Tuesday, 9 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • Uncategorized
  • INFORMATION NEWS
  • NATIONAL NEWS
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
Uncategorized

Jp story : ಹಿಂದೂ ಮಹಾಸಭಾ ಗಣಪತಿಯ ಹಿನ್ನಲೆ ಬಗ್ಗೆ ನಿಮಗೆ ಗೊತ್ತಾ…? ಜೆಪಿ ಬರೆಯುತ್ತಾರೆ.

prathapa thirthahalli
Last updated: September 6, 2025 12:29 pm
Prathapa thirthahalli - content producer
Share
SHARE

Jp story :  ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿತ್ತು ಆ ಗಣಪನ ಮೆರವಣಿಗೆ. ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಆ ಗಣಪನ ವಿಸರ್ಜನಾ ಮೆರವಣಿಗೆ ವೇಳೆ ಆಯ್ತು ದೊಡ್ಡದೊಂದು ಗಲಭೆ. ವಿಸಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಕೊಲೆ-ಗಲಾಟೆಗಳಾದಾಗ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾನೆ ಈ ಗಣೇಶ. 1947 ರಿಂದ ಇಲ್ಲಿಯವರೆಗೂ ಆ ಗಣಪನ ಭದ್ರತೆ ಹೊಣೆ ಪೊಲೀಸರ ಹೆಗಲೇರಿರುತ್ತೆ ,ಹಾಗಾದ್ರೆ ಈ ಗಣಪ ನಿಜಕ್ಕೂ ಗಲಾಟೆ ಗಣಪನಾ ಅಂದು ಕೊಂಡವರ ಅದು ತಪ್ಪು, ಗಲಾಟೆ ಗಣಪ ಇಂದು ಎಲ್ಲರ ಸಂಭ್ರಮದ ಗಣಪನಾಗಿರುವುದು ವಿಶೇಷವೇ ಸರಿ…

ಗಣೇಶ ಹಬ್ಬ ಬಂತೆಂದರೇ ಇಡೀ ದೇಶವೆ ಸಂಭ್ರಮ ಸಡಗರದಿಂದ ಹಬ್ಬ ಆಚರಿಸುತ್ತದೆ.ಲಕ್ಷಾಂತರ ಮಂದಿ ಸಾಮೂಹಿಕವಾಗಿ ನೂರಾರು ಗಣಪತಿಗಳನ್ನು ಪ್ರತಿಷ್ಠಾಪಿಸಿ,ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.ಸಂತೋಷದಲ್ಲಿ ಮಿಂದೇಳುತ್ತಾರೆ.ನೂರಾರು ಗಣೇಶ ಮೂರ್ತಿಯನ್ನು ಏಕಕಾಲದಲ್ಲಿ ವಿಸರ್ಜನೆ ಮಾಡಿದ್ರೂ ಯಾವೊಂದು ಗಲಾಟೆಗಳಾಗದ ಮಹಾನರಗಳು ನಮ್ಮ ಕಣ್ಣ ಮುಂದಿದೆ.ಆದ್ರೆ ,ಕೇವಲ ಒಂದೇ ಒಂದು ಗಣೇಶ ಮೂರ್ತಿಯನ್ನು ವಿಸರ್ಜಿಸುವಾಗ ಆ ನಗರದಲ್ಲಿ ಅದೆಷ್ಟು ಆತಂಕ ಮನೆ ಮಾಡಿರುತ್ತೆ ಅಂದ್ರೆ.., ಆ ಅನುಭವ ಶಿವಮೊಗ್ಗದ ಜನತೆಗೆ ಮಾತ್ರ ಗೊತ್ತು. ಅಂದು ಶಿವಮೊಗ್ಗದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿರುತ್ತೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಗಣೇಶನ ಪ್ರತಿಷ್ಠಾಪನೆ ಮಾಡಿದಾಗಿನಿಂದ ಹಿಡಿದು ವಿಸರ್ಜನಾ ಮೆರವಣಿಗೆ ಹೋಗೋ ವರೆಗೂ ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಹದ್ದಿನ ಕಣ್ಣಿಟ್ಟು ವಾಚ್ ಅಂಡ್ ಗಾರ್ಡ್ ಮಾಡ್ತಿರುತ್ತವೆ..ಪೊಲೀಸರ ಬಿಗಿ ಸರ್ಪಗಾವಲಿನಲ್ಲಿ ಆ ಗಣಪನ ಮೆರವಣಿಗೆ ನಡೆದ್ರೂ ಕಿಡಿಗೇಡಿಗಳು ಅಟ್ಟಹಾಸ ಮೆರೆದು ಶಿವಮೊಗ್ಗ ನಗರದ ಶಾಂತಿಯನ್ನೇ ಕದಡಿ ಬಿಡ್ತಾರೆ.ಇತಿಹಾಸದ ಪುಟ ತಿರುಗಿಸಿ ನೋಡ್ದಾಗ ಈ ಗಣೇಶನ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಹಲವು ಅಮಾಯಕರು ಜೀವಕಳೆದುಕೊಂಡ ಕರಾಳ ಅಧ್ಯಾಯಗಳು ತೆರೆದುಕೊಳ್ತವೆ.

ಆಡು ಭಾಷೆಯಲ್ಲಿ ಹೆಚ್.ಎಂ.ಎಸ್ ಗಣಪ ಎಂದು ಸ್ಥಳೀಯರು ಕರೆಯುತ್ತಾರೆ. ಶಿವಮೊಗ್ಗದ ಹೆಚ್.ಎಂ.ಸ್ ಗಣಪ ಕಾಟಾಚಾರಕ್ಕೆ ಪ್ರತಿಷ್ಟಾಪನೆಯಾದ ಗಣೇಶ ಅಂತೂ ಖಂಡಿತ  ಅಲ್ಲ. ಹಿಂದು ವೈಚಾರಿಕತೆಯ ಮತ್ತು ಧಾರ್ಮಿಕ ತಳಹದಿ ಮೇಲೆ ಪ್ರತಿಷ್ಟಾಪಿಸಲ್ಪಟ್ಟ ಗಣೇಶ.
.80-90 ರ ದಶಕದಲ್ಲಿ ಶಿವಮೊಗ್ಗದ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಅಂದ್ರೆ ಅದು ರೇಡಿಯೋ, ದೂರದರ್ಶನದ ನ್ಯೂಸ್ ನಲ್ಲಿ ಹೆಡ್ ಲೈನ್ ಸುದ್ದಿಯಾಗ್ತಿತ್ತು ಅನ್ನೋದೆ ವಿಶೇಷ. ಮಹಾರಾಷ್ಟ್ರ,ಗುಜರಾತ್,ಅಕ್ಕಪಕ್ಕದ ರಾಜ್ಯಗಳಲ್ಲಿ ಸಾವಿರಾರು ಗಣಪತಿಯನ್ನು ಒಂದೇ ದಿನ ವಿಸರ್ಜನೆ ಮಾಡುವ ಸುದ್ದಿಗಿಂತ ಕೇವಲ ಒಂದೇ ಒಂದು ಗಣಪತಿಯ ವಿಸರ್ಜನ ಮೆರವಣಿಗೆ ದೇಶದ ಗಮನ ಸೆಳೆದಿತ್ತು ಅಂದ್ರೆ..,ಈ ಗಣಪನ ಕಿಮ್ಮತ್ತು ಎಷ್ಟಿರಬೇಕು ನೀವೇ ಯೋಚಿಸಿ.ಇಷ್ಟೆಲ್ಲಾ ಹೇಳಿದ ಮೇಲೆ ಹೆಚ್.ಎಂ.ಎಸ್ ಗಣಪನ ಹಿನ್ನಲೆಯನ್ನು ನಾವು ನೋಡಲೇ ಬೇಕು.

Jp story :  1945 ರಲ್ಲಿ ವೈಚಾರಿಕ ಹಿನ್ನಲೆಯಲ್ಲಿ ಪ್ರತಿಷ್ಠಾಪನೆಯಾದ ಗಣೇಶ.ಧಾರ್ಮಿಕ ಕಾಯ್ದೆಗೆ ಸೆಡ್ಡು ಹೊಡೆದ ಸಂಘಟನೆ.

ಲೋಕಮಾನ್ಯ ಬಾಲಗಂಗಾಧರ್ ನಾಥ್ ತಿಲಕ್,ಸ್ವಾತಂತ್ರ್ಯದ ಕಿಚ್ಚು ಹಚ್ಚಿಸುವ ಸಲುವಾಗಿ ಎಲ್ಲರೂ ಸಂಘಟಿತರಾಗಲು ದೇಶವ್ಯಾಪಿ ಗಣೇಶೋತ್ಸವ ಪ್ರಾರಂಭಿಸದ ಕಾಲಘಟ್ಟದಲ್ಲಿ ಅವರ ಆಶಯದಂತೆ ಶಿವಮೊಗ್ಗದಲ್ಲಿ 1945 ರಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೊಂಡಿತು.ಅನಂತ ಚತುರ್ದಶಿ ವೇಳೆ ಹಿಂದು ಸಂಘಟನೆ ಮಂಡಳಿಯ ಸಂಸ್ಥಾಪಕ ಮುಖಂಡರುಗಳಾದ ಮಂಜುನಾಥ್ ರಾಯರು,ಚಂದ್ರಶೇಖರ್ ಬೂಪಾಳಂ ನಂತ ಹಿರಿಯರ ನೇತ್ರತ್ವದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲಾಯಿತು,.ಹಿಂದುಮಹಾಸಭಾ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಶಿವಮೊಗ್ಗದಲ್ಲಿ ಹಿಂದು ಸಂಘಟನಾ ಮಂಡಳಿ ನೇತ್ರತ್ವದಲ್ಲಿ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.ವೀರ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿ ರಾಮಣ್ಣಶ್ರೇಷ್ಠಿ ಪಾರ್ಕ್ ಗಣಪತಿ ಮತ್ತು ಹಿಂದುಮಹಾಸಭಾ ಗಣಪತಿ ಪ್ರತಿಷ್ಟಾಪನೆಗೆ ಇಂಬು ನೀಡಿ,ಹಿಂದು ಯುವಕರನ್ನು ದೇಶ ಮಟ್ಟದಲ್ಲಿ ಸಂಘಟಿಸಬೇಕೆಂದು ಕರೆನೀಡಿದ್ದರು.ಹೀಗಾಗಿ ಈ ಗಣೇಶನ ವಿಸರ್ಜನೆ ದಿನ ಈಗಲೂ ಸಾವಿರಾರು ಯುವಕರು ಒಂದೆಡೆ ಜಮಾಯಿಸುತ್ತಾರೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ಧಾರ್ಮಿಕ ಹಕ್ಕು ಪ್ರತಿಪಾಧಿಸಿದ ಸಂಘಟನೆ.ಪ್ರಾರ್ಥನಾ ಮಂದಿರದ ಎದುರು ನುಡಿಸಿತು ಮಂಗಳವಾಧ್ಯ.

ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ವೈಚಾರಿಕ ಮತ್ತು ಧಾರ್ಮಿಕ ವಿಚಾರೆಧಾರೆಗಳ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದ ಸಂದರ್ಭವದು.ಸರ್ಕಾರ ಪ್ರಾರ್ಥನಾ ಮಂದಿರಗಳ ಮುಂದೆ ಮಂಗಳವಾದ್ಯ ನುಡಿಸದಂತೆ ತಡೆಯೊಡ್ಡಿತ್ತು.ಧಾರ್ಮಿಕ ಸ್ವಾತಂತ್ರ್ಯದ ಸಾವಿಂಧಾನಿಕ ಹಕ್ಕುಚ್ಯುತಿ ಎಂದು ಭಾವಿಸಿದ ಹಿಂದು ಮಹಾ ಮಂಡಳಿ,1947 ರ ಗಣೇಶೋತ್ಸವ ಸಂದರ್ಭದಲ್ಲಿ ಗಾಂಧಿ ಬಜಾರ್ ನ ಮಸೀದಿಯ ಮುಂದೆ ಮಂಗಳವಾದ್ಯ ನುಡಿಸಲು ಅಣಿಯಾಯ್ತು.ಈ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಗಲಾಟೆಗಳು ನಡೆದು ಹೋಯ್ತು.ಶಿವಮೊಗ್ಗ ನಗರ ಅಕ್ಷರ ಸಹ ಹೊತ್ತಿ ಉರಿಯಿತು.ರಾಜಬೀದಿಯಲ್ಲಿ ಮೆರವಣಿಗೆ ನಡೆಯುವ ಸಂದರ್ಭದಲ್ಲಿಯೇ ಶಿವಮೂರ್ತಿ ಎನ್ನುವ 26 ವರ್ಷದ ಯುವಕನನ್ನು ಮತ್ತೊಂದು ಕೋಮಿನ ಗುಂಪು ಹತ್ಯೆಗೈಯಿತು.ನಂತರ ನಡೆದಿದ್ದೆಲ್ಲಾ ಕರಾಳ ರಕ್ತಸಿಕ್ತ ಅಧ್ಯಾಯ.ಪೊಲೀಸರೇ ಗಣಪತಿಯನ್ನು ವಿಸರ್ಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.ಗಲಭೆ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ವಾರಗಟ್ಟಲೆ ಕರ್ಪೂ ವಿಧಿಸಲಾಯಿತು.ಗಣೇಶ ಪೊಲೀಸ್ ಠಾಣೆ ಮೆಟ್ಟಲೇರಿದ.ನಂತರ ಪೊಲೀಸರ ಸರ್ಪಗಾವಲಿನಲ್ಲಿ ವಿಸರ್ಜನೆ ಮಾಡಲಾಯಿತು.

ಶಿವಮೂರ್ತಿ ಯುವಕನ ನೆನಪಿನಲ್ಲಿ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ವೃತ್ತಕ್ಕೆ ಶಿವಮೂರ್ತಿ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ.ಪ್ರತಿ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಈ ಸರ್ಕಲ್ ವೃತ್ತದಲ್ಲಿ ಶಿವಮೂರ್ತಿ ಪೋಟೋ ಇಟ್ಟು ಪ್ರತಿವರ್ಷ ಗೌರವ ಸಲ್ಲಿಸಲಾಗುತ್ತಿದೆ.ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಪಾಧಿಸಿ,ಹಿಂದು ಸಂಘಟನೆಯ ಅಧ್ಯಕ್ಷರಾಗಿದ್ದ ಹನುಮಂತರಾಯರು ಕೋರ್ಟ್ ಮೆಟ್ಟಲೇರಿದರು.1950 ಜನವರಿ 30 ರಲ್ಲಿ ಹೈಕೋರ್ಟ್, ಸಂಘಟನೆಯ ಪರವಾಗಿ ತೀರ್ಪು ನೀಡಿತು.ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ನೆಡೆಯುವ ಕಾರ್ಯ,ಅದು ಸಂವಿದಾನದತ್ತ ಹಕ್ಕು. ಅದನ್ನು ತಡೆಯಲು ಯಾರಿಗೂ ಅಧಿಕಾವಿಲ್ಲ ಎಂದು ತೀರ್ಪು ನೀಡಿತು.ಈ ಹಕ್ಕನ್ನು ಪಡೆಯಲು ಶಿವಮೂರ್ತಿಯವರನ್ನು ಬಲಿ ಕೊಡಬೇಕಾಯಿತು ಎಂಬ ನೋವು ಹಿಂದು ಸಂಘಟನೆ ಕಾರ್ಯಕರ್ತರಲ್ಲಿ ಇಂದಿಗೂ ಹಸಿರಾಗಿದೆ.

ಹುತಾತ್ಮ ಶಿವಮೂರ್ತಿ ಫೋಟೋ
ಹುತಾತ್ಮ ಶಿವಮೂರ್ತಿ ಫೋಟೋ

Jp story : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಿಷೇಧ ಹೇರಿದ ಜಿಲ್ಲಾಡಳಿತ.ಪೊಲೀಸ್ ಸ್ಟೇಷನ್ ಮೆಟ್ಟಲೇರಿದ ಗಣಪ,

1975 ರ ತುರ್ತು ಪರಿಸ್ಥಿತಿಯ ಕರಿನೆರಳು ಸಹ ಹಿಂದುಮಹಾಸಭಾ ಗಣೇಶಮೂರ್ತಿಯನ್ನು ಸಹ ತಟ್ಟದೆ ಬಿಟ್ಟಿರ್ಲಿಲ್ಲ.ಜಿಲ್ಲಾಡಳಿತ, ಮುಜರಾಯಿ ಇಲಾಖೆ ಸುಪರ್ಧಿಗೆ ಒಳಪಟ್ಟಿರುವ, ಭೀಮೇಶ್ವರ ದೇವಸ್ಥಾನದಲ್ಲಿ, ಹಿಂದುಮಹಾ ಸಂಘಟನಾ ಮಂಡಳಿಗೆ, ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡ್ಲಿಲ್ಲ..ಹೀಗಾಗಿ ಸಂಘಟನೆ ಮುಖಂಡರು ಹಬ್ಬದ ಮಾರನೆ ದಿನ ಗಣೇಶನನ್ನು ಪ್ರತಿಷ್ಟಾಪಿಸಿದ್ದು ಕೂಡ ಇಲ್ಲಿ ವಿಶೇಷವೇ.1976 ರಲ್ಲಿ ಸಹ ಗಣೇಶ ಮೂರ್ತಿ ಕೂರಿಸಲು ಅವಕಾಶ ನೀಡದ ಸಂದರ್ಭದಲ್ಲಿ ಹಬ್ಬದ ಮಾರನೇ ದಿನವೇ ಗಣೇಶನನ್ನು ಕೂರಿಸಲಾಯಿತು.1976 ರಲ್ಲಿ ನಡೆದ ಗಲಾಟೆಯಿಂದ ಮತ್ತೆ ಗಣೇಶ ಮೂರ್ತಿ ಕೋಟೆ ಪೊಲೀಸ್ ಠಾಣೆಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಪೊಲೀಸರೇ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕಾದ ಅನಿವಾರ್ಯತೆ ಎದುರಾಯಿತು. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಆದ ಅನಾಹುತ, ಜೀವಹಾನಿ,ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಗಮನಿಸಿ ಹಿಂದು ಸಂಘಟನೆ ಮಂಡಳಿಯವರು 7 ವರ್ಷಗಳ ಕಾಲ ವಿಸರ್ಜನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ರು, ಬೀಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ತುಂಗಾ ನದಿಗೆ ಗಣಪನನ್ನು ಸರಳವಾಗಿ ವಿಸರ್ಜನೆ ಮಾಡುತ್ತಿದ್ರು

Jp story   ಕೋಮುಗಲಭೆ ನಡೆದಿದ್ದು ಒಂದು ಬಾರಿಯಾದ್ರೆ.ಪ್ರತಿಬಾರಿ ವಿಸರ್ಜನೆ ವೇಳೆ ಗಲಾಟೆ ಮಾಡೋರ್ಯಾರು.

ಹೀಗೊಂದು ಪ್ರಶ್ನೆ ಚಿಗುರೊಡೆಯೊದು ಸಹಜ.1947 ರ ಗಲಭೆ ಧಾರ್ಮಿಕ ಸಿದ್ದಾಂತದ ಹಿನ್ನಲೆಯಲ್ಲಿ ಆದ ಸಂಘರ್ಷ..ಆದಾದ ನಂತರ ಎಲ್ಲೂ ಎರಡು ಕೋಮಿನವರು ನೇರವಾಗಿ ಹೊಡೆದಾಡಿದ್ದೇ ಇಲ್ಲ.ಆದರೂ ಕೆಲವು ಪಟ್ಟಭದ್ರರರ ಮಾನಸೀಕತೆಯಿಂದ ಹೆಚ್ ಎಂ ಎಸ್ ಗಣಪ ಗಲಾಟೆ ಗಣಪನಾದ.ಇದರಲ್ಲಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರಷ್ಟೆ.
1947 ರಿಂದ ಇಂದಿನವರೆಗೂ ಹೆಚ್.ಎಂ.ಎಸ್ ಗಣೇಶ ವಿಸರ್ಜನಾ ದಿನ ಬಂದ್ರೆ ಜನ ಈಗಲೂ ಜೀವಭಯದಲ್ಲೇ ಇರುತ್ತಾರೆ. ಆದರೆ ಕಳೆದ ಐದಾರು ವರ್ಷಗಳಿಂದ ಹೆಚ್ ಎಂ ಎಸ್ ಗಣಪ ಸಂಭ್ರಮದ ಗಣಪನಾಗಿ ಹೊರಹೊಮ್ಮಿದ್ದಾನೆ.

Jp story  ಇತಿಹಾಸ ಸೃಷ್ಟಿಸಿದ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ-

ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಈ ಹಿಂದೆಲ್ಲಾ ಹೆಂಗಸಿರಲಿ ಗಂಡು ಮಕ್ಕಳೇ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗುತ್ತಿತ್ತು. ಮೆರವಣಿಗೆಯಲ್ಲಿ ನಡೆಯುವ ಅಹಿತಕರ ಘಟನೆಗಳು ಶಿವಮೊಗ್ಗ ಜಿಲ್ಲೆಯ ಶಾಂತಿಯನ್ನೇ ಕಸಿದುಕೊಳ್ಳುತ್ತಿತ್ತು. ತಿಂಗಳುಗಟ್ಟಲೆ ಕರ್ಫ್ಯೂ ಸೆಕ್ಷನ್ ಗಳಿಂದ ಜನರ ಬದುಕೇ ದುಸ್ತರವಾಗುತ್ತಿತ್ತು. ಆದರೆ ಐದಾರು ವರ್ಷಗಳಿಂದ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಗಲಾಟೆ ಗಣಪ ಎಂಬ ಅಪವಾದದ ಮುಖವಾಡ ಸಂಪೂರ್ಣ ಕಳಚಿದೆ, ಇತ್ತಿಚ್ಚಿನ ವರ್ಷಗಳಲ್ಲಿ ನಡೆಯುತ್ತಿರುವ ಗಣಪತಿ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸಂತೋಷದಿಂದ ಪಾಲ್ಗೊಳ್ಳುತ್ತಾರೆ. ಎಲ್ಲರ ಮೊಗದಲ್ಲಿ ಸಂತೋಷ ಸಂಭ್ರಮ ಮನೆಮಾಡಿರುತ್ತೆ. ಬೆಳಿಗ್ಗೆ 11 ಗಂಟೆಗೆ ಹೊತ್ತಿಗೆ ರಾಜಬೀದಿಯಲ್ಲಿ ಹೊರಡುವ ಗಣೇಶ ಮೆರವಣಿಗೆ ಉದ್ದಕ್ಕೂ ಯುವಕ ಯುವತಿಯರು ಮಹಿಳೆಯರು ಮಕ್ಕಳಾದಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸುತ್ತಾರೆ.

Jp story   ಸಮರ್ಪಣಾ ಸಂಸ್ಥೆಯ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವ ಸಮೂಹ

ಹೆಚ್ ಎಂ ಎಸ್ ಗಣಪವ ನಿಸರ್ಜನಾ ಮೆರವಣಿಗೆ ವೇಳೆ ಸಂಜೆ ಹೊತ್ತಿಗೆ ಗೋಪಿ ವೃತ್ತದಲ್ಲಂತೂ ಅಕ್ಷರ ಸಹ ಯುವ ಸಮೂಹ ಜೋಷ್ ನಲ್ಲಿರುತ್ತದೆ.. ಗಣಪತಿಗೆ ಸಂಬಂಧಿಸಿದ ವೆಸ್ಟ್ರರ್ನ್ ಮಿಶ್ರಿತ ಡಿಜೆ ಹಾಡುಗಳಿಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸುತ್ತಾರೆ.. ಯಾರಲ್ಲೂ ದಣಿವು ಎಂಬುದೇ ಕಾಣಿಸುವುದಿಲ್ಲ.. ಇದಕ್ಕೆ ಕಾರಣವಾಗಿದ್ದು ಸಮರ್ಪಣಾ ತಂಡದ ಶಿವಮೊಗ್ಗದ ಉತ್ಸಾಹಿ ಯುವಕರ ತಂಡ. ಶಾಮಿಯಾನ, ಡಾನ್ಸ್, ಕ್ಯಾಟರಿಂಗ್,ಸೌಂಡ್ ಸಿಸ್ಟಮ್ ನಲ್ಲಿ ಗುರುತಿಸಿಕೊಂಡಿರುವ ಯುವಕರ ತಂಡ ಕಳೆದ ಐದಾರು ವರ್ಷಗಳಿಂದ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಡಿಜೆ ಸೌಂಡ್ಸ್ ವ್ಯವಸ್ಥೆಯನ್ನು ಮಾಡುತ್ತಿದೆ. ಡಿಜೆಯಿಂದಾಗಿ ಯುವ ಸಮೂಹ ಉಲ್ಲಾಸದ ಜೋಷ್ ನಲ್ಲಿಯೇ ಹೆಜ್ಜೆ ಹಾಕುತ್ತದೆ.ಈ ಬಾರಿಯೂ ಗೋಪಿ ವೃತ್ತದಲ್ಲಿ ಡಿಜೆ ಸದ್ದು ಜೋರಾಗಿದ್ದು, ಯುವಕ ಯುವತಿಯರಿಗಾಗಿ ಪ್ರತ್ಯೇಕ ಬ್ಯಾರಿಕೇಡ್ ಮಾಡಲಾಗಿದೆ

Jp story  ಹಬ್ಬದ ವಾತಾವರಣಕ್ಕೆ ತೆರೆದುಕೊಳ್ಳುವ ಕುಪೆಂಪು ರಸ್ತೆ

ಗಣೇಶ ಮೆರವಣಿಗೆ ಸಂದರ್ಭದಲ್ಲಿ ಪ್ರತಿ ವರ್ಷ ಕುವೆಂಪು ರಸ್ತೆಯಲ್ಲಿ ಜನರು ಗಣೇಶನ ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರುತ್ತಾರೆ .ಕುವೆಂಪು ರಸ್ತೆ ಒಂದು ರೀತಿಯಲ್ಲಿ ಸರ್ವಜನಾಂಗದ ಶಾಂತಿಯ ತೋಟವಾಗಿದೆಯ ಧರ್ಮಾತೀತವಾಗಿ ಎಲ್ಲರೂ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ನಂಜಪ್ಪ ಆಸ್ಪತ್ರೆ ಮತ್ತು ಮ್ಯಾಕ್ಸ್ ಆಸ್ಪತ್ರೆ ಬಳಿ ಆಯೋಜಿಸುವ ಹುಲಿವೇಶಧಾರಿ. ತಮಟೆ ಹಾಗು ಡ್ರಮ್ ಮೇಳಗಳು ಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ

Jp story   ಪೊಲೀಸ್ ಇಲಾಖೆಯ ಅವಿರತ ಶ್ರಮ

ಪ್ರತಿ ವರ್ಷ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನೆರವೇರಿಸಬೇಕೆಂದು ಹಲವು ತಿಂಗಳಿಂದ ಪೂರ್ವ ತಯಾರಿ ಮಾಡಿಕೊಳ್ಳುವ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆಗಾಗಿ ಹಲವು ಕ್ರಮ ಕೈಗೊಂಡಿದೆ.
ಗಣೇಶ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಶಾಂತಿ ಸಭೆ ರೂಟ್ ಮಾರ್ಚ್ ,ಬ್ರೀಫಿಂಗ್ ಅಂತೆಲ್ಲಾ ಜನರೊಂದಿಗೆ ನಾವಿದ್ದೇವೆ ಎಂದು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಕ್ಕೆ ಜನರು ಫಿಧಾ ಆಗಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಮೆರವಣಿಗೆಯಲ್ಲಿನ ಕಠಿಣತೆಯನ್ನು ಸರಳೀಕರಣಗೊಳಿಸಿದ್ದಾರೆ. ಜನರು ಎಷ್ಟು ಹೊತ್ತು ಕುಣಿದು ಕುಪ್ಪಳಿಸುತ್ತಾರೋ ಅಲ್ಲಿಯವರೆಗೂ..ಭದ್ರತೆಯನ್ನ ನೋಡಿಕೊಳ್ಳುವ ಹೊಣೆಗಾರಿಕೆ ಪೊಲೀಸರದ್ದಾಗಿದೆ. ಪೊಲೀಸರು ಸಾರ್ವಜನಿಕರ ಜೊತೆ ಅತ್ಯಂತ ಸಂಯಮದಿಂದ ನಡೆದುಕೊಳ್ಳುತ್ತಾರೆ. 48 ಗಂಟೆ ಶಿವಮೊಗ್ಗದ ಶಾಂತಿ ನೆಮ್ಮದಿಗೆ ಟೊಂಕಕಟ್ಟಿ ನಿಲ್ಲುವ ಪೊಲೀಸರ ಶ್ರಮಕ್ಕೆ ಶಿವಮೊಗ್ಗ ಜನತೆ ಹ್ಯಾಟ್ಸ್ ಹಾಫ್ ಹೇಳಿದ್ದಾರೆ.

ರೂಟ್​ ಮಾರ್ಚ್​
ರೂಟ್​ ಮಾರ್ಚ್​

Jp story  ನಗರದ ಹೊರವಲಯದಲ್ಲಿ ನಾಕಾಬಂಧಿ

ಶಿವಮೊಗ್ಗದಲ್ಲಿ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಮತ್ತೊಂದು ಕಾರಣ ಹೊರ ಊರಿನವರಿಗೆ ಪುರ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಲಾಗಿತ್ತಿದೆ. ಮೆರವಣಿಗೆಯಲ್ಲಿ ಯಾವುದೇ ಅನಾಹುತ ಆಗದಂತೆ ಹೇಗೆ ಎಚ್ಚರವಹಿಸಲಾಗಿತ್ತೋ ಅದರ ಎರಡು ಪಟ್ಟು ನಗರದ ಹೊರವಲಯದಲ್ಲಿ ಪೊಲೀಸರರು ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಾರೆ. ವಿಶೇಷವಾಗಿ ತುಂಗಾ ನಗರ, ಶಿವಮೊಗ್ಗ ಗ್ರಾಮಾಂತರ, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗುತ್ತದೆ.
ನಗರದ ಹೊರವಲಯದಲ್ಲಿ ನಾಕಾ ಬಂಧಿಯನ್ನು ಹಾಕಿ ವಾಹನ ತಪಾಸಣೆಯನ್ನು ಮಾಡಲಾಗಿತ್ತದೆ.ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಿ, ಬೈಕ್ ನಂಬರ್ ಗಳನ್ನು ದಾಖಲು ಮಾಡಿ ಮೊದಲೇ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಶಿವಮೊಗ್ಗದ ಹಬ್ಬದಲ್ಲಿ ಶಿವಮೊಗ್ಗ ಹಾಗು ಶಿವಮೊಗ್ಗ ಗ್ರಾಮಾಂತರ ಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಕ್ರಿಮಿನಲ್ ಹಿನ್ನಲೆ ಉಳ್ಳವರಿಗೆ ಗಡಿಪಾರು ಮಾಡಲಾಗುತ್ತದೆ.

Jp story   ರಾತ್ರೋರಾತ್ರಿ ನಗರ ಶುದ್ಧಿಕರಿಸುವ ಪೌರ ಕಾರ್ಮಿಕರು

ಹೌದು ಇಲ್ಲಿ ಎಲ್ಲರಿಗಿಂತಲೂ ಮೊದಲು ಅಭಿನಂದನೆ ತಿಳಿಸಬೇಕೆಂದರೆ ಅದನ್ನು ಮೊದಲು ನಗರ ಪೌರಕಾರ್ಮಿಕರಿಗೆ ತಿಳಿಸಬೇಕಾಗುತ್ತದೆ.. ಶಿವಮೊಗ್ಗದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಊಟ ತಿಂಡಿ ತಟ್ಟೆಯ ತ್ಯಾಜ್ಯ ರಸ್ತೆಯಲ್ಲಿ ರಾಡಿಯಾಗಿ ಬಿದ್ದಿರುತ್ತೆ. ಊಟ ಮಾಡಿದ ತಟ್ಟೆಗಳು ಪ್ಲಾಸ್ಟಿಕ್ ನೀರಿನ ಬಾಟಲ್ ಪೋಚ್ ಗಳು ಗುಟ್ಕಾ ಪಾಕೆಟ್ ಗಳು ರಸ್ತೆಯಲ್ಲಿ ಎಲ್ಲಂದರಲ್ಲಿ ಬಿದ್ದಿರುತ್ತದೆ. ರಸ್ತೆ ಎಲೆ ಅಡಿಕೆ ಹಾಕಿ ರಂಗೋಲಿ ಬರೆದಂತಾಗಿರುತ್ತದೆ.ಪ್ರತಿ ವರ್ಷ ಮೆರವಣಿಗೆ ಸಾಗುವ ಮಾರ್ಗದಲ್ಲಿಯೇ ತಕ್ಷಣ ಕಾರ್ಯಪ್ರವೃತ್ತರಾಗುವ ಪೌರ ಕಾರ್ಮಿಕರು ರಸ್ತೆಯನ್ನು ಶುಚಿಗೊಳಿಸುವ ಕಾರ್ಯಕ್ಕೆ ಅಣಿಯಾಗುತ್ತಾರೆ. ರಾತ್ರಿ ಬೆಳಗಾಗುವುದರೊಳಗೆ ಶಿವಮೊಗ್ಗ ನಗರವನ್ನು ಸಂಪೂರ್ಣ ಶುಚಿ ಗೊಳಿಸಿ ಶುದ್ದ ನಗರಕ್ಕೆ ಶರ ಬರೆಯುತ್ತಾರೆ.ರಾತ್ರಿಯೆಲ್ಲಾ ಕೆಲಸ ಮಾಡುವ ಪೌರಕಾರ್ಮಿಕರ ಕೆಲಸ ಶ್ಲಾಘನೀಯವಾಗಿದೆ.ಒಟ್ಟಿನಲ್ಲಿ ಭಯದ ಗಣೇಶ ಮರೆಯಾದ,,ಸಂತಸದ ಗಣೇಶ ಮನೆ ಮಾಡಿದ ಎಂದು ಜನರು ಮಾತನಾಡಿಕೊಳ್ಳುವ ಪರಿ ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ.

ಶಿವಮೊಗ್ಗಕ್ಕೆ ಆಗಮಿಸಿದ್ದ ವೀರ್​ ಸಾರ್ವರ್ಕರ್​​
ಶಿವಮೊಗ್ಗಕ್ಕೆ ಆಗಮಿಸಿದ್ದ ವೀರ್​ ಸಾರ್ವರ್ಕರ್​​
1950 ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಸುದ್ದಿ
1950 ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಸುದ್ದಿ
hindumahasabha ganesha
hindumahasabha ganesha
TAGGED:Jp story
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Hindu mahasabha shivamogga ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ : ಹೇಗಿದೆ ವಾತಾವರಣ  
Next Article By vijayendra ಸಿಎಂ ಸಿದ್ದರಾಮಯ್ಯ 136 ಶಾಸಕರಿಗೆ ರಾಜಿನಾಮೆ ಕೊಡಿಸಲಿ : ಬಿವೈ ವಿಜಯೇಂದ್ರ ಸವಾಲು
Leave a Comment

Leave a Reply Cancel reply

Your email address will not be published. Required fields are marked *

You Might Also Like

areca nut varieties price Daily arecanut prices Karnataka Adike rate smgBuy and Sell Arecanut rate in Market  Latest adike Market Rates in Davangere Shivamogga Channagiri  saraku chali rashi adike price  Areca Varieties Arecanut Price District wise Market Soaring Market Rates of adike in Davangere, Shivamogga & More ಅಡಿಕೆ ಬೆಲೆ, ಅಡಿಕೆ ಮಾರುಕಟ್ಟೆ, ಅಡಿಕೆ ದರ, ಕರ್ನಾಟಕ ಅಡಿಕೆ ಬೆಲೆ,Theerthahalli arecanut, Areca nut rates #AdikeBale #SirsiMarket #MangaluruMarket Areca Nut Price Today, ಅಡಿಕೆ ಬೆಲೆ, ಅಡಿಕೆ ಮಾರುಕಟ್ಟೆ ದರ, #ArecanutPrice,  Karnataka Markets July 30, 2025 adike mandi rate July 26 areca nut price list Adike Market Prices in Karnataka 22 Adike rate in major cities  latest adike rate July 18Check Today Top Areca Nut RatesCheck Today Top Areca Nut RatesArecanut Price Drop Alert Davangere arecanut Price Fluctuations 11 Real Time Arecanut RatesKarnataka Areca NutUncover Karnataka Adike Market Rates jdaily market price july Daily Arecanut Rates Market Prices arecanut July 2 2025Arecanut price updates for July 1 2025Your Guide to Daily Betel Nut Prices June 2025 Chitradurga Areca Nut Latest Areca Nut Rates in Karnataka  Latest Arecanut PricesKarnataka Mandi arecaNut arecanut Market Prices June 24 2025arecanut Market Prices June 24 2025 daily Arecanut rates supari rate june 20 market wise Arecanut Price shivamogga Areca Market davanagere adike ratearecanut price in karnatakalatest Areca Nut Rate in Shivamoggaadike Market Rate Today krishimaratavahini Arecanut Price arecanut Latest Market RatesShimoga Channagiri Arecanut Varieties Latest Priceslive Arecanut Rates in KarnatakaCurrent Arecanut Rates in Karnataka Marketslareca Nut Price Trends in Major Karnataka Markets atest Supari Price in Karnataka Mandis June 5, 2025 ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಳೆಗಳ ದರಗಳು (ಕ್ವಿಂಟಲ್ಗೆ ರೂಪಾಯಿಗಳಲ್ಲಿ): adike rate today sagara karnataka Campco Daily arecanut prices KarnatakaArecanut price today   weekly adike rate karanatakafinancial astrology predictions in Kannada Shimoga adike market rate today sunday krishimaratavahini adike rate todayapmc adike rate today karnataka shimoga arecanut price today saraku supari price in karnataka supari price in malnad adike market davangere adike mandi price shivamogga davangere shimoga market rate today supari rate in Karnataka tumcos channagiri today market arecanut price per quintal supari rate in Karnataka may 14 2025 adike rate today adike rate in channagiri ಅಡಿಕೆ ಮಾರುಕಟ್ಟೆ channagiri arecanut price apmc arecanut price shivamogga ಶಿವಮೊಗ್ಗ ಅಡಿಕೆ ರೇಟ್ today ಅಡಿಕೆ ದರ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಮಾರುಕಟ್ಟೆ 
Uncategorized

ಎಷ್ಟಿದೆ ಅಡಿಕೆ ದರ! ಮತ್ತೆ ಅಡಕೆಗೆ ಒಳ್ಳೆಯ ರೇಟು!

By ajjimane ganesh
road accident ಅಪಘಾತದಲ್ಲಿ ಮೃತಪಟ್ಟ ಯುವತಿ
Uncategorized

ಮದುವೆಗೆ 15 ದಿನಗಳು ಬಾಕಿ ಇರುವಾಗ ರಸ್ತೆ ಅಪಘಾತದಲ್ಲಿ ಯುವತಿ ಸಾವು : ಹೇಗಾಯ್ತು ಅಪಘಾತ

By Prathapa thirthahalli
pilot training
Uncategorized

pilot training : ಶಿವಮೊಗ್ಗದಲ್ಲೇ ಸಿಗಲಿದೆ ಪೈಲಟ್​ ತರಬೇತಿ | ಯಾವಾಗ

By Prathapa thirthahalli
kannada movie review
STATE NEWSUncategorized

kannada movie review :  ಯಾವ ಮಲಯಾಳಂ ಸಿನಿಮಾಕ್ಕೂ ಸರಿಸಾಟಿಯಿಲ್ಲದೆ ಮೂಡಿಬಂದಿದೆ  ಆರ್ಟಿಕಲ್ 19,20,21 ಸಿನಿಮಾ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up