car accident in maluru : ಪ್ರೀಸಿಸಿ ಮದುವೆಯಾಗಿ ಹಳ್ಳಿಗೆ ಬಂದ ಪ್ರೇಮಿಗಳು | 30 ವರ್ಷಗಳ ನಂತರ ಏನಾಯ್ತು
ಪ್ರೀತಿಸಿ ಮದುವೆಯಾಗಿ ಬದುಕು ಅರಸಿಕೊಂಡು ಹಳ್ಳಿಗೆ ಬಂದಿತ್ತು ಆ ಕುಟುಂಬ. ನಾನು ಬಡವ ನೀನು ಬಡವಿ ನಮ್ಮ ಪ್ರೀತಿಗೆ ಬಡತನವಿಲ್ಲ ಎಂಬಂತೆ ಮಾಳೂರು ಗ್ರಾಮದ ಬಾಡಿಗೆ ಮನೆಯಲ್ಲಿ ನೆಲೆಸಿತ್ತು ಆ ಕುಟುಂಬ..ಹೌದು, ಲಕ್ಷ್ಮೀ ಹಾಗು ವೆಂಕಟೇಶ್ ಕಳೆದ ಮೂವತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ದೂರದೂರಿನಲ್ಲಿ ನೆಲೆಸುವ ಸಲುವಾಗಿ ಹಳ್ಳಿಯತ್ತ ಹೆಜ್ಜೆ ಹಾಕಿದ್ದರು. ಮಾಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಹೊಸಜೀವನ ಆರಂಭಿಸಿದ ದಂಪತಿ ಬದುಕು ಹಸನಾಗಿಯೇ ಇತ್ತು..ವೆಂಕಟೇಶ್ ತೋಟ ಗದ್ದೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
car accident in maluru ದಂಪತಿಗೆ ಇಬ್ಬರು ಮಕ್ಕಳಿದ್ದು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲಕ್ಷ್ಮೀಗೆ ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆ ವೈದ್ಯರು ನಡೆಯುವಂತೆ ಶಿಫಾರಸ್ಸು ಮಾಡಿದ್ದರು..ಅಂತೆಯೇ ಲಕ್ಷ್ಮೀ ಇಂದು ಮುಂಜಾನೆ ವಾಕಿಂಗ್ ಮಾಡಲು ಮನೆಯಿಂದ ಹೊರನಡೆದಿದ್ದಾರೆ ಅಷ್ಟೆ. ಮನೆ ಸನಿಹವೆ ರಸ್ತೆ ತಿರುವಿನಲ್ಲಿ ಸಾಗುವಾಗ ಶಿವಮೊಗ್ಗ ಮಾರ್ಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ..ಲಕ್ಷ್ಮೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ…ಪತ್ನಿ ಮನೆಯಿಂದ ಹೊರಟಾಗ ಪತಿ ಇನ್ನೂ ಹಾಸಿಗೆಯಲ್ಲೇ ಮಲಗಿದ್ದರು. ಹೊರಗಿನವರು ಫೋನಾಯಿಸಿ ಮಾಹಿತಿ ನೀಡಿದಾಗ, ಮನೆ ಸನಿಹವೇ ಪತ್ನಿ ಸಾವಿಗೀಡಾದ ಸುದ್ದಿ ಕೇಳಿ ಕಂಗಲಾಗಿದ್ದಾರೆ. ಮಾಳೂರು ಜನತೆ ಲಕ್ಷ್ಮೀ ಸಾವಿಗೆ ಕಂಬನಿ ಮಿಡಿದಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.