ಸಾಲ ಕಟ್ಟಿಸಿಕೊಳ್ತಿದ್ದ ರಿಕವರಿ ಆಫೀಸರ್​ನಿಂದಲೇ ನಡೀತು ವಂಚನೆ! ಕಂತು ಕಟ್ಟಿದ್ದ ಮಹಿಳೆಯರಿಗೆ ಕಾದಿತ್ತು ಶಾಕ್!

A microfinance company has lodged a complaint against its staff at Jayanagar police station ಮೈಕ್ರೋ ಫೈನಾನ್ಸ್​ವೊಂದು ತನ್ನ ಸಿಬ್ಬಂದಿ ವಿರುದ್ಧ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಿಸಿದೆ

ಸಾಲ ಕಟ್ಟಿಸಿಕೊಳ್ತಿದ್ದ ರಿಕವರಿ ಆಫೀಸರ್​ನಿಂದಲೇ ನಡೀತು ವಂಚನೆ!  ಕಂತು ಕಟ್ಟಿದ್ದ ಮಹಿಳೆಯರಿಗೆ ಕಾದಿತ್ತು ಶಾಕ್!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS 

ಮಹಿಳಾ ಸಂಘದ ಸದಸ್ಯರು ಕಟ್ಟಿದ ಸಾಲದ ಹಣವನ್ನು ಫೈನಾನ್ಸ್​ ಕಂಪನಿಗೆ ಕಟ್ಟದೆ, ತನ್ನದೇ ಅಕೌಂಟ್​ಗೆ ಜಮೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್​ ದಾಖಲಾಗಿದೆ. 

ಈ ಸಂಬಂಧ ಫೈನಾನ್ಸ್​ ಕಂಪನಿಯ ಬ್ರಾಂಚ್ ಮ್ಯಾನೇಜರ್​ ಕಂಪ್ಲೆಂಟ್ ದಾಖಲಿಸಿದ್ದು, ದಾಖಲಾಗಿರುವ ಎಫ್ಐಆರ್​ ಪ್ರಕಾರ, ಮಾರುತಿ ಎಂಬವರು ಫೈನಾನ್ಸ್​ನಲ್ಲಿ ರಿಕವರಿ ಆಫಿಸರ್ ಆಗಿ ಕೆಲಸ ಮಾಡುತ್ತಿದ್ದರಂತೆ. 2022 ರಿಂದ ಕೆಲಸದಲ್ಲಿದ್ದ ಇವರು, ಸ್ವಹಾಯ ಸಂಘದ ಮಹಿಳೆಯರಿಗೆ ನೀಡಿದ ಸಾಲದ ಕಂತುಗಳನ್ನು ರಿಕವರಿ ಮಾಡಿ ಫೈನಾನ್ಸ್​ಗೆ ಹಣವನ್ನು ಕಟ್ಟುವ ಜವಾಬ್ದಾರಿ ಹೊತ್ತಿದ್ದರು.

ಆದರೆ ಮಾರುತಿ ಪ್ರತಿತಿಂಗಳು ತಮ್ಮ ಅಕೌಂಟ್​ಗೆ ಹಣ ಗೂಗಲ್ ಪೇ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು,  27 ಮಹಿಳೆಯರಿಂದ ಸಂಗ್ರಹಿಸಿದ 92, 525 ರೂಪಾಯಿ ಫೈನಾನ್ಸ್​ಗೆ ಕಟ್ಟದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.   


ಇನ್ನಷ್ಟು ಸುದ್ದಿಗಳು