elephant in hulikal ghat : ಹುಲಿಕಲ್​ ಘಾಟಿ ಇಳಿದ ಒಂಟಿ ಕಾಡಾನೆ | ಮೊಬೈಲ್​ನಲ್ಲಿ ವಿಡಿಯೋ ಸೆರೆ

ಹಂಚಿಕೊಳ್ಳಿ
WhatsApp Facebook X Telegram
elephant in hulikal ghat
elephant in hulikal ghat ಹುಲಿಕಲ್​ ಘಾಟಿ ಇಳಿದ ಒಂಟಿ ಕಾಡಾನೆ

elephant in hulikal ghat : ಹುಲಿಕಲ್​ ಘಾಟಿ ಇಳಿದ ಒಂಟಿ ಕಾಡಾನೆ | ಮೊಬೈಲ್​ನಲ್ಲಿ ವಿಡಿಯೋ ಸೆರೆ

ಕಳೆದ ಒಂದು ವಾರದಿಂದ ತೀರ್ಥಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಒಂಟಿ ಕಾಡಾನೆ ಇದೀಗ ಹುಲಿಕಲ್​ನ ಬಾಳೆಬರೆ ಘಾಟಿಯಲ್ಲಿ ಪ್ರತ್ಯಕ್ಷವಾಗಿದೆ. ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಹೊಸಂಗಡಿ ದಿಕ್ಕಿನಲ್ಲಿ ಸಂಚರಿಸುತ್ತಿರುವ ಆನೆಯ ವಿಡಿಯೋವನ್ನು  ಮಾಸ್ತಿಕಟ್ಟೆ ಅರಣ್ಯ ಚೆಕ್‌ಪೋಸ್ಟ್ ಸಿಬ್ಬಂದಿ ಮತ್ತು ವಾಹನ ಸವಾರರು ಮೊಬೈಲ್‌ದಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ಹಿನ್ನಲೆ  ಸುತ್ತ ಮುತ್ತಲಿನ ಪ್ರದೇಶಗಳ ಶಾಲೆಗಳಿಗೆ ರಜೆ ಘೋಷಿಸಿದ್ದು, ಸಿದ್ದಾಪುರದಲ್ಲಿ ನಡೆಯುವ ಸಂತೆಯನ್ನು ರದ್ದು ಮಾಡಲಾಗಿದೆ.

elephant news today : ಹಾಸನ ಕಾಡಿನ ಆನೆ ಕಾರಿಡಾರ್‌ನಿಂದ ಬಂದ ಈ 12 ವರ್ಷದ ಗಂಡು ಆನೆ ಕೊಪ್ಪದ ಮೂಲಕ ಶಿವಮೊಗ್ಗ ಜಿಲ್ಲೆಗೆ ತೆರಳಿತ್ತು. ಕಾಲರ್‌ ಐಡಿ ಹೊಂದಿದ್ದ ಈ ಆನೆ ಡ್ಯಾಂನ ಮುಳುಗಡೆ ಪ್ರದೇಶದ ಹಿನ್ನೀರಿನ ಕಾಡು ಮಾರ್ಗಗಳಲ್ಲಿ ಸಾಗಿ ತೀರ್ಥಹಳ್ಳಿ ವ್ಯಾಪ್ತಿಗೆ ತಲುಪಿತ್ತು. ನಂತರ ನಗರ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಮೂರು ದಿನಗಳ ಕಾಲ ಸಂಚರಿಸಿತ್ತು. ಮಂಗಳವಾರ ಸಂಜೆ ಮಾಸ್ತಿಕಟ್ಟೆ ಚೆಕ್‌ಪೋಸ್ಟ್‌ ದಾಟಿ ಹೊಸಂಗಡಿ ಕಡೆಗೆ ಹೊರಟ್ಟಿತ್ತು.

 

View this post on Instagram

 

A post shared by KA on line (@kaonlinekannada)

elephant in hulikal ghat ಇದೀಗ ಒಂಟಿ ಕಾಡಾನೆ ಬಾಳೆಬರೆ ಶ್ರೀ ಚಂಡಿಕಾಂಬಾ ದೇವಸ್ಥಾನದ ಹತ್ತಿರದ  ಹೆದ್ದಾರಿಯಲ್ಲಿ ಕಾಣಿಸಿಕೊಂಡಿದ್ದು, ಆನೆ ಸಾಗುವ ದೃಶ್ಯವನ್ನು ನೋಡಿದ ಜನರು ಭಯಭೀತರಾಗಿದ್ದಾರೆ.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor