ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಮಾರಿಕಾಂಬಾ ಜಾತ್ರೆಯ (Maari jatre) ನಡುವೆ ಮಾನವೀಯತೆ ಮೆರೆಯುವಂತಹ ಘಟನೆಯೊಂದು ನಡೆದಿದೆ.ಮಗುವೊಂದರ ತುರ್ತು ಚಿಕಿತ್ಸೆಗಾಗಿ ತೆರಳುತ್ತಿದ್ದ ಆ್ಯಂಬುಲೆನ್ಸ್ಗೆ ಸಾಗರಿಕರು ಜೀರೋ ಟ್ರಾಫಿಕ್ ಮಾದರಿಯಲ್ಲಿ ದಾರಿ ಬಿಟ್ಟು ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ.
ನಡೆದಿದ್ದೇನು?
ನಿನ್ನೆ ಭಾನುವಾರ ಜನರ ಸಂತೆಯೇ ಮಾರಿಜಾತ್ರೆಯಲ್ಲಿ ನೆರದಿತ್ತು. ಇದರ ನಡುವೆ ಶಿರಸಿಯಿಂದ ಶಿವಮೊಗ್ಗಕ್ಕೆ ಮಗುವೊಂದನ್ನ ಖಾಸಗಿ ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವಿಚಾರ ತಿಳಿಯುತ್ತಲೇ ಪೊಲೀಸರು ಸೇರಿದಂತೆ ಸ್ಥಳೀಯರು ಹಾಗೂ ಆ್ಯಂಬುಲೆನ್ಸ್ (Ambulance) ಡ್ರೈವರ್ಗಳು ಹೈವೆ ರಸ್ತೆಯಲ್ಲಿ ನಿಂತು ಸಂಚಾರ ಕ್ಲೀಯರ್ ಮಾಡತೊಡಗಿದರು. ಜೀರೋ ಟ್ರಾಫಿಕ್ನ ರೀತಿಯಲ್ಲಿ ವಾಹನ ಬರುವ ಮಾರ್ಗದಲ್ಲಿ ಟ್ರಾಫಿಕ್ ಕ್ಲೀಯರ್ ಮಾಡಲಾಯ್ತು.ಹೀಗಾಗಿ ವಾಹನಗಳ ರಶ್ನ ನಡುವೆ ಆ್ಯಂಬುಲೆನ್ಸ್ ನಿಗದಿತ ಸಮಯದಲ್ಲಿ ಶಿವಮೊಗ್ಗ ತಲುಪಿತು.ಶಿರಸಿ ಮೂಲದ ದಂಪತಿಯ ಮಗುವಿಗೆ ಮೆದುಳು ಸಂಬಂಧಿ ಕಾಯಿಲೆ ಬಾಧಿಸುತ್ತಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗುತ್ತಿತ್ತು.
*ರಾಜ್ಯದ ಕೊಡಗು-ಕೇರಳ ಬಾರ್ಡರ್ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್ ತಂಡ*
JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!
ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
