಾಗಿದೆ. 2023 ಚುನಾವಣೆಯಲ್ಲಿ ಬಿಜೆಪಿ ಸೋಲುಸಲು ನಾನು ಕಾಂಗ್ರೆಸ್ ನಿಂದ ಬಂಡಾಯವಾಗಿ ನಿಂತೇ ಹೊರತು ಗೋಣಿ ಮಾಲ್ತೇಶ್ ವಿರುದ್ಧ ಅಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶಿಕಾರಿಪುರ ಕ್ಷೇತ್ರದಿಂದ ಹೆಚ್ಚಿನ ಲೀಡ್ ಕೊಡಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಿಕಟಪೂರ್ವ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲ್ತೇಶ್ ವೇದಿಕೆಯಲ್ಲಿ ಭಾವುಕರಾಗಿ ಮಾತನಾಡಿದರು.. ಬಂಗಾರಪ್ಪರ ಒಡನಾಟವನ್ನು ಮೆಲಕು ಹಾಕಿ ಮಾತನಾಡಿದ ಅವರು, ಮಧು ಬಂಗಾರಪ್ಪ ರಾಜ್ಯದಲ್ಲಿ ಹಿಂದುಳಿದ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ. ನಾನು ಕೊನೆ ಉಸಿರು ಉರುವವರೆಗೂ ಕಾಂಗ್ರೆಸ್ ಗಾಗಿ ಕೆಲಸ ಮಾಡುತ್ತೇನೆ. ನಾನೆಂದು ನನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪನವರ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಶಿಕಾರಿಪುರದಲ್ಲಿ ಇನ್ನು ಮುಂದೆ ಎರಡು ಕಾಂಗ್ರೆಸ್ ಬಣಗಳಿಲ್ಲ. ಕಾಂಗ್ರೆಸ್ ಕಛೇರಿ ಒಂದೇ ನಾವೆಲ್ಲರು ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆಗೆ ಕೆಲಸ ಮಾಡಬೇಕಿದೆ ಎಂದು ಹೇಳಿದ್ರು.

ಇನ್ನು ವಿಧಾನಸಙೆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ಪರವೇ ಒಲವು ಹೊಂದಿದ್ದರು ಎಂದು ಬಹಿರಂಗವಾಗಿ ಸತ್ಯ ಹೇಳಿದ ಗೋಣಿ ಮಾಲ್ತೇಶ್​ ವೇದಿಕೆಯಲ್ಲಿಯೇ ಹಾಸ್ಯ ಮಾಡಿದರು, ನಾಗರಾಜಗೌಡ ಗಾಳಿಯ ವೇಗದಲ್ಲಿ ಗೆದ್ದು ಹೋಗಲಿ ಎಂದು ನನ್ನ ಮನಸ್ಸಿನಲ್ಲೂ ಅಂದುಕೊಂಡಿದ್ದೆ. ನಮ್ಮಿಬ್ಬರ ಹೋರಾಟ ಬಿಜೆಪಿ ವಿರುದ್ಧವೇ ಆಗಿತ್ತು ಹೊರತು ಪಡಿಸಿದರೆ, ವೈಯಕ್ತಿಕ ದ್ವೇಷಕ್ಕಲ್ಲ ಎಂದು ಸ್ಪಷ್ಟಪಡಿಸಿದರು.

ಶಿಕಾರಿಪುರ ಸೊರಬ ನನ್ನ ಎರಡು ಕಣ್ಣುಗಳು ಮದು ಬಂಗಾರಪ್ಪ

ಶಿಕಾರಿಪುರದ ಕಾಂಗ್ರೆಸ್ ಪಾಲಿಗೆ ನಾಗರಾಜಗೌಡ ಮತ್ತು ಗೋಣಿ ಮಾಲ್ತೇಶ್ ಬಣ ಒಂದಾಗಿದ್ದು, ಉತ್ತಮ ಬೆಳವಣಿಗೆ ಎಂದು ಮಧು ಬಂಗಾರಪ್ಪ ಹೇಳಿದರು. ಬರಗಾಲದ ಸಂದರ್ಭದಲ್ಲಿ ತಂದೆ ಬಂಗಾರಪ್ಪರು, ಕೇವಲ ಸೊರಬಕ್ಕೆ ಮಾತ್ರ ಅಕ್ಕಿ ಭತ್ತದ ಬೀಜ ವಿತರಿಸಲಿಲ್ಲ, ಶಿಕಾರಿಪುರ ತಾಲೂಕಿನ ಜನತೆಗೆ ಅವರು ಸ್ಪಂಧಿಸಿದ್ದಾರೆ. ಸೊರಬ ಶಿಕಾರಿಪುರ ನೀರಾವರಿ ಯೋಜನೆಗೆ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ನಾಗರಾಜಗೌಡ ವಿರೋಧಿಸಿದ್ರು. ಆದ್ರೆ ಅವರಿಗೆ ತಪ್ಪಿನ ಅರಿವಾಗಿ ಕ್ಷಣೆ ಕೇಳಿದ್ರು. ಕ್ಷಮಿಸುವುದು ಕಾಂಗ್ರೆಸ್ ಗುಣ. ಅಂದೇ ನಾಗರಾಜಗೌಡರ ಮೇಲೆ ಒಂದು ಕಣ್ಣಿಟ್ಟಿದೆ.

 ಶಿಕಾರಿಪುರದಲ್ಲಿ ರಾಜಕೀಯ ಬದಲಾವಣೆ ಬಯಸ್ಸಿದ್ದರಿಂದ ಅನಿವಾರ್ಯವಾಗಿ ನಾನು ಕೂಡ ನಾಗರಾಜಗೌಡ ಪರ ಒಲವು ಹೊಂದಿದ್ದೆ ಎಂದು ಬಹಿರಂಗವಾಗಿಯೇ ಮಧು ಬಂಗಾರಪ್ಪ ಸತ್ಯ ಒಪ್ಪಿಕೊಂಡರು.ನಾನು ನಾಗರಾಜಗೌಡ ಪರ ಒಲವು ಹೊಂದಿದ್ರೂ, ಗೋಣು ಮಾಲ್ತೇಶ್​ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ ಎಂದು ಹೇಳಿದ್ರು. ಗೋಣಿ ಮಾಲ್​ತೇಶ್ ನಮ್ಮ ಅಪ್ಪ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿಲ್ಲ ಎಂಬುದನ್ನು ಹೊರತು ಪಡಿಸಿದರೆ ಅವರು ಎಂದಿಗೂ ಬಂಗಾರಪ್ಪನವರ ಮಗನಂತೆ ಇದ್ದಾರೆ ಎಂದು ಮಧು ಬಂಗಾರಪ್ಪ ಭಾವುಕರಾದ್ರು.

ಕುರುಡನ ಮೇಲೆ ಕುಂಟ ಕುಂತಂಗಾಗಿದೆ ಬಿಜೆಪಿ ಪರಿಸ್ಥಿತಿ-ಆಯನೂರು ಮಂಜುನಾಥ್

ಇನ್ನು ವೇದಿಕೆಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಭಾಷಣಕ್ಕೆ ಕಾರ್ಯಕರ್ತರು ಫಿದಾ ಆದರು. ಅವರು ಪ್ರತಿ ಹಾಸ್ಯ ಪ್ರಸಂಗದ ಮಾತಿಗೆ ಸಿಳ್ಳೆ ಕೇಕೆಗಳು ಮಾರ್ಧನಿಸಿದವು. ಮಹಾಭಾರತ ಸನ್ನಿವೇಶವನ್ನು ಉಲ್ಲೇಖಿಸಿ ಬಿಜೆಪಿ ಸಧ್ಯದ ಪರಿಸ್ಥಿತಿಯನ್ನು ವ್ಯಾಖ್ಯಾಯಿನಿಸಿದ ಅವರು, ಬಿಜೆಪಿಯಲ್ಲಿ ಅವರಿಬ್ಬರ ಪರಿಸ್ಥಿತಿ ಕುರುಡನ ಮೇಲೆ ಕುಂಟ ಕೂತಂಗಾಗಿದೆ ಎಂದು ಹೇಳಿದರು. ಹೆಗಲ ಮೇಲೆ ಕುಂತ ಕುರುಡ ಇತ್ತಹೋಗು ಅತ್ತ ಹೋಗು ಅಂತಿದ್ದರೆ, ಕುರುಡ ಅಂದಾಜಿನ ಮೇಲೆ ಅಕ್ಕಪಕ್ಕ ಹೆಜ್ಜೆ ಹಾಕುತ್ತಾ ಮುಂದೆ ಸಾಗುತ್ತಾನೆ. ಆದರೆ ಇವರಿಬ್ಬಲ್ಲಿ ಯಾರು ಮೊದಲು ಬೀಳುತ್ತಾರೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಬ್ಬರ ಪರಿಸ್ಥಿತಿ ಉಲ್ಲಖಿಸಿ ಮಾತನಾಡಿದ್ರು.

ಇನ್ನು ಗೋಣಿ ಮಾಲ್ತೇಶ್ ಹಾಗು ನಾಗರಾಜ್ ಗೌಡ ಬಣ ಒಗ್ಗೂಡಿದ್ದಕ್ಕೆ ಕೆಪಿಸಿಸಿ ಕಾರ್ಯದ್ಯಕ್ಷ ಚಂದ್ರಪ್ಪ ಹರ್ಷ ವ್ಯಕ್ತಪಡಿಸಿದರು. ಮಂದಿನ ಎಲ್ಲಾ ಚುನಾವಣೆಯಲ್ಲೂ ಇಬ್ಬರೂ ಒಗ್ಗೂಡಿ ಚುನಾವಣೆ ಎದುರಿಸಲು ಕರೆ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಎರಡು ಬಣದ ನಾಯಕರು ಒಗ್ಗೂಡಿ ಶಿಕಾರಿಪುರದಲ್ಲಿ ಕಾಂಗ್ರೆಸ್ ನನ್ನು ಮತ್ತಷ್ಟು ಬಲಪಡಿಸೋಣ ಸಲಹೆ ನೀಡಿದ್ರು. ಆರ್ ಎಂ ಮಂಜುನಾಥ್ ಗೌಡರು ಶಿಕಾರಿಪುರದಲ್ಲಿ ಕಾಂಗ್ರೆಸ್ ಗೆ ಗೋಣಿ ಮಹಂತೇಶ್ ಹಾಗು ನಾಗರಾಜ ಗೌಡ ಶಕ್ತಿಯಾಗಿದ್ದಾರೆ ಇವರ ಒಗ್ಗ್ಗಟ್ಟು ಕಾರ್ಯಕರ್ತರಿಗೆ ಶಕ್ತಿ ತುಂಬಲಿ ಎಂದು ಹೇಳಿದರು. ಆರ್. ಪ್ರಸನ್ನ ಕುಮಾರ್ ಮಾತನಾಡಿ ಲೋಕಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಕಾಂಗ್ರೆಸ್ ಗೆ ಒಂದು ಲಕ್ಷ ಮತಗಳು ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.ಸಮಾರಂಭಲ್ಲಿ ರಾಘು, ರಾಘವೇಂದ್ರ ನಾಯಕ್,ಉಲ್ಮಾರ್ ಮಹೇಶ್, ರಮೇಶ್, ನಗರ ಮಹದೇವಪ್ಪ, ಮರಿಯಪ್ಪ, ದರ್ಶನ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.


ಇನ್ನಷ್ಟು ಸುದ್ದಿಗಳು 

 


 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು