ಹೊಳೆಹೊನ್ನೂರು ಗಾಂಧಿ ಸರ್ಕಲ್​ನಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಧ್ವಂಸ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 21, 2023 SHIVAMOGGA NEWS

ಸರ್ಕಲ್​ನಲ್ಲಿದ್ದ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಕೆಡವಿ ಹಾಕಿದ ಘಟನೆ ಸಂಬಂಧ ಹೊಳೆಹೊನ್ನೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮಹಾತ್ಮಗಾಂಧಿ ಸರ್ಕ್​​ಲ್​ನಲ್ಲಿ ಮಹಾತ್ಮ ಗಾಂಧಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಪ್ರತಿಮೆ ಸುತ್ತ ಮಂಟಪವನ್ನು ಸಹ ನಿರ್ಮಿಸಿ, ವಿಶೇಷವಾದ ಗೌರವವನ್ನು ನೀಡಲಾಗುತ್ತಿತ್ತು. 

ನಿನ್ನೆ ರಾತ್ರಿ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಗಾಂಧಿಜಿಯವರ ಪ್ರತಿಮೆಯನ್ನು ಕೆಡವಿದ್ದಾರೆ. ಮೂರ್ತಿಯನ್ನು ಧ್ವಂಸಗೊಳಿಸಿದಷ್ಟೆ ಅಲ್ಲದೆ, ಅದನ್ನು ಬೀಳಿಸಿ ಪುಡಿ ಮಾಡಿದ್ಧಾರೆ. ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಇನ್ನೂ ಇವತ್ತು ಬೆಳಗ್ಗೆ ವಿಚಾರ ತಿಳಿಯುತ್ತಲೇ ಪ್ರತಿಮೆ ಬಳಿಯಲ್ಲಿ ನೂರಾರು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಮೆಯನ್ನು ಬೀಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಬಂದಿದ್ದು, ಪರಿಶೀಲನೆ ನಡೆಸ್ತಿದ್ದಾರೆ. 

ಮಾರ್ಕೆಟ್​ಗೆ ಬಂದ 340 ಕೆಜಿ ತೂಕದ ಮೀನು! ಮೊಬೈಲ್​ನಲ್ಲಿ ಶೂಟ್​ ಮಾಡಿ ಸೆರೆ ಹಿಡಿದ ಮಂದಿ!

ಮಲೆನಾಡಿನಲ್ಲಿ ಮೀನಿಗೆ ವಿಶೇಷವಾದ ಆದ್ಯತೆ ಇದೆ. ವಿವಿಧ ಜಾತಿಗಳ ಮೀನುಗಳ ಬಗ್ಗೆ ಮಲೆನಾಡಿಗರ ನಡುವೆ ಕಥೆಗಳೇ ಸೃಷ್ಟಿಯಾಗುತ್ತವೆ. ಇದರ ನಡುವೆ ಕೆಲವೊಂದು ಮೀನುಗಳು ಅಚ್ಚರಿಯನ್ನು ಮೂಡಿಸುತ್ತದೆ. ಇದಕ್ಕೆ ಪೂರಕ ಎಂಬಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ  ಅಪರೂಪದ ತಳಿ ಅಂಬೂರು ಸಮುದ್ರ ಮೀನೊಂದು ನಿನ್ನೆ ಮೀನು ಮಾರುಕಟ್ಟೆಯಲ್ಲಿ ಜೋರು ಸದ್ದು ಮಾಡಿತ್ತು. 

ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರದ ಮೀನೊಂದು (Ambur Sea Fish) ನಿನ್ನೆ ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಗೆ ಬಂದಿತ್ತು. ಮೀನು ಖರೀದಿಗೆ ಬಂದವರು, ಖರೀದಿ ಬಿಟ್ಟು ಗಜಗಾತ್ರ ಮೀನಿನ ವಿಡಿಯೋ ಮಾಡುತ್ತಾ ನಿಂತಿದ್ದರು. ಆನಂತರ  1 ಕೆಜಿ ಮೀನಿಗೆ 1000 ರೂಪಾಯಿಗೂ ಹೆಚ್ಚು ಡಿಮ್ಯಾಂಡ್​ನೊಂದಿಗೆ ಮೀನು ಮಾರಾಟವಾಗಿದೆ.  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor