shivamogga rcb final celebration : ಬಾನೆತ್ತರದಲ್ಲಿ ಪಟಾಕಿ ಸಿಡಿಯಿತು, ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಕೋಟ್ಯಾಂತರ ಅಭಿಮಾನಿಗಳು ಅಷ್ಟೇ ಅಲ್ಲದೆ ಕ್ರೀಡಾಪಟುಗಳು ಸಹ ಮೈದಾನದಲ್ಲಿ ಆನಂದ ಬಾಷ್ಪವನ್ನು ಸುರಿಸಿದರು. ಇದಕ್ಕೆ ಸಾಕ್ಷಿಯಾಗಿದ್ದು ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ. ಹೌದು ನಿನ್ನೆ ನಡೆದ ಐಪಿಎಲ್ ಫೈನಲ್ ಮ್ಯಾಚ್ನಲ್ಲಿ ಆರ್ಸಿಬಿ ಪಂಜಾಬ್ ತಂಡವನ್ನು ಮಣಿಸಿ ತನ್ನ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ರಾಜ್ಯದೆಲ್ಲೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದರು ಅದೇ ರೀತಿ ಶಿವಮೊಗ್ಗದಲ್ಲಿಯೂ ಸಹ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು.

shivamogga rcb final celebration : ಶಿವಮೊಗ್ಗದಲ್ಲಿ ಹೇಗಿತ್ತು ಸಂಭ್ರಮಾಚಣೆ
ಶಿವಮೊಗ್ಗದ ವಿವಿದ ಬಾರ್ ಹಾಗೂ ಕ್ಲಬ್ಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾರಿನಲ್ಲಿ ಕ್ರಿಕೆಟ್ನ್ನು ವೀಕ್ಷಿಸಲೆಂದೇ ನೂರಾರು ಜನ ಭಾಗವಹಿಸಿದ್ದರು,. ಬಹುತೇಕ ಟೇಬಲ್ಗಳು ಭರ್ತಿಯಾಗಿದ್ದವು. ಟೇಬಲ್ನಲ್ಲಿ ಅಭಿಮಾನಿಗಳು ಮದ್ಯದೊಂದಿಗೆ ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದರು. ಆರ್ಸಿಬಿ ಗೆಲ್ಲುವ ಸಮಯದಲ್ಲಿ ನಗರದೆಲ್ಲೆಡೆ ಪಟಾಕಿ ಸದ್ದು ಕೇಳಿಸಲು ಆರಂಭಿಸಿದವು, ಆಭಿಮಾನಿಗಳ ಹರ್ಷ್ಟೋದ್ಘಾರ ಮುಗಿಲು ಮುಟ್ಟಿತು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು. ಹಾಗೆಯೇ ನೆಹರು ರಸ್ತೆಯಲ್ಲಿ ವಿಜಯೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.


ಸಂಭ್ರಮಾಚರಣೆಯ ವೇಳೆ ಅನೇಕ ಅನಾಹುತಗಳು ನಡೆಯಿತು. ಉಷಾ ನರ್ಸಿಂಗ್ ಹೋಮ್ ಸಮೀಪ ಬೈಕ್‌ಗಳ ನಡುವೆ ಡಿಕ್ಕಿಯಾಗಿ ಆರ್‌ಸಿಬಿ ಅಭಿಮಾನಿ ಅಭಿ (21) ಎಂಬಾತ ಸಾವನ್ನಪ್ಪಿದನು. ಹಾಗೆಯೇ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಕಾಟನ್ ಜಗದೀಶ್ ಎಂಬುವವರು ನಿಲ್ಲಿಸಿದ್ದ ಕಾರಿಗೆ ರಾತ್ರಿ ವಾಹನ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಮುಂಬಾಗ ಜಖಂಗೊಂಡಿದೆ.

ಹೀಗೆ ನಗರದ ವಿವಿದೆಡೆ ಆರ್ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಎಲ್ಲರೂ ಸಹ ಎಲ್ಲರೂ ಸಹ ಈ ಸಲ ಕಪ್ ನಮ್ದು ಎಂದು ಘೋಷಣೆ ಕೂಗಿದರು,