ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ : ಹೇಗಿದೆ ವಾತಾವರಣ  

ಹಂಚಿಕೊಳ್ಳಿ
WhatsApp Facebook X Telegram
Hindu mahasabha shivamogga
Hindu mahasabha shivamogga

Hindu mahasabha shivamogga : ಶಿವಮೊಗ್ಗ: ಹಿಂದೂ ಮಹಾಸಭಾ ವತಿಯಿಂದ ನಗರದ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ರಾಜಬೀದಿ ಉತ್ಸವಕ್ಕೆ  ಅದ್ಧೂರಿ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ  ಶಾಸಕ ಎಸ್.ಎನ್. ಚನ್ನಬಸಪ್ಪ  ಆರ್‌ಎಸ್‌ಎಸ್ ಮುಖಂಡ ಪಟ್ಟಾಭಿ, ಹಿಂದೂ ಮಹಾಸಭಾ ಸಂಘಟನೆಯ ಪ್ರಮುಖರು ಮತ್ತು ಸಮಿತಿಯ ಗಣ್ಯರು ಉಪಸ್ಥಿತರಿದ್ದರು. ನಗರದಾದ್ಯಂತ ಕೇಸರಿ ಧ್ವಜಗಳು ಮತ್ತು ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಮೆರವಣಿಗೆ ಸಮಿತಿಯು ನಗರದ ನಾಲ್ಕು ಪ್ರಮುಖ ಪ್ರವೇಶದ್ವಾರಗಳನ್ನು ಆಕರ್ಷಕವಾಗಿ ಅಲಂಕರಿಸಿತ್ತು. ಗಾಂಧಿ ಬಜಾರ್‌ನಲ್ಲಿ ‘ಸಮುದ್ರ ಮಂಥನ’ ಮಾದರಿಯ ಮಹಾದ್ವಾರ, ನೆಹರು ರಸ್ತೆಯಲ್ಲಿ ‘ಆಪರೇಷನ್ ಸಿಂಧೂರ್’ ಮಹಾದ್ವಾರ ಮತ್ತು ಶಿವಪ್ಪನಾಯಕ ಪ್ರತಿಮೆ ಎದುರು ‘ಶ್ರೀಕ್ಷೇತ್ರ ಧರ್ಮಸ್ಥಳ’ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.ಅದ್ದೂರಿ ಮೆರವಣಿಗೆಯಲ್ಲಿ ಕಲಾತಂಡಗಳು, ಮಂಗಳ ವಾದ್ಯ, ಚಂಡೆ ಮೇಳ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿವೆ.

Hindu mahasabha shivamogga ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

ಗಣೇಶೋತ್ಸವ ಮತ್ತು ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಯು ನಗರದಾದ್ಯಂತ ಭಾರಿ ಭದ್ರತೆಯನ್ನು ಏರ್ಪಡಿಸಿದೆ. ಮೆರವಣಿಗೆ ಸಾಗುವ ಮಾರ್ಗದ ಹೆಜ್ಜೆ ಹೆಜ್ಜೆಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸುಮಾರು 20 ಡ್ರೋನ್ ಕ್ಯಾಮರಾಗಳು, 100 ವಿಡಿಯೋಗ್ರಾಫರ್‌ ಇದರ ಜೊತೆಗೆ, ನಗರದ ಗಲ್ಲಿ ಗಲ್ಲಿಗಳಲ್ಲೂ ಸಿಸಿಟಿವಿ ಕ್ಯಾಮರಾಗಳ ಮೂಲಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ

ಭದ್ರತೆಗಾಗಿ ಐವರು ಎಸ್ಪಿಗಳು, ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 21 ಪೊಲೀಸ್ ಉಪಾಧೀಕ್ಷಕರು, 58 ಪೋಲಿಸ್ ನಿರೀಕ್ಷಕರು, 263 ಪೊಲೀಸ್ ಉಪನಿರೀಕ್ಷಕರು, 114 ಸಹಾಯಕ ಪೊಲೀಸ್ ನಿರೀಕ್ಷಕರು, ಮತ್ತು 2,259 ಪೊಲೀಸ್ ಹೆಡ್ ಕಾನ್ಸ್‌ಟೇಬಲ್, ಕಾನ್ಸ್‌ಟೇಬಲ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇದರ ಜೊತೆಗೆ, 1 ರಾಫ್ ಕಂಪನಿ, 15 ಡಿಎಆರ್ ತುಕಡಿ ಮತ್ತು 20 ಕೆಎಸ್ಆರ್.ಪಿ ತುಕಡಿಗಳು ಕೂಡ ಭದ್ರತಾ ಕಾರ್ಯದಲ್ಲಿ ತೊಡಗಿದ್ದಾರೆ.

Hindu mahasabha shivamogga
Hindu mahasabha shivamogga

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor