ಎಸ್​.ಬಂಗಾರಪ್ಪ BUS STOP ಗೋಪಾಲಗೌಡ ಬಸ್​ ನಿಲ್ದಾಣ ಆಗಿದ್ದೇಗೆ? ಮಧು ಬಂಗಾರಪ್ಪ ಅಧಿಕಾರಿ ವಿರುದ್ಧ ಕ್ರಮ ಎಂದಿದ್ದೇಕೆ?ಒಂದು ಹೆಸರಿನ ಕಥೆ

Madhu Bangarappa has objected to the name change of S. Bangarappa bus stand which was in Sharavathi Dental College area.ಶರಾವತಿ ಡೆಂಟಲ್ ಕಾಲೇಜು ಜಾಗದಲ್ಲಿದ್ದ ಎಸ್​.ಬಂಗಾರಪ್ಪ ಬಸ್ ನಿಲ್ದಾಣದ ಹೆಸರು ಬದಲಾಯಿಸಿದ್ದಕ್ಕೆ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ

ಎಸ್​.ಬಂಗಾರಪ್ಪ BUS STOP  ಗೋಪಾಲಗೌಡ ಬಸ್​ ನಿಲ್ದಾಣ ಆಗಿದ್ದೇಗೆ? ಮಧು ಬಂಗಾರಪ್ಪ ಅಧಿಕಾರಿ ವಿರುದ್ಧ ಕ್ರಮ  ಎಂದಿದ್ದೇಕೆ?ಒಂದು ಹೆಸರಿನ ಕಥೆ

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS

ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಅಧಿಕಾರಿಗಳ ಸಭೆಯ ನಡೆಸಿದರು. ಈ ವೇಳೆ ಬಂಗಾರಪ್ಪಾಜಿ ಬಸ್ ನಿಲ್ದಾಣದ ಬಗ್ಗೆ ಚರ್ಚೆಯಾಯ್ತು.  

ಸ್ಮಾರ್ಟ್ ಸಿಟಿ ಕಾಮಗಾರಿಯ ಅವ್ಯವಹಾರದ ಬಗ್ಗೆ ಸಭೆಯಲ್ಲಿ ಚರ್ಚೆಯಾಗುತ್ತಿತ್ತು. ಈ ವೇಳೆ ದಾಖಲಾದ ಆಕ್ಷೇಪಗಳ ಲಿಸ್ಟ್ ನೋಡಿ ಮಧು ಬಂಗಾರಪ್ಪರವರು  ಕಾಮಗಾರಿಗಳ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಕಾಮಗಾರಿ ಬಗ್ಗೆ ತನಿಖೆಯಾಗಲಿ ಎಂದರು. 

ಇನ್ನೂ ಇದೇ ವೇಳೆ ಶರಾವತಿ ಡೆಂಟಲ್ ಕಾಲೇಜಿನ ಜಾಗದಲ್ಲಿ ಬಸ್ ನಿಲ್ದಾಣವೊಂದನ್ನ ಸ್ಥಾಪಿಸಲಾಗಿತ್ತು. ಆ ಬಸ್​ ನಿಲ್ದಾಣಕ್ಕೆ ಎಸ್​ ಬಂಗಾರಪ್ಪಾಜಿ ಬಸ್ ನಿಲ್ದಾಣ ಎಂದು ಹೆಸರಿಡಲಾಗಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿಯ ಅಧಿಕಾರಿಯು, ಆ ಜಾಗದಲ್ಲಿದ್ದ ಬಸ್​ ನಿಲ್ದಾಣದ ಹೆಸರನ್ನ ಗೋಪಾಲಗೌಡ ಬಡಾವಣೆ ಬಸ್ ನಿಲ್ದಾಣ ಎಂದು ಬದಲಾಯಿಸಿದ್ದಾರೆ 

ಶರಾವತಿ ಎಜುಕೇಷನ್ ಟ್ರಸ್ಟ್ ಜಾಗದಲ್ಲಿ ಬಸ್​ ನಿಲ್ದಾಣ ನಿರ್ಮಿಸಲಾಗಿದೆ. ಆ ಜಾಗ ಸರ್ಕಾರದ್ದಲ್ಲ. ಯಾವ ಅಧಿಕಾರಿ ಹೆಸರು ಬದಲಾಯಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು. 

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪರವರು ಜನರ ಅನುಕೂಲಕ್ಕಾಗಿ  ಬಡಾವಣೆಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ಅಭಿಮಾನಿ ಒಬ್ಬರಿಗೆ ತಮ್ಮ ಜಾಗದಲ್ಲಿ ಅವಕಾಶ ನೀಡಿದ್ದರು. ಅವರ ಅಭಿಮಾನಿ ಗುತ್ತಿಗೆದಾರ ಈಶ್ವರ ರೆಡ್ಡಿ ಎಂಬವರು ತಮ್ಮ ಸ್ವಂತ ಖರ್ಚಿನಲ್ಲಿ  ಬಸ್‌ ನಿಲ್ದಾಣವನ್ನು ನಿರ್ಮಿಸಿ ಎಸ್ ಬಂಗಾರಪ್ಪ ಸಾರ್ವಜನಿಕ ಬಸ್‌ ನಿಲ್ದಾಣ ಎಂದು 1996-97  ಹೆಸರಿಸಿದ್ದರು. 

ಆದರೆ ಇದೀಗ  ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನವರು ಅದನ್ನು ಕಾರ್ಪೊರೇಷನ್ ಶಿವಮೊಗ್ಗ ಗೋಪಾಲಗೌಡ ಬಡಾವಣೆ ಬಸ್‌ ನಿಲ್ದಾಣ ಎಂದು  ಬದಲಾಯಿಸಿದ್ದಾರೆ. ಇವತ್ತಿನ ಸಭೆಯಲ್ಲಿ ಈ ವಿಚಾರವೂ ಮಧು ಬಂಗಾರಪ್ಪರವರ ಆಕ್ರೋಶಕ್ಕೆ ಕಾರಣವಾಗಿತ್ತು. 


ಇನ್ನಷ್ಟು ಸುದ್ದಿಗಳು