ತಮಗೆ ಸಿಕ್ಕ ಶಿಕ್ಷಣ ಖಾತೆಯ ಹಿಂದಿನ ಸೀಕ್ರೆಟ್ ಹೇಳಿದ ಮಧು ಬಂಗಾರಪ್ಪ ! ಏನದು ಗೊತ್ತಾ?

Malenadu Today

KARNATAKA NEWS/ ONLINE / Malenadu today/ Sep 13, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರು ಆದ ಮಧು ಬಂಗಾರಪ್ಪನವರು ಇಂದು ಸೊರಬದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  1 ಕೋಟಿ 20 ಲಕ್ಷ ವಿದ್ಯಾರ್ಥಿಗಳು ನಮ್ಮ‌ಇಲಾಖೆ ಅಡಿ ಬರ್ತಾರೆ. 3½ ಲಕ್ಷ ಶಿಕ್ಷಕರಿದ್ದಾರೆ. ಶಿಕ್ಷಕರ ಕೊರತೆ ಇದೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಖಾತೆ ಹಂಚಿಕೆಗೂ ಮೊದಲು ತಮಗೆ ಬೇರೆ ಖಾತೆಯನ್ನು ಲಿಸ್ಟ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೆಪಿಸಿಸಿ ಅದ್ಯಕ್ಷರು ಮಧು ಬಂಗಾರಪ್ಪರವರಿಗೆ ಕಷ್ಟದ ಖಾತೆ ಕೊಟ್ಟರೇ ಚೆನ್ನಾಗಿ ಕೆಲಸ ಮಾಡುತ್ತಾರೆ  ಎಂದು ನನಗೆ ಈ ಖಾತೆಯನ್ನು ವಹಿಸಿದರು. ಹಾಗಾಗಿ ಸವಾಲಿನ ಇಲಾಖೆ ದೊರೆತಿದೆ ಎಂದರಷ್ಟೆ ಅಲ್ಲದೆ, ಪೂರಕ ಪರೀಕ್ಷೆ ಬರೆದ 1.20 ಲಕ್ಷ ಮಕ್ಕಳ ಪೈಕಿ. 42 ಸಾವಿರ ಮಕ್ಕಳು ಇದೇ ವರ್ಷ ಪಾಸಾಗಿದ್ದಾರೆ. ನನ್ನ ತೀರ್ಮಾನ ಸರಿಯಿದೆಯೋ ಅಥವ ಇಲ್ಲವೋ ನೀವೆ ಹೇಳಿ ಎಂದು ಪ್ರಶ್ನಿಸಿದ್ರು. 

ಮಕ್ಕಳು ಪಾಸ್ ಅಥವಾ ಪೇಲ್​ ಅನ್ನುವುದು ಮುಖ್ಯವಲ್ಲ, ಅವರು ಓದುವುದು ಮುಖ್ಯ ಅವರ ಕಲಿಕೆಯು ಮುಖ್ಯ ಎಂದರು.ಈ ವೇಳೆ ಮುಂದಿನ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ.  ಕನಿಷ್ಠ 500-600 ಶಾಲೆಗಳು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ರು. .

  


ಇನ್ನಷ್ಟು ಸುದ್ದಿಗಳು 

 


 

Share This Article