ಹಾವೆಂದರೆ ಯಾರಿಗೆ ಭಯ ಇರಲ್ಲ ಹೇಳಿ. ಹಾವು ನೂರು ಮೀಟರ್ ದೂರದಲ್ಲಿದ್ದರೂ ಅದನ್ನು ನೋಡಿದರೆ ನಮಗೆ ಒಮ್ಮೆಲೆ ಎದೆ ಝಲ್ ಎನ್ನುತ್ತದೆ. ಆದರೆ ಇಲ್ಲೊಬ್ಬ ಯುವಕ ತನ್ನ ಮೇಲೆ ಬೃಹತ್ ಗಾತ್ರದ ಹಾವು ಹರಿದು ಹೋದರೂ ಸಹ ಅದಕ್ಕೆ ಭಯ ಪಡದೆ ಅದನ್ನು ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.facebook.com/reel/1725486484712863

ವಿಡಿಯೋದಲ್ಲಿ ಏನಿದೆ
ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬ ಬೆಡ್ ಮೇಲೆ ಮಲಗಿರುತ್ತಾನೆ. ಆಗ ಕಾಳಿಂಗ ಸರ್ಪವೊಂದು ಆತನ ಬಳಿ ಬರತ್ತದೆ. ಅಷ್ಟೇ ಅಲ್ಲದೆ ಆತನ ಮೇಲೆಯೇ ಹರಿಯಲು ಪ್ರಾರಂಭಿಸುತ್ತದೆ.. ಇದರಿಂದ ಚೂರೂ ವಿಚಲಿತನಾಗದ ಯುವಕ ಅದನ್ನೆಲ್ಲಾ ತಾಳ್ಮೆಯಿಂದಲೇ ಗಮನಿಸುತ್ತಿರುತ್ತಾನೆ, ಹಾಗೆಯೇ ಅದನ್ನು ವಿಡಿಯೋ ಕೂಡಾ ಮಾಡಿದ್ದಾನೆ. ತಾಳ್ಮೆ ಹಾಗು ದೈರ್ಯವೊಂದಿದ್ದರೆ ಜೀವನದಲ್ಲಿ ಯಾವುದೇ ಕಷ್ಟವನ್ನು ಸುಲಭವಾಗಿ ಎದುರಿಸಬಹುದು ಎಂಬುದಕ್ಕೆ ಈ ವಿಡಿಯೋ ನಿದರ್ಶನವಾಗಿದೆ.