Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?

Malenadu Today

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹೆಚ್​ಸಿ ಯೋಗೇಶ್​ ರಿಗೆ ಆಗುತ್ತೆ ಎಂಬ ಸುದ್ದಿ ವೈರಲ್​ ಮೊದಲೇ ವೈರಲ್ ಆಗಿತ್ತು. ಅದರಂತೆ ಆ ಸುದ್ದಿಯು ನಿಜವೂ ಆಗಿತ್ತು. ಇದೀಗ ಬಿಜೆಪಿಯ ಸರದಿ. 

Malenadu Today

ಶಿವಮೊಗ್ಗದಿಂದ ಇವರೇನಾ ಅಭ್ಯರ್ಥಿ

ಸದ್ಯ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ (shivamogga assembly constituency) ದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ನೊಂದೆಡೆ ಅವರ ಪುತ್ರ ಕೆ.ಇ.ಕಾಂತೇಶ್​ ಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಯು ಹರಿದಾಡಿತ್ತು. ಇದಕ್ಕೆ ಪೂರಕವಾಗಿ ಅವರು ಬಿಎಸ್​.ಯಡಿಯೂರಪ್ಪ ನವರನ್ನು ಸಹ ಭೇಟಿಯಾಗಿ ಬಂದಿದ್ದರು. 

Malenadu Today

ಕುತೂಹಲ ಮೂಡಿಸಿದ ಸಂಭಾವ್ಯ ಕ್ಯಾಂಡಿಡೇಟ್

ಈ ಮಧ್ಯೆ ಶಿವಮೊಗ್ಗ ನಗರದಲ್ಲಿ ನಿನ್ನೆಯಿಂದ ಇದುವರೆಗೂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ಹೆಸರುಗಳನ್ನು ಬಿಟ್ಟು ಮತ್ತೊಂದು ಹೆಸರು ಸಂಚಲನ ಮೂಡಿಸುತ್ತಿದೆ. ಬಿಜೆಪಿ ಹಾಗೂ ಪ್ರೋ ಬಿಜೆಪಿ ವಾಟ್ಸ್ಯಾಪ್​ ಗ್ರೂಪ್​ಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಇವರು ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಎಂದು ಹೇಳಿ ಪೋಸ್ಟ್​ಗಳನ್ನ ಹರಿಬಿಡಲಾಗುತ್ತಿದೆ. ಅಷ್ಟೆಅಲ್ಲದೆ, ಅವರಿಗೆ ಅಭಿನಂದನೆ ಕೂಡ ತಿಳಿಸಲಾಗುತ್ತಿದೆ.

Malenadu Today 

ಯಾರು? ಯಾರು? ಯಾರು? 

ಸೋಶಿಯಲ್ ಮೀಡಿಯಾಗಳಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಎಂದು ಶಿವಮೊಗ್ಗ ನಗರ ಪಾಲಿಕೆ ಸದಸ್ಯ ಚನ್ನಬಸಪ್ಪರವರ ಹೆಸರು ಹರಿದಾಡುತ್ತಿದೆ. ಇದೇ ವಿಚಾರದಲ್ಲಿ ಬಿಜೆಪಿ ಮೂಲಗಳು ಕೂಡ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬಂತಹ ಮಾತುಗಳನ್ನು ಆಡುತ್ತಿದೆ. ಅತಿಶೀಘ್ರದಲ್ಲಿ ಬಿಜೆಪಿಯ ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಬಿಜೆಪಿಯಲ್ಲಿ ಹರಿಕೃಷ್ಣ, ಕೆ.ಇ.ಕಾಂತೇಶ್, ರುದ್ರೇಗೌಡರು, ಡಾ.ಧನಂಜಯ್ ಸರ್ಜಿ , ಜ್ಯೋತಿಪ್ರಕಾಶ್, ದತ್ತಾತ್ರಿ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರ ನಡುವೆ ಇದೀಗ ಚನ್ನಬಸಪ್ಪರವರ ಹೆಸರು ಹರಿದಾಡ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಇದೇ ರೀತಿ ಧನಂಜಯ್ ಸರ್ಜಿಯವರ ಹೆಸರು ಹಾಗೂ ಜ್ಯೋತಿಪ್ರಕಾಶ್​ರವರ ಹೆಸರು ಸಹ ಹರಿದಾಡುತ್ತಿದೆ. ಆದರೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ. 

Malenadu Today

ಇದನ್ನು ಸಹ ಓದಿ

Read /ಶಿವಮೊಗ್ಗ ನಗರ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷರಾಗಿ ಮೊಹಮದ್​ ನಿಹಾಲ್​  ನೇಮಕ

Read /ಮತದಾನ  ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು? 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  

Share This Article