Karnataka Police ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಎಸ್.ಪಿ ದರ್ಜೆಯ (ನಾನ್ ಐಪಿಎಸ್) ಅಧಿಕಾರಿಗಳವರೆಗೆ ಗೆಜೆಟೆಡ್ ಲೀವ್ ಸೌಲಭ್ಯವನ್ನು ಮಂಜೂರು ಮಾಡುವ ಮೂಲಕ ವಾರ್ಷಿಕವಾಗಿ 13 ತಿಂಗಳ ವೇತನ ನೀಡಲು ಪೊಲೀಸ್ ಮಹಾನಿರ್ದೇಶಕರು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಹಬ್ಬದ ದಿನಗಳೂ ಸೇರಿದಂತೆ ಸಾರ್ವಜನಿಕ ರಜಾ ದಿನಗಳಲ್ಲಿ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ

ಶಿವಮೊಗ್ಗ ಆಡಳಿತದಲ್ಲಿ ಮೇಜರ್ ಬದಲಾವಣೆ! ಜಿಲ್ಲೆಗೆ ಹೊಸ ಡಿಸಿ ಎಂಟ್ರಿ! ಗುರುದತ್ ಹೆಗೆಡೆ ವರ್ಗಾವಣೆ
ಸದ್ಯ ಸರ್ಕಾರಿ ರಜೆ ದಿನಗಳಂದು ಕೆಲಸ ಮಾಡುವ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳಿಗೆ ವರ್ಷಕ್ಕೆ 30 ದಿನಗಳ ಹೆಚ್ಚುವರಿ ವೇತನ ಸೌಲಭ್ಯವಿದ್ದು, ಎಎಸ್‌ಐ ಹಾಗೂ ಪಿಎಸ್‌ಐ ಹಂತದ ಅಧಿಕಾರಿಗಳಿಗೆ ಕೇವಲ 15 ದಿನಗಳ ರಜೆ ಸೌಲಭ್ಯ ನೀಡಲಾಗುತ್ತಿತ್ತು. ನೂತನ ಪ್ರಸ್ತಾವನೆಯಲ್ಲಿ ಎಎಸ್‌ಐ ಮತ್ತು ಪಿಎಸ್‌ಐಗಳಿಗೆ ನೀಡಲಾಗುವ ಈ ಸೌಲಭ್ಯವನ್ನು 30 ದಿನಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಇದರ ಜೊತೆಗೆ, ಇದುವರೆಗೆ ಈ ಸೌಲಭ್ಯದಿಂದ ವಂಚಿತರಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್, ಡಿವೈಎಸ್‌ಪಿ ಹಾಗೂ ಎಸ್.ಪಿ (ನಾನ್ ಐಪಿಎಸ್) ಹುದ್ದೆಯ ಅಧಿಕಾರಿಗಳಿಗೂ ವಾರ್ಷಿಕ 30 ದಿನಗಳ ಹೆಚ್ಚುವರಿ ವೇತನ ಸೌಲಭ್ಯವನ್ನು ಹೊಸದಾಗಿ ಕಲ್ಪಿಸಲು ತೀರ್ಮಾನಿಸಲಾಗಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
