kimmane ratnakar : ಕೆಪಿಸಿಸಿ ನಿಯೋಗಕ್ಕೆ ಕಿಮ್ಮನೆ ರತ್ನಾಕರ್ ನೇಮಕ | ಡಿಕೆ ಶಿವಕುಮಾರ್ ಆದೇಶ
ಉಡುಪಿ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಪ್ರಕರಣಗಳ ಬಗ್ಗೆ ತಿಳಿದುಕೊಳ್ಳಲು ಕೆಪಿಸಿಸಿ ವತಿಯಿಂದ ನಿಯೋಗವೊಂದನ್ನು ಕಳುಹಿಸಲಾಗಿದೆ. ಈ ನಿಯೋಗಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ನೇಮಕ ಮಾಡಲಾಗಿದೆ.
ಕಿಮ್ಮನೆ ರತ್ನಾಕರ್ರವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ಕಿಮ್ಮನೆ ರತ್ನಾಕರ್ ಸೇರಿದಂತೆ ಇತರರು ಘಟನೆ ನಡೆದ ಪ್ರದೇಶಗಳಲ್ಲಿ ಬೇಟಿ ನೀಡಬೇಕಿದೆ. ಹಾಗೆಯೇ ಅಲ್ಲಿನ ಸಂತ್ರಸ್ತ ಕುಟುಂಬಗಳು ಹಾಗೂ ಎಲ್ಲ ವರ್ಗದ ಜನರೊಂದಿಗೆ ಚರ್ಚಿಸಿ ಕೆಪಿಸಿಸಿಗೆ ವರದಿ ಸಲ್ಲಿಸಬೇಕಿದೆ.