ಬೀದರ್​ನಲ್ಲಿ PSI ಆಗಿದ್ದ ಶಿವಮೊಗ್ಗದ ಜಗದೀಶ್​ ನಾಯ್ಕ್​ ನಿಧನ ! ಏನಾಗಿತ್ತು?

Jagdish Naik of Shimoga, who was PSI in Bidar, passed away!ಬೀದರ್​ನಲ್ಲಿ PSI ಆಗಿದ್ದ ಶಿವಮೊಗ್ಗದ ಜಗದೀಶ್​ ನಾಯ್ಕ್​ ನಿಧನ !

ಬೀದರ್​ನಲ್ಲಿ PSI ಆಗಿದ್ದ ಶಿವಮೊಗ್ಗದ ಜಗದೀಶ್​ ನಾಯ್ಕ್​ ನಿಧನ ! ಏನಾಗಿತ್ತು?

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’

ಪೊಲೀಸ್ ಡಿಪಾರ್ಟ್​ಮೆಂಟ್​ನಲ್ಲಿ ಪಿಎಸ್​ಐ ಆಗಿ ಕೆಲಸ ಮಾಡುತ್ತಿದ್ದ  ಶಿವಮೊಗ್ಗ ಜಿಲ್ಲೆಯವರಾದ ಜಗದೀಶ್ ನಾಯ್ಕ್​ ಎಂಬವರು ಸಾವನ್ನಪ್ಪಿದ್ದಾರೆ. 

ಬೀದರ್ ಜಿಲ್ಲೆ ಔರಾದ್​ ನ​​ ಗಾಂಧಿಗಂಜ್ ಪೊಲೀಸ್ ಸ್ಟೇಷನ್​ ಆಗಿ ಅವರು ಕೆಲಸ ಮಾಡುತ್ತಿದ್ದರು. ಶಿವಮೊಗ್ಗದ ನಳೀನ್ ಕೊಪ್ಪ ಗ್ರಾಮದ ಜಗದೀಶ್ ನಾಯ್ಕ್​ 2009 ರಲ್ಲಿ ಪೇದೆಯಾಗಿ ಡಿಪಾರ್ಟ್​ಮೆಂಟ್ ಸೇರಿದ್ದರು. ಆನಂತರ  2015 ರಲ್ಲಿ RSI ಆಗಿ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಬಳಿಕ 2018 ಪಿಎಸ್ಐ ಸಿವಿಲ್ ಆಗಿ ಬೀದರ್ ಜಿಲ್ಲೆಯ ಔರಾದ್ ಗೆ ತೆರಳಿದ್ದರು. 

ಕ್ಯಾನ್ಸರ್​ಗೆ ತುತ್ತಾಗಿದ್ದ ಇವರು ಅದರಿಂದ ಹೊರಬರಲಾಗದೇ ಸಾವನ್ನಪ್ಪಿದ್ದಾರೆ. ತಂದೆ ತಾಯಿ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಜಗದೀಶ್ ನಾಯ್ಕ್​ ಅಗಲಿದ್ದಾರೆ.  ಶಿಕಾರಿಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹೊಸೂರಿನಲ್ಲಿ ಪ್ರೌಢಶಾಲೆ ಸೇರಿದ್ದರು. ಆನಂತರ  ಪದವಿಯನ್ನ ದೂರ ಶಿಕ್ಷಣ ಮೂಲಕ ಪಡೆದಿದ್ದರು.   ಹೊಸಕೊಪ್ಪದ ಯುವತಿಯನ್ನ ಮದುವೆಯಾಗಿದ್ದರು. 

ಮೃತ  ಜಗದೀಶ್ ನಾಯ್ಕ ಅವರ ಅಂತ್ಯಕ್ರಿಯೆ  ಸ್ವ ಗ್ರಾಮ ನಳೀನ್​ಕೊಪ್ಪದಲ್ಲಿ ನಡೆಯಲಿದ್ದು, ಅಂತ್ಯಕ್ರಿಯೆಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ 
ಇನ್ನಷ್ಟು ಸುದ್ದಿಗಳು