indian army soldier :  ಆಪರೇಷನ್ ಸಿಂಧೂರ್ ಬಗ್ಗೆ ಸಿಂಧು ಹೇಳಿದ್ದೇನು

prathapa thirthahalli
Prathapa thirthahalli - content producer

indian army soldier : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಯುದ್ದ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸಿ, ತವರಿಗೆ ಮರಳಿದ ಹವಲ್ದಾರ್ ರಮೇಶ್ ಗೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು. 

ಅಭಿಮಾನಿಗಳು ರಮೇಶ್ ಹಾಗು ಸಿಂಧು ದಂಪತಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪತಿಯನ್ನು ಸನ್ಮಾನಿಸಿದ ಪರಿಯನ್ನು ಕಂಡು ಸಿಂಧು ಭಾವುಕತೆಯಿಂದ ಮಾತನಾಡಿದರು ತವರಿನಲ್ಲಿ ನನ್ನ ಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಕ್ಕೆ ಸಂತೋಷವಾಗಿದೆ. ನಮ್ಮ ಮನೆಯವರು ಒಬ್ಬರೇ ಅಲ್ಲ  ಅವರಂತೆ ಲಕ್ಷಾಂತರ ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ. ನಮ್ಮ ಭಾರತ ಮಹಿಳೆಯರ ಸಿಂಧೂರ ಅಳಿಸಿದವರಿಗೆ ದೇಶದ ಸೈನಿಕರು ತಿರುಗೇಟು ನೀಡಿದ್ದಾರೆ. ಆಪರೇಷನ್ ಸಿಂಧೂರ್ ನಲ್ಲಿ ನಮ್ಮ ಶಿವಮೊಗ್ಗದ ಮಂಜುನಾಥ್ ಸಾವನ್ನಪ್ಪಿರುವುದು ಬೇಸರದ ಸಂಗತಿ. ಏರ್ ಡಿಫೆನ್ಸ್​​ನಲ್ಲಿ ಹವಲ್ದಾರ್ ನಾಗಿ ನಮ್ಮ ಯಜಮಾನರು ಕರ್ತವ್ಯ ನಿರ್ಹಹಿಸುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ . ನಾನು ಸಾಮಾನ್ಯಳಂತೆ ನನ್ನ ಪತಿಯನ್ನು ಮದುವೆಯಾಗಿಲ್ಲ. ಸೈನಿಕನ ಹೆಂಡತಿಯಾಗಿ ,ನಾನು ಸೈನಿಕನಿಗಂತಲೂ ಧೈರ್ಯವಾಗಿರುವ ಹೆಣ್ಣು ಮಗಳು ಎಂದು ಹೇಳುವ ಮೂಲಕ ಸಿಂಧು ತನ್ನ ಪತಿಯ ಯುದ್ದ ಭೂಮಿಯ ಹೋರಾಟವನ್ನು  ಆತ್ಮ ವಿಸ್ವಾಸದಿಂದ ಸಮರ್ಥಿಸಿಕೊಂಡರು.

indian army soldier : ಪಾಕಿಸ್ತಾನದ ವಾಯುಸೇನಾ ವಾಹನಗಳನ್ನು ತಡೆಗಟ್ಟುವುದೇ ನಮ್ಮ ಕರ್ತವ್ಯವಾಗಿತ್ತು- ಹವಲ್ದಾರ್ ರಮೇಶ್ 

ಆಪರೇಷನ್ ಸಿಂಧೂರ್ ಕಾರ್ಯಚರಣೆ ಮುಗಿಸಿಕೊಂಡು ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬರುವಾಗ ಜನತೆ ಹಾಗು ಕಾಂಗ್ರೆಸ್​ನ ವಿಜಯಣ್ಣ ಆತ್ಮೀಯವಾಗಿ ಬರಮಾಡಿಕೊಂಡಿದ್ದು ತುಂಬಾ ಖುಷಿಯಿಯಾಗಿದೆ. ಸಿಂಧೂರ್ ಆರಪೇಷನ್ ಕಾಶ್ಮೀರದ ಪಹಲ್ಗಾಮ್ ಗೆ ಪ್ರವಾಸಿಗರು ಹೋಗಿದ್ದಾಗ ಉಗ್ರರು 26 ಮಂದಿಯನ್ನು ಹತ್ಯೆಗೈದಿದ್ದರು.ಭಾರತದ ಹಿಂದೂ ಮಹಿಳೆಯರ ಕುಂಕುಮ ಅಳಿಸಿದ್ದಕ್ಕಾಗಿ ಈ ಸಿಂಧೂರ್ ಆಪರೇಷನ್ ಕ್ರಿಯೇಟ್ ಮಾಡಲಾಯಿತು.ಕಾರ್ಯಾಚರಣೆಯಲ್ಲಿ ಉಗ್ರರ ಒಂಬತ್ತು ನೆಲೆಗಳನ್ನು ನಾಶಗೊಳಿಸಿದ್ದೇವೆ. ನಮ್ಮದು ಅಮೃತ್ ದ ಏರ್ ಡಿಫೆನ್ಸ್​​ ನಿಂದ ಕಾರ್ಯಾಚರಣೆ ಮಾಡಿದ್ದೆವು. ಆರ್ಮಿ ಏರ್ ಡಿಫೆನ್ಸ್ ನಲ್ಲಿ ಕಳೆದ 28 ವರ್ಷಗಳಿಂದ ಕೆಲಸ ಮಾಡುತ್ತಿದ್ದು. ಪಾಕಿಸ್ತಾನದಿಂದ ಆಗಸದಲ್ಲಿ ಬರುವ ವಾಯು ಸೇನೆ ವಾಹನಗಳನ್ನು  ತಡೆಯುವ ಕೆಲಸ ನಾವು ಮಾಡಬೇಕಿತ್ತು ಎಂದರು.

indian army soldier ಯೋಧ ರಮೇಶ್​ ಕುಟುಂಬ
indian army soldier ಯೋಧ ರಮೇಶ್​ ಕುಟುಂಬ

 

 

Share This Article